ನಿರ್ವಾಹಕಿ ವಿರುದ್ಧ ಕ್ರಮಕ್ಕೆ ಆಕ್ರೋಶ
ಕ.ಪ್ರ.ವಾರ್ತೆ ಕುಣಿಗಲ್ ನ.30
ವ್ಯಾಸಂಗಕ್ಕಾಗಿ ಕುಣಿಗಲ್ ಸೇರಿದಂತೆ ಇತರೆ ಭಾಗದಿಂದ ಜಿಲ್ಲಾ ಕೇಂದ್ರಕ್ಕೆ ತೆರಳಿ ಹಿಂದಿರುಗುವ ವಿದ್ಯಾರ್ಥಿಗಳ ಪಾಸ್ಗಳನ್ನು ಕಸಿದು, ದೌರ್ಜನ್ಯ ನಡೆಸುತ್ತಿದ್ದ ಸಾರಿಗೆ ಸಂಸ್ಥೆ ನಿರ್ವಾಹಕರ ಕ್ರಮವನ್ನು ಖಂಡಿಸಿದ ವಿದ್ಯಾರ್ಥಿಗಳು, ಕನ್ನಡಪರ ಸಂಘಟನೆ ಪದಾಧಿಕಾರಿಗಳು ಶನಿವಾರ ಸಂಜೆ ಐದುಗಂಟೆ ಸಮಯದಲ್ಲಿ ದಿಢೀರ್ ಬಸ್ ತಡೆದು ಪ್ರತಿಭಟನೆ ನಡೆಸಿದರು.
ಕುಣಿಗಲ್ ಪಟ್ಟಣ ಸೇರಿದಂತೆ ತಾಲೂಕು ಹಾಗೂ ತುಮಕೂರು ತಾಲೂಕಿನ ವಿವಿಧ ಭಾಗಗಳಿಗೆ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ವ್ಯಾಸಂಗಕ್ಕಾಗಿ ಜಿಲ್ಲಾ ಕೇಂದ್ರ ತುಮಕೂರಿನ ವಿವಿಧ ಶಾಲಾ ಕಾಲೇಜಿಗೆ ದಿನಂಪ್ರತಿ ಪಾಸ್ ಪಡೆದು ಸಂಚರಿಸುತ್ತಿದ್ದರು. ಶನಿವಾರಸಂಜೆ ತುಮಕೂರಿನಿಂದ ಕುಣಿಗಲ್ ಕಡೆಗೆ ಬರಲು ಹೊರಟ ವಿದ್ಯಾರ್ಥಿನಿಯರು ತುಮಕೂರಿನ ಬನಶಂಕರಿಯಲ್ಲಿ ನಡೆಯುತ್ತಿರುವ ಕಾಮಗಾರಿ ಪ್ರಯುಕ್ತ, ಕಾಲ್ಟ್ಯಾಕ್ಸ್ ನಿಲ್ದಾಣದಲ್ಲಿ ಹತ್ತಿ, ನಾಗವಲ್ಲಿ, ಹೆಬ್ಬೂರು ಗ್ರಾಮಗಳಲ್ಲಿ ಇಳಿಯಬೇಕಿತ್ತು. ಆಧರೆ, ಬಸ್ನ ನಿರ್ವಾಹಕಿ ಅರುಂಧತಿ, ವಿದ್ಯಾರ್ಥಿನಿಯರು, ಪಾಸ್ನಲ್ಲಿ ನಮೂದಿಸಿದ ಸ್ಥಳದಲ್ಲಿ ಹತ್ತದೆ ಮುಂದೆ ಹತ್ತಿದ್ದಾರೆಂದು ವಾದಿಸಿ, ಪಾಸ್ ಜಪ್ತಿಗೊಳಿಸುವ ಬೆದರಿಕೆ ಒಡ್ಡಿದರು. ದೌರ್ಜನ್ಯದಿಂದ ಪಾಸನ್ನು ತಮ್ಮ ಬಳಿಯೇ ಇಟ್ಟುಕೊಂಡರೆನ್ನಲಾಗಿದೆ. ನಾಗವಲ್ಲಿ, ಹೆಬ್ಬೂರು ಗ್ರಾಮಗಳ ಅರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತಮ್ಮ ಗ್ರಾಮಗಳು ಬಂದಾಗಲೂ ನಿರ್ವಾಹಕಿ ಬಳಿ ಕಾಡಿ ಬೇಡಿದರೂ ಪಾಸ್ ನೀಡುವುದಿಲ್ಲವೆಂದು ನಿಂದಿಸಿದ್ದಲ್ಲದೆ, ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿ, ಕುಣಿಗಲ್ವರೆಗೂ ಕರೆತಂದರು. ತಮ್ಮ ಗ್ರಾಮಗಳು ಬಿಟ್ಟನಂತರ ಹತಾಶರಾದ ವಿದ್ಯಾರ್ಥಿನಿಯರು ಅಳುತ್ತಾ ನಿಂತರು. ಇದರಿಂದ ಬೇಸತ್ತ ಸಹ ಪ್ರಯಾಣಿಕರು ನಿರ್ವಾಹಕಿಯ ಕ್ರಮ ಖಂಡಿಸಿ, ವಿದ್ಯಾರ್ಥಿನಿಯರಬೆಂಬಲಕ್ಕೆ ನಿಂತರು.
ವಿಷಯ ತಿಳಿದ ಕರವೇ ಅಧ್ಯಕ್ಷ ಮಂಜುನಾಥ್, ಇತರರು ನಿರ್ವಾಹಕಿ ಕ್ರಮ ಖಂಡಿಸಿ, ಬಸ್ಸನ್ನು ತಡೆದು ಪ್ರತಿಭಟನೆಗೆ ಮುಂದಾದರು. ಇದರಿಂದ ತುಮಕೂರು ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಸಾರ್ವಜನಿಕ ಹಿತದೃಷ್ಟಿಯಿಂದ ವಾಹನವನ್ನು ಸಾರಿಗೆ ಸಂಸ್ಥೆ ಬಸ್ ನಿಲ್ದಾಣಕ್ಕೆ ಕರೆತಂದು ,ನಿರ್ವಾಹಕಿಯನ್ನು ತರಾಟೆಗೆ ತೆಗೆದುಕೊಂಡರು. ನಂತರ ನಿರ್ವಾಹಕಿ ಮಾಡಿದ್ದು ತಪ್ಪೆಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದ ಮೇರೆಗೆ, ಮುಂದಿನ ದಿನಗಳಲ್ಲಿ ಈ ರೀತಿ ವರ್ತಿಸದಂತೆ ತಾಕೀತು ಮಾಡಿ, ವಿದ್ಯಾರ್ಥಿನಿಯರು ಪುನಃ ಸ್ವಗ್ರಾಮಗಳಿಗೆ ತೆರಳಲು ಬಸ್ ಚಾರ್ಜನ್ನು ನಿರ್ವಾಹಕಿಯ ಕೈಯಿಂದ ಕೊಡಿಸಿದರಲ್ಲದೆ, ವಿದ್ಯಾಭ್ಯಾಸಕ್ಕೆ ತೆರಳುವ ವಿದ್ಯಾರ್ಥಿಗಳೊಂದಿಗೆ ಸಾರಿಗೆ ಸಂಸ್ಥೆ ಸಿಬ್ಬಂದಿ ಸೌಜನ್ಯವಾಗಿ ವರ್ತಿಸುವಂತೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

