ಕುವೆಂಪು ವಿಶ್ವಮಾನವ ಧರ್ಮ ಪ್ರತಿಪಾದಕ
ಕನ್ನಡಪ್ರಭ ವಾರ್ತೆ ತುಮಕೂರು ನ.29
ಯುಗದ, ಜಗದ ಕವಿಯಾದ ಕುವೆಂಪು ವಿಶ್ವಮಾನವ ಧರ್ಮ ಸಾರಿದ ಪ್ರವಾದಿ ಎಂದು ಸಾಹಿತಿ ಎಲ್.ಎನ್. ಮುಕುಂದರಾಜ್ ಅಭಿಪ್ರಾಯಪಟ್ಟರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತುಮಕೂರು ಹಾಗೂ ಡಾ. ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ತುಮಕೂರು ವಿಶ್ವವಿದ್ಯಾನಿಲಯ ಸರ್.ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಜ್ಞಾನಪೀಠ ಪುರಸ್ಕೃತರ ಬದುಕು, ಬರಹ, ವಿಚಾರಗೋಷ್ಠಿಯಲ್ಲಿ ಕುವೆಂಪು ವೈಚಾರಿಕತೆ ಕುರಿತು ಅವರು ಉಪನ್ಯಾಸ ನೀಡಿದರು.
ದೇವರು-ದಿಂಡರು ವ್ಯಯಕ್ತಿಕವಾದುದು: ಎಲ್ಲ ಜಾತಿ ಸಮುದಾಯಗಳು ಒಳಗೊಂಡು ಹೊಸ ಸಮಾಜದ ನಿರ್ಮಾಣವಾಗಬೇಕಿದೆ. ಎಲ್ಲ ಮನಸ್ಸುಗಳು ಬದಲಾಗಬೇಕು. ಬುದ್ಧ ಪ್ರಜ್ಞೆಯನ್ನು ಎಲ್ಲರೂ ಒಪ್ಪಿಕೊಳ್ಳಬೇಕಿದೆ. ದೇವರು, ಧರ್ಮ, ಮತ ವೈಯಕ್ತಿಕವಾದುದು. ಮತಗಳು ಯಾವತ್ತೂ ಗುಂಪು ಕಟ್ಟಿಕೊಳ್ಳುವಂತಾಗಬಾರದು ಎಂದು ಹೇಳಿದರು.
ವೈಜ್ಞಾನಿಕ ಪ್ರಜ್ಞೆ ಇತ್ತು: ಕುವೆಂಪು ಅವರಲ್ಲಿ ಪ್ರಖರ ವೈಚಾರಿಕತೆ ಹಾಗೂ ವೈಜ್ಞಾನಿಕ ಪ್ರಜ್ಞೆ ಇತ್ತು. ವಿಜ್ಞಾನ ದೀವಿಗೆಯ ಹಿಡಿಯೋಣ ಬನ್ನಿ ಎಂದು ಹೇಳಿದ ಅವರು ವಿಜ್ಞಾನವನ್ನು ಹೊಡೆದೋಡಿಸಲು ಕರೆಯಿತ್ತರು. ಅಷ್ಟೆ ಅಲ್ಲದೆ, ದೇಶವನ್ನೇ ದೇವರೆಂದ ಕವಿ ಕುವೆಂಪು ವೈಚಾರಿಕ ಬೆಳಕಿನ ದಾರಿಯಲ್ಲಿ ನಾವೆಲ್ಲ ಮುನ್ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.
ವಿಭಿನ್ನ, ವಿಶಿಷ್ಟ-ವಿನೂತನ: ಕುವೆಂಪು ಅವರ ನಾಟಕಗಳು ಕುರಿತು ಉಪನ್ಯಾಸ ನೀಡಿದ ಬೆಂಗಳೂರು ವಿಶ್ವವಿದ್ಯಾನಿಲಯದ ಕೋಲಾರ ಸ್ನಾತಕೋತ್ತರ ಕೇಂದ್ರದ ಕನ್ನಡ ಪ್ರಾಧ್ಯಾಪಕ ಡಾ.ಕಾ.ವೆಂ. ಶ್ರೀನಿವಾಸಮೂರ್ತಿ, ಪುರಾಣ, ಚರಿತ್ರೆ, ಸಮಕಾಲೀನ ಸಾಮಾಜಿಕ ಜಗತ್ತುಗಳನ್ನು ವಸ್ತುವನ್ನಾಗಿವುಳ್ಳ ಕುವೆಂಪು ಅವರ 14 ನಾಟಕಗಳು ವಿಭಿನ್ನವೂ ವಿಶಿಷ್ಟವೂ ಆಗಿವೆ. 20 ನೇ ಶತಮಾನದ ಸಾಕ್ಷಿ ಪ್ರಜ್ಞೆಯಾಗಿದ್ದ ಕುವೆಂಪುರವರು ತಮ್ಮಕಾಲಘಟ್ಟದ ಎಲ್ಲ ಘಟ್ಟಗಳಿಗೂ ಸ್ಪಂದಿಸಿದವರು ಎಂದರು.
ವಿಚಾರ ಕ್ರಾಂತಿಗೆ ಆಹ್ವಾನ ಹಾಗೂ ನಿರಂಕುಶಮತಿಗಳಿಗಾಗಿ ವೈಚಾರಿಕ ಕೃತಿಗಳ ಮೂಲಕ ಕನ್ನಡ ಸಾಹಿತಿಗಳಿಗೆ ಮಾದರಿಯಾದವರು ಎಂದು ಅಭಿಪ್ರಾಯಪಟ್ಟರು.
ಗಮನ ಸೆಳೆದ ನಾಟಕಗಳು: ಕುವೆಂಪು ನಾಟಕಗಳಲ್ಲಿ ಶೂದ್ರಪ್ರಜ್ಞೆ ಶೋಧನೆಗೆ ಒಳಗಾಗಿದೆ. ಅದರಲ್ಲೂ ಜಲಗಾರ, ಶೂದ್ರ ತಪಸ್ವಿ ನಾಟಕಗಳು ವಿಶೇಷವಾಗಿ ಗಮನ ಸೆಳೆದ ನಾಟಕಗಳಾಗಿವೆ. ಕುವೆಂಪುರವರು ತಮ್ಮ ನಾಟಕಗಳಿಗೆ ಪುರಾಣ ವಸ್ತುವನ್ನು ಆಯ್ಕೆ ಮಾಡಿಕೊಂಡರೂ ಅದನ್ನು ಸಮಕಾಲೀನ ಸಂದರ್ಭದಲ್ಲಿಟ್ಟು ಶೋಧನೆಗೆ ಒಳಗು ಮಾಡುವ ಪರಿ ಅನನ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಮಾಯಣ ದರ್ಶನಂ ಪ್ರತಿಸೃಷ್ಟಿ: ಅಧ್ಯಕ್ಷತೆ ವಹಿಸಿದ್ದ ಡಾ.ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ನಿತ್ಯಾನಂದ ಬಿ.ಶೆಟ್ಟಿಯವರು, ಕುವೆಂಪು ಅವರ ರಾಮಾಯಣ ದರ್ಶನಂ ವಾಲ್ಮೀಕಿ ರಾಮಾಯಣದ ಅನುಸೃಷ್ಟಿಯಲ್ಲ. ಅದು ಪ್ರತಿಸೃಷ್ಟಿಯಾಗಿದೆ. ಮಂಥರೆ, ವಾಲಿ, ರಾವಣರಂಥ ಅನೇಕ ಪಾತ್ರಗಳಿಗೆ ಹೊಸಹುಟ್ಟನ್ನು ಕೊಟ್ಟ ಕುವೆಂಪುರವರು ಪ್ರತಿಯೊಂದು ಜೀವಿಯ ಘನತೆಯನ್ನು ಮತ್ತೆ ಮತ್ತೆ ಸಾರಿ ಹೇಳಿದವರು. ಆ ಕಾರಣಕ್ಕಾಗಿಯೇ ಅವರು ಎಲ್ಲ ಕಾಲಕ್ಕೂ ಮುಖ್ಯರಾಗುತ್ತಾರೆ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸೋ.ಮು. ಭಾಸ್ಕರಾಚಾರ್ ಕಾರ್ಯಕ್ರಮ ಉದ್ಘಾಟಿಸಿದರು. ಡಾ. ಡಿ.ವಿ. ಪರಮಶಿವಮೂರ್ತಿ ಸ್ವಾಗತಿಸಿದರೆ ಡಾ.ಅಣ್ಣಮ್ಮ ವಂದಿಸಿದರು.ಡಾ. ಶ್ರೀಪಾದಭಟ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

