ಆಡುವ ಮಕ್ಕಳಿಗೆ ಕಾಡುವ ಕೂಸು ಬೇಕೆ?
ಮಧುಗಿರಿ: ಅವಧಿಗೆ ಮುನ್ನ ಆಡುವ ಮಕ್ಕಳಿಗೆ ಕಾಡೋ ಕೂಸು ಬೇಡ ಎಂದು ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಶಿವಲೀಲಾ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮಧುಗಿರಿ ತಾಲೂಕಿನ ಕೊಡಗದಾಲ ಗ್ರಾಮದ ವಿಶ್ವಭಾರತಿ ಹಾಗೂ ಕಾಳಿದಾಸ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬಾಲ್ಯ ವಿವಾಹ ನಿಷೇಧ ಕುರಿತ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಇತ್ತಿಚೆಗೆ ಮಕ್ಕಳ ಅರಿವಿಗೆ ಬಾರದಂತೆ ನಡೆಯುತ್ತಿರುವ ಬಾಲ್ಯ ವಿವಾಹಗಳು ಅಲ್ಲಲ್ಲಿ ಕೇಳಿ ಬರುತ್ತಿವೆ. ಇಂತಹ ವಿವಾಹಗಳು ಕಾನೂನು ಬಾಹಿರ ಅರಳಬೇಕಾದ ಮಕ್ಕಳಿಗೆ ನರಳುವಂತೆ ಮಾಡುವ ಪೋಷಕರು ತಮ್ಮ ಜವಾಬ್ದಾರಿಯಿಂದ ನುಣಿಚಿಕೊಳ್ಳುಲು
ನಡಯಿತ್ತಿವೆ ಎಂದು ವಿಷಾದಿಸಿದರು. ವಿದ್ಯಾರ್ಥಿಗಳು ವಿವಾಹದ ಕಾನೂನುಗಳನ್ನು ಅರಿತು ಅಂದರೆ ಗಂಡಿಗೆ 21 ಹೆಣ್ಣಿಗೆ 18 ಪೂರೈಸದೆ ವಿವಾಹ ಮಾಡುವುದು ಅವರ ಮನೋವಿಕಾಸ ಮತ್ತು ಆರೋಗ್ಯದ ಮೇಲೆ ಪ್ರತಿಕೂಲವನ್ನುಂಟು ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.
ಹೆಣ್ಣುಮಕ್ಕಳು ಶಿಕ್ಷಣಕ್ಕೆ ಅಧಿಕ ಒತ್ತು ಕೊಡಬೇಕು.ಅಲ್ಲದೆ ನನಗೆ 18 ವರ್ಷ ತುಂಬುವವರೆಗೆ ಮದುವೆ ಬೇಡ ಎಂದು ಪೋಷಕರಲ್ಲಿ ಧೈರ್ಯದಿಂದ ಪ್ರತಿಭಟಿಸಬೇಕು. ಗಂಡು ಮಕ್ಕಳು ಕೂಡ 21 ತುಂಬುವವರೆಗೂ ಮದುವೆ ಬೇಡ ಎಂದು ಹೇಳಬೇಕು.ಆಗ ಮಾತ್ರ ಬಾಲ್ಯ ವಿವಾಹದಿಂದ ಮುಕ್ತರಾಗಲು ಸಾಧ್ಯ ಎಂದ ಅವರು ಕಾನೂನಿನ ಚೌಕಟ್ಟಿನೊಳಗೆ ವಿವಾಹ ನಡೆಯುವ ಪದ್ಧತಿಯನ್ನು ಎಲ್ಲರೂ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಬಾಲ್ಯ ವಿವಾಹ ಪದ್ಧತಿ ತಿರಸ್ಕರಿಸಬೇಕು ಎಂದು ಮಕ್ಕಳಿಗೆ ಅರಿವು ಮೂಡಿಸಿದರು.
ಮುಖ್ಯ ಶಿಕ್ಷಕ ಲಕ್ಷ್ಮೀನರಸಪ್ಪ, ನಾರಾಯಣಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

