ಅಪೂರ್ಣ ಮನೆ ಕೆಲಸ ಡಿ.28ರೊಳಗೆ ಮುಗಿಸಿ
ಕ.ಪ್ರ.ವಾರ್ತೆ ಪಾವಗಡ ನ,27:
ಗ್ರಾಪಂ ಮಟ್ಟದಲ್ಲಿ ವಿವಿಧ ಯೋಜನೆ ಅಡಿಯ ಅಪೂರ್ಣಗೊಂಡ ಮನೆಗಳನ್ನು ಡಿ. 28ರೊಳಗೆ ಪೂರ್ಣಗೊಳಿಸುವಂತೆ ಜಿಪಂ ಯೋಜನಾಧಿಕಾರಿ ಅದರ್ಶ ಕುಮಾರ್ ಪಿಡಿಒ ಮತ್ತು ಕಾರ್ಯದರ್ಶಿಗಳಿಗೆ ತಾಕೀತು ಮಾಡಿದರು.
ಬುಧವಾರ ಜಿಪಂ ವಸತಿ ಯೋಜನಾಧಿಕಾರಿ ಅದರ್ಶ ಕುಮಾರ್ ಪಾವಗಡಕ್ಕೆ ಭೇಟಿ ನೀಡಿ ತಾಪಂನಲ್ಲಿ ಏರ್ಪಾಡಿಸಿದ್ದ ಸಭೆಯಲ್ಲಿ ವಿವಿಧ ಯೋಜನೆ ಅಡಿಯ ಮನೆ ಹಂಚಿಕೆ ಕುರಿತು ಗ್ರಾಪಂ ಪಿಡಿಒ ಮತ್ತು ಕಾರ್ಯದರ್ಶಿಗಳಿಂದ ವಿವರ ಪಡೆದು ಅತೀ ಶೀಘ್ರ ಮನೆಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಎಚ್ಚರಿಸಿದರು. ಗ್ರಾಪಂ ಮಟ್ಟದಲ್ಲಿ ಮನೆಗಳ ಹಂಚಿಕೆಯಲ್ಲಿ ಗೊಂದಲಕ್ಕೆ ಅವಕಾಶ ನೀಡದೇ ಗ್ರಾಮ ಸಭೆಗಳು ಮತ್ತು ವಾರ್ಡ್ ಸಭೆ ನಡೆಸಿ ಅರ್ಹರಿಗೆ ಮನೆ ಸೌಲಭ್ಯ ತಲುಪಿಸಲು ಆಸಕ್ತಿ ವಹಿಸಬೇಕು. ಗ್ರಾಮ ಸಭೆಗಳ ಮೂಲಕ ಆಯ್ಕೆಯಾದ ಮನೆಗಳ ಹಂಚಿಕೆಯಲ್ಲಿ ಗೊಂದಲ ಸೃಷ್ಟಿಯಾದರೆ ಅಥವಾ ವಿರೋಧ ವ್ಯಕ್ತವಾದರೆ ಆ ಬಗ್ಗೆ
ತನಿಖೆ ಮಾಡಿ ಆಯ್ಕೆ ಪಟ್ಟಿಯಲ್ಲಿ ಷರ ಬರೆಯುವಂತೆ ಸೂಚಿಸಿದರು. ಮನೆಗಳ ಹಂಚಿಕೆ ಸಮರ್ಪವಾಗಿ ಅರ್ಹರಿಗೆ ತಲುಪಬೇಕು. ಹಾಗೆಯೇ ನಿಯಮಾನುಸಾರ ಆಯ್ಕೆಯಾದ ಮನೆಗಳಿಗೆ ವಸತಿ ಇಲಾಖೆಯ ಮಾರ್ಗ ಸೂಚಿ ಅನ್ವಯ ಪೂರ್ಣಗೊಂಡ ಮನೆಗಳಿಗೆ ಕಾಲನುಗುಣವಾಗಿ ವಿಳಂಬ ಮಾಡದೇ ಆನ್ಲೈನ್ ಕಂಪ್ಯೂಟರ್ನಲ್ಲಿ ಜಿಪಿಎಸ್ ನಿರ್ವಹಿಸಿ ಹಂತಹಂತವಾಗಿ ಮನೆ ಬಿಲ್ಲು ತಲುಪಿಸುವ ಮೂಲಕ ಫಲಾನುಭವಿಗಳಿಗೆ ಮನೆ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದರು. ತಾಪಂ ಇಒ ತಿಪ್ಪೇಸ್ವಾಮಿ ಮಾತನಾಡಿ ವಿವಿಧ ಯೋಜನೆಯ ಮನೆಗಳನ್ನು ಗ್ರಾಪಂ ಮಟ್ಟದಲ್ಲಿ ಅರ್ಹರಿಗೆ ಕಲ್ಪಿಸುವಲ್ಲಿ ಪಿಡಿಒ ಕಾರ್ಯದರ್ಶಿಗಳು ಆಸಕ್ತಿ ವಹಿಸಬೇಕು. ಗ್ರಾಮ ಸಭೆಗಳಲ್ಲಿ ಆಯ್ಕೆಗೊಂಡು ಪೂರ್ಣಗೊಂಡ ಮನೆಗಳಿಗೆ ಜಿಪಿಎಸ್ ನಿರ್ವಹಿಸಿ ನಿಯಮನುಸಾರ ಫಲಾನುಭವಿಗೆ ಮನೆಗಳ ಬಿಲ್ಲು ಸಿಗುವಂತಾಗಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

