'ಕನಕರ ತತ್ವಾದರ್ಶ ಅಳವಡಿಸಿಕೊಳ್ಳಿ'
ತಿಪಟೂರು: ಕನಕದಾಸರು ಹಲವು ಕೃತಿಗಳು ಮತ್ತು ಕೀರ್ತನೆಗಳ ಮೂಲಕ ಸಮಾಜಕ್ಕೆ ಸಮಾನತೆಯ ಸಂದೇಶ ಸಾರಿದರು. ಇವರ ತತ್ವಾದರ್ಶಗಳನ್ನು ಎಲ್ಲರೂ ಅಳವಡಿಸಿಕೊಂಡರೆ ಜಯಂತಿಗೆ ಅರ್ಥಬರುತ್ತದೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಬಿ. ವಿರೂಪಾಕ್ಷ ತಿಳಿಸಿದರು.
ನಗರದ ಎಸ್.ವಿ.ಪಿ ಪದವಿ ಪೂರ್ವ ಕಾಲೇಜು ಹಾಗೂ ಸುಮತಿ ವಿದ್ಯಾಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿಯನ್ನು ಕುರಿತು ಮಾತನಾಡಿದ ಅವರು ಜೀವನದುದ್ದಕ್ಕು ಸಂಕಷ್ಟಗಳನ್ನು ಎದುರಿಸುತ್ತಾ ಬಂದ ಕನಕದಾಸರು ಸಮಾಜದ ಜಾತಿ ವ್ಯವಸ್ಥೆಯನ್ನು ವಿರೋಧಿಸಿ ಎಲ್ಲರೂ ಒಂದೇ ಎಂಬ ಭಾವನೆಗಳನ್ನು ಬೆಳೆಸುವತ್ತ ಹೋರಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಪ್ರಾಂಶುಪಾಲ ಜಿ.ಕುಮಾರಯ್ಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ದೇವರು ಮನುಷ್ಯನನ್ನು ಸೃಷ್ಟಿಸುತ್ತಾನೆ. ಮನುಷ್ಯ ಜಾತಿಯನ್ನು ಸೃಷ್ಟಿಸುತ್ತಾನೆ. ಮನುಷ್ಯನಾದವನು ದೈವಭಕ್ತಿಯ ಮಹಿಮೆಯನ್ನು ತುಂಬಿಕೊಂಡು ಮೆರೆಯಬೇಕು. ಅಂತಹ ಅಪರೂಪದ ಆದಿಕೇಶವನ ಆರಾಧಕನಾಗಿ ಕೀರ್ತನ ಸಾಹಿತ್ಯದಲ್ಲಿ ಬೆಳಗಿದವರೇ ಭಕ್ತ ಕನಕದಾಸರು ಎಂದರು. ವಿದ್ಯಾರ್ಥಿಗಳಾದ ಅರ್ಪಿತ, ಗೌತಮ್ಕುನಕದಾಸರ ಕುರಿತು ಮಾತನಾಡಿದರು. ಶಿಕ್ಷಕಿ ನಾಗರತ್ನಮ್ಮ, ರೂಪ ಮತ್ತು ಶಶಾಂಕ್ ಕನಕದಾಸರ ಕೀರ್ತನೆಗಳನ್ನು ಹಾಡಿದರು. ಎಸ್.ವಿ.ಪಿ ಹಿರಿಯ ಶಿಕ್ಷಕ ಹಾಲಪ್ಪ, ಸುಮತಿ ಶಾಲೆಯ ಮುಖ್ಯ ಶಿಕ್ಷಕಿ ಎಚ್.ಕೆ. ಪದ್ಮಾಕ್ಷಮ್ಮ, ಉಪನ್ಯಾಸಕ ಕೆ.ಎನ್. ರೇಣುಕಯ್ಯ, ದೈಹಿಕ ಶಿಕ್ಷಕ ಬಿ.ಆರ್. ಉದಯ್ ಶಂಕರ್ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

