ಪ್ಯಾಸೆಂಜರ್ ಆಟೋ ಮರಕ್ಕೆ ಡಿಕ್ಕಿ: 7 ಮಂದಿಗೆ ತೀವ್ರ ಗಾಯ
ಕ.ಪ್ರ.ವಾರ್ತೆ ಪಾವಗಡ ಮೇ 28
ರಸ್ತೆ ತಿರುವೊಂದರಲ್ಲಿ ಪ್ಯಾಸೆಂಜರ್ ಆಟೋವೊಂದು ಮರಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾದ ಪರಿಣಾಮ ಆಟೋದಲ್ಲಿದ್ದ 7ಮಂದಿಗೆ ತೀವ್ರ ಗಾಯಗಳಾಗಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಈ ಘಟನೆ ಮಂಗಳವಾರ ಸಂಜೆ ಪಟ್ಟಣದ ಚಳ್ಳಕೆರೆ ರಸ್ತೆ ಕ್ರಾಸ್ನಲ್ಲಿ ನಡೆದಿದೆ.
ತಾ.ಬಿ.ಅಚ್ಚಮ್ಮನಹಳ್ಳಿಯ ಹನುಮಕ್ಕ (45)ವೆಂಕಟರಮಣಪ್ಪ (45)ನಾಗಮ್ಮ (30)ಮದ್ದಿಬಂಡೆ ಗಂಗಪ್ಪ (75) ಹರೀಶ್ (25) ನಾರಾಯಣಸ್ವಾಮಿ (50)ಉಹಾ (23)ಎಂಬುವರಿಗೆ ತೀವ್ರಗಾಯಗಾಳಾಗಿದ್ದು ಇದರಲ್ಲಿ ಹನುಮಕ್ಕ ಮತ್ತು ಉಹಾ ಎಂಬುವರ ಸ್ಥಿತಿ ಗಂಭೀರವಾಗಿದ್ದ ಕಾರಣ ಸರ್ಕಾರಿ ವೈದ್ಯರ ಸಲಹೆ ಮೇರೆಗೆ ತುರ್ತುವಾಹನದಲ್ಲಿ ಬೆಂಗಳೂರು ನಿಮಾಸ್ಸ್ಗೆ ಕರೆದೊಯ್ಯಲಾಗಿದೆ. ತಾ.ಸಮೀಪದ ಅಚ್ಚಮ್ಮನಹಳ್ಳಿ ಗ್ರಾಮಕ್ಕೆ ತೆರಳುತ್ತಿರುವಾಗ ಪಟ್ಟಣದ ಹೊರವಲಯದ ರಸ್ತೆ ತಿರುವಿನಲ್ಲಿ ಎದುರುಗಡೆಯಿಂದ ವೇಗವಾಗ ಬರುತ್ತಿದ್ಧ ಟಿವಿಎಸ್ ದ್ವಿಚಕ್ರ ವಾಹನಕ್ಕೆ ಸೈಡ್ ಕೊಡಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ಹುಣಿಸೇ ಮರವೊಂದಕ್ಕೆ ಆಟೋ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿರುವುದಾಗಿ ತಿಳಿದಿದೆ. ಗಾಯಾಳುಗಳು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಳಕ್ಕೆ ಪಾವಗಡ ಠಾಣಾ ಪಿಎಸ್ಐ ರಾಮಕೃಷ್ಣಪ್ಪ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

