ಬಾಲಕಿಗೆ ಐದು ಬಾರಿ ಕಚ್ಚಿದ ಹಾವು!
ಕುಣಿಗಲ್: ಕಳೆದ ಕೆಲದಿನದಿಂದ ಹಾವೊಂದು ಬಾಲಕಿಗೆ ಐದು ಬಾರಿ ಕಚ್ಚಿರುವ ಕುತೂಹಲ ಪ್ರಕರಣ ಬೆಳಕಿಗೆ ಬಂದಿದೆ. ಪದೇ ಪದೇ ಅದೇ ಹಾವು ಬಾಲಕಿಯನ್ನೇ ಹುಡುಕಿಕೊಂಡು ಹೋಗಿ ಕಚ್ಚುತ್ತಿರುವ ವಿಚಿತ್ರ ಘಟನೆ ಇಲ್ಲಿನ ವೆಂಕನಾಯಕನಪಾಳ್ಯದಲ್ಲಿ ನಡೆದಿದೆ.
ಕೊತ್ತಗೆರೆಹೋಬಳಿಯ ಕಳಸೀಪಾಳ್ಯ ಗ್ರಾಮದ ಸಮೀಪದ ವೆಂಕನಾಯಕನಪಾಳ್ಯದಲ್ಲಿ, ರಾಮಿರೆಡ್ಡಿ ಮನೆಯಲ್ಲಿ ವಾಸವಾಗಿರುವ ವಿದ್ಯಾ (15) ಪದೇ ಪದೇ ಹಾವಿನ ಕಡಿತಕ್ಕೆ ಒಳಗಾಗುತ್ತಿರುವ ಹುಡುಗಿ. ಈಕೆಗೆ ತಂದೆಇಲ್ಲ, ಅಜ್ಜನಾದ ರಾಮಿರೆಡ್ಡಿ ಮನೆಯಲ್ಲಿ ವಾಸವಾಗಿದ್ದಾಳೆ. ಹತ್ತನೆ ತರಗತಿ ವ್ಯಾಸಂಗ ಮಾಡುತ್ತಿದ್ದು, ಅನಾರೋಗ್ಯದ ಕಾರಣ ಮನೆಯಲ್ಲಿದ್ದಾಳೆ. ಕಳೆದ ಎರಡು ವಾರಗಳ ಹಿಂದೆ, ಮನೆಯ ಸಮೀಪದ ಅಂಗಡಿಯಿಂದ ಸಾಮಾನು ತರಲು ಹೋಗುವಾಗ, ಅಕಸ್ಮಾತಾಗಿ ರಸ್ತೆಯಲ್ಲಿ ಮಲಗಿದ್ದ ಹಾವಿನ ಬಾಲ ತುಳಿದ ನಂತರ ಹಾವು ಕಚ್ಚಿದೆ. ಗ್ರಾಮಸ್ಥರು ಸಮೀಪದ ಮಡಿಕೆಹಳ್ಳಿಯಲ್ಲಿ ನಾಟಿ ಔಷಧ ಕೊಡಿಸಿ, ಉಪಚರಿಸಿದ ಮೇರಗೆ ಗುಣಮುಖಳಾದಳು.
ಕಳೆದ 15ರ ಶನಿವಾರದಂದು ಮಧ್ಯಾಹ್ನ ಎರಡು ಗಂಟೆ ಸಮಯದಲ್ಲಿ ಮನೆಯ ಬಳಿ ಇರುವಾಗ ಪುನಃ ಮತ್ತೆ ಅದೇ ಹಾವು ಕಡಿದಿದೆ. ಮಡಿಕೆಹಳ್ಳಿಗೆ ಕರೆದೊಯ್ದು ನಾಟಿ ಔಷಧಿ ಕೊಡಿಸಿ, ಚೇತರಿಸಿಕೊಂಡಳು. ಶನಿವಾರದ ಕಡಿತದ ಚೇತರಿಕೆಯಿಂದ ಹೊರಬರುವ ಹಂತದಲ್ಲೆ, ಸೋಮವಾರ ಹುಡುಗಿ ಶೌಚಗೃಹದಲ್ಲಿದ್ದಾಗ ಹಾವು ಪುನಃ ಕಚ್ಚಿದೆ. ನಾಟಿ ಔಷಧ ಕೊಡಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ನಂತರ ಗುರುವಾರ ತಾಯಿಯೊಂದಿಗೆ ತೋಟಕ್ಕೆ ತೆರಳಿದಾಗ ಮಧ್ಯಾಹ್ನದ ವೇಳೆಯಲ್ಲಿ ಕಡಿದ ಕಾರಣ, ಆಕೆಗೆ ಔಷಧಿ ಕೊಡಿಸಿ ಸುಧಾರಿಸಿಕೊಳ್ಳುವ ಹಂತದಲ್ಲಿ, ಶುಕ್ರವಾರ ಮಧ್ಯಾಹ್ನ ಮನೆಯಲ್ಲಿ ಮಲಗಿದ್ದಾಗ ಹಾವು ಕಚ್ಚಿದ್ದು ಮನೆಯವರು ಕಂಗಾಲಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

