ತುಮಕೂರು

ಮಟ್ಕಾ ದಂಧೆ ಮತ್ತೆ ತಲೆ ಎತ್ತಿದರೆ ಕಠಿಣ ಕ್ರಮ'

Published On :

ಪಾವಗಡ: ಜನಸಾಮಾನ್ಯರು ಸೇರಿದಂತೆ ಬಡಕುಟುಂಬಗಳ ಶಾಂತಿ ನೆಮ್ಮದಿಗಾಗಿ ಪಟ್ಟಣದಲ್ಲಿ ಮಟ್ಕಾ ದಂಧೆ ಸಂಪೂರ್ಣ ಬಂದ್ ಮಾಡಲಾಗಿದ್ದು  ಮತ್ತೆ ತಲೆ ಎತ್ತಿದರೆ ಕಠಿಣ ಕ್ರಮ ಜರಿಗಿಸುವುದಾಗಿ ಪಾವಗಡ ಪೊಲೀಸ್ ಠಾಣೆ ಪಿಎಸ್ಐ ರಾಮಕೃಷ್ಣಯ್ಯ ಎಚ್ಚರಿಸಿದ್ದಾರೆ.
ಈ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು ಮಟ್ಕಾ ದಂಧೆ ವಿರುದ್ಧ ಪೊಲೀಸ್ ಇಲಾಖೆ ನಿರಂತರ ಕಣ್ಣು ಇಟ್ಟಿದ್ದು ಈ ದಂಧೆಯಲ್ಲಿ ನಿರತರಾದವರ ವಿರುದ್ಧ ಈಗಾಗಲೇ ಸಾಕಷ್ಟು ಪ್ರಕರಣಗಳು ದಾಖಲಾಗಿವೆ ಎಂದರು. ಪಾವಗಡ ವೃತ್ತ ಸಿಪಿಐ ಭಾನುಪ್ರಕಾಶ್ ಅವರ ನೇತೃತ್ವದಲ್ಲಿ ಪೊಲೀಸ್ ತಂಡ ರಚಿಸಿ ಪಟ್ಟಣದಲ್ಲಿ ಶೋಧ ಮಾಡುವ ಮೂಲಕ ಕಳೆದ 2ದಿನಗಳಿಂದ ಮಟ್ಕಾ ದಂಧೆಗೆ ಕಡಿವಾಣ ಹಾಕಲಾಗಿದೆ ಎಂದ ಅವರು ನಮ್ಮ ವ್ಯಾಪ್ತಿಯಲ್ಲಿ ಕದ್ದು ಮುಚ್ಚಿ ಏನಾದರೂ ಮಟ್ಕಾ ದಂಧೆ ಮುಂದುವರಿದರೆ ಆ ದಂಧೆಯ ರೂವಾರಿಗಳ ವಿರುದ್ಧ ಕ್ರಮ ಜರುಗಿಸಿ ಕಾನೂನು ರೀತ್ಯ ಗಡಿಪಾರು ಮಾಡುವುದಾಗಿ ಎಚ್ಚರಿಸಿದರು. ಈ ದಂಧೆಗೆ ಪ್ರತಿದಿನ ಅನೇಕ ಕುಟುಂಬಗಳು ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಕ್ರಮಕ್ಕೆ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.