ತುಮಕೂರು

ಹಿರಿಯರ ಸಮ್ಮುಖದಲ್ಲಿ ಅಂಗವಿಕಲರ 'ಕಲ್ಯಾಣ'

Published On :


ತುಮಕೂರು: ವಿಕಲಚೇತನರಾದ ಕೃಷ್ಣಮೂರ್ತಿ- ಲಕ್ಷ್ಮಿದೇವಮ್ಮ ಪರಸ್ವರ ಒಪ್ಪಿ ಹಿರಿಯರು, ಧರ್ಮಗುರುಗಳ ಸಮ್ಮುಖದಲ್ಲಿ ವಿವಾಹವಾಗುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ತುಮಕೂರು ತಾಲೂಕು ಗೂಳೂರು ಹೋಬಳಿ ಮುದ್ದಹನುಮಯ್ಯನಪಾಳ್ಯದ ಗಿರಿಯಪ್ಪ ಮುತ್ತು ಹನುಮಕ್ಕ ದಂಪತಿಗಳ ಮಗ ಕೃಷ್ಣಮೂರ್ತಿ ಮತ್ತು ಮಧುಗಿರಿ ತಾಲೂಕು ಬಿಜಾವರ ಹೋಬಳಿ ತವಕದಹಳ್ಳಿ ಗ್ರಾಮದ ಪಲ್ಲಣ್ಣ ದೊಡ್ಡರಂಗಮ್ಮ ಅವರ ಪುತ್ರಿ ಲಕ್ಷ್ಮಿದೇವಮ್ಮ ಅವರು ಹಿರೇಮಠದ ಡಾ.ಶಿವಾನಂದಶಿವಾಚಾರ್ಯ ಅವರ ನೇತೃತ್ವದಲ್ಲಿ ಹಿರಿಯರ ಸಮ್ಮುಖದಲ್ಲಿ ಮೈದಾಳದ ಶಿವ ಶೈಕ್ಷಣಿಕ ಅನಾಥ ಮಕ್ಕಳ ಆಶ್ರಮದಲ್ಲಿ ಹೊಸಬಾಳಿಗೆ ಕಾಲಿಟ್ಟಿದ್ದಾರೆ.
ವರ ಕೃಷ್ಣಮೂರ್ತಿ ಹುಟ್ಟು ಅಂಗವಿಕಲನಾಗಿದ್ದು ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡಿವೆ. ಹತ್ತನೇ ತರಗತಿಯವರಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಆದರೂ ಎಲ್ಲರಂತೆ ದೈಹಿಕ ಶ್ರಮದ ಕೆಲಸಗಳನ್ನೇ ಮಾಡುತ್ತಾ ಬದುಕು ಸಾಗಿಸುತ್ತಿದ್ದು ಪ್ರಸ್ತುತ ಮರಗಳಿಂದ ಮಾಡಿದ ಪೀಠೋಪಕರಣ ಪಾಲಿಶ್ ಹಾಕುವ ಕೆಲಸ ಮಾಡುತ್ತಿದ್ದು, ಇದರ ಜೊತೆಗೆ ನಾಟಕ, ಹರಿಕಥೆ ಮತ್ತು ಇನ್ನಿತರ ಶುಭ ಸಮಾರಂಭಗಳಲ್ಲಿ ಸಂಗೀತ ವಾದ್ಯವಾದ ಘಟಂ ನುಡಿಸುವ ಮೂಲಕ ಬದುಕು ನಡೆಸುತ್ತಿದ್ದಾರೆ.
ವಧು ಲಕ್ಷ್ಮಿದೇವಯ್ಯ ಸಹ ಅಂಗವಿಕಲರಾಗಿದ್ದ ಎರಡು ಕಾಲುಗಳ ಪಾದಗಳು ಸ್ವಾಧೀನ ಕಳೆದುಕೊಂಡಿದ್ದು,ಹತ್ತನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ ಜೀವನ ನಿರ್ವಹಣೆಗಾಗಿ ಪುಟ್ಟ ಕಿರಾಣಿ ಅಂಗಡಿಯೊಂದನ್ನು ಇಟ್ಟುಕೊಂಡು ಸ್ವಾವಲಂಬಿಯಾಗಿ ಬದುಕು ನಡೆಸುತ್ತಿದ್ದಾರೆ.
ಅಂಗವಿಕಲರಾದ ಮಧುಗಿರಿಯ ಮುಕುಂದ ಅವರ ಮೂಲಕ ವಧುಪರೀಕ್ಷೆಯ ನಂತರ ಇಬ್ಬರು ಪರಸ್ವರ ಒಪ್ಪಿ ಮೈದಾಳದ ಶಿವಶೈಕ್ಷಣಿಕ ಅನಾಥ ಮಕ್ಕಳ ಆಶ್ರಮದಲ್ಲಿ ಮದುವೆಯಾಗಲು ಒಪ್ಪಿ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಹಿರೇಮಠದ ಡಾ.ಶಿವಾನಂದಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಎಚ್. ನಿಂಗಪ್ಪ, ಕಲಾವಿದ ಹನುಮಂತೇಗೌಡ, ಶಿವಶೈಕ್ಷಣಿಕ ಅನಾಥ ಮಕ್ಕಳ ಆಶ್ರಮದ ಮುಖ್ಯಸ್ಥ ಲೇಪಾಕ್ಷಯ್ಯ ದಂಪತಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅಂಜನಪ್ಪ, ಎಸ್.ಬಿ.ಎಂ.ವ್ಯವಸ್ಥಾಪಕ ಕೆ.ವಿ.ರಾಜಣ್ಣ, ಜಿಲ್ಲಾ ಅಂಗವಿಕಲರ ಕಲ್ಯಾಣ ವೇದಿಕೆ ಅಧ್ಯಕ್ಷ ಸಿ.ಗಂಗರಾಜು ದಂಪತಿಗಳು. ಕುಣಿಗಲ್ ತಾಲೂಕು ಅಂಗವಿಕಲರ ಕಲ್ಯಾಣ ವೇದಿಕೆಯ ಅಧ್ಯಕ್ಷ ರಾಮಕೃಷ್ಣ ಮತ್ತಿತರರು ವಿವಾಹಕ್ಕೆ ಸಾಕ್ಷಿಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.