ತುಮಕೂರು

ಸಾರ್ವಜನಿಕ ಜಾಗೃತಿಗಾಗಿ ಮ್ಯಾರಥಾನ್

Published On :

ಕ.ಪ್ರ.ವಾರ್ತೆ ತುಮಕೂರು ಸೆ.1
ಇಲ್ಲಿನ ವಂದೇಮಾತರಂ ಯೂತ್ಕ್ಲಬ್ ಮತ್ತು ಶ್ರೀ ಸಿದ್ಧಾರ್ಥ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ವಿಶೇಷ ಚೇತನರಿಗಿರುವ ಸರ್ಕಾರಿ ಸೌಲಭ್ಯಗಳ ಬಗ್ಗೆ ಸಾರ್ವಜನಿಕ ಜಾಗೃತಿಗಾಗಿ ಆಯೋಜಿಸಿದ್ದ 7 ಕಿಲೋ ಮೀಟರ್ಗಳ ಪ್ರಥಮ ತುಮಕೂರು ಮ್ಯಾರಥಾನ್ ಸ್ಪರ್ಧೆಯಲ್ಲಿ ಸಾವಿರಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು.
ಮ್ಯಾರಥಾನ್ ಸ್ಪರ್ಧೆಗೆ ತುಮಕೂರಿನ ಸಂಸದ ಜಿ.ಎಸ್. ಬಸವರಾಜು ಹಾಗೂ ತುಮಕೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಮಣ ಗುಪ್ತಾ, ಜ್ಯೋತಿಗಣೇಶ್, ಲೋಕೇಶ್ವರ್, ಇಮ್ತಿಯಾಜ್ ಅಹ್ಮದ್, ಕರಣಾರಾಧ್ಯ, ಪ್ರಭಾಕರ್, ಚಾಲನೆ ನೀಡದರು. ಪ್ರಶಸ್ತಿ ವಿತರಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ನಗರ ಶಾಸಕತ ರಫೀಕ್ ಅಹ್ಮದ್ ವಹಿಸಿದ್ದರು. ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಸಿ.ಎನ್. ನರಸಿಂಹಮೂರ್ತಿ, ಇಮ್ತಿಯಾಜ್ ಅಹ್ಮದ್, ಕರಣಾರಾಧ್ಯ, ಪ್ರಸನ್ನಕುಮಾರ್, ಬಿಂದುಶೇಖರ್ ಒಡೆಯರ್, ಬದ್ರೀಶ್, ಮುಂತಾದವರು ವೇದಿಕೆಯಲ್ಲಿದ್ದರು. ಪುರುಷರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಕೊರಟಗೆರೆಯ ಸಂದೀಪ್ ಟಿ.ಎಸ್, ದ್ವಿತಿಯ ಬಹುಮಾನವನ್ನು ರಾಕೇಶ್ ಬಿ.ಎಸ್, ತೃತೀಯ ಬಹುಮಾನವನ್ನು ಗಿರೀಶ್, ನಾಲ್ಕನೇ ಬಹುಮಾನವನ್ನು ಜಗದೀಶ್ ಟಿ.ಎಂ. ತಿಪಟೂರು, ಐದನೇ ಬಹಮಾನವನ್ನು ಈಶ್ವರಚಂದ್ರ ಟಿ.ಪಿ, ಆರನೇ ಬಹುಮಾನ ತುಮಕೂರಿನ ಹರೀಶ್ ಎಂ.ಎನ್ ನಗದು ಬಹುಮಾನ ಪಡೆದರು. ಮಹಿಳಾ ವಿಭಾಗದಲ್ಲಿ ಪ್ರಥಮ ಬಹುಮಾನ ಕುಣಿಗಲ್ನ ಚೈತ್ರ. ಎಸ್, ದ್ವಿತೀಯ ಬಹಮಾನ ಸಿದ್ದಗಂಗಾ ಮಠದ ಭಾಗ್ಯ, ತೃತೀಯ ಬಹುಮಾನ ಕುಣಿಗಲ್ನ ಬಿಂದು, ನಾಲ್ಕನೇ ಬಹುಮಾನವನ್ನು ವಿನುತ ಬಿ.ಎನ್. ಐದನೇ ಬಹಮಾನ ಕುಣಿಗಲ್ನ ಉಷಾ.ಬಿ, ಆರನೇ ಬಹುಮಾನ ತಿಪಟೂರಿನ ಪುಷ್ಪಲತಾ ನಗದು ಬಹುಮಾನ ಪಡೆದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲ ಸ್ಪರ್ಧಾಳುಗಳಿಗೆ ಪ್ರಮಾಣಪತ್ರ ನೀಡಲಾಯಿತು. ವಂದೇಮಾತರಂ ಯೂತ್  ಕ್ಲಬ್ನ ಅಧ್ಯಕ್ಷ ಸಿದ್ದಲಿಂಗಸ್ವಾಮಿ.ಬಿ.ಎನ್, ಸಿದ್ಧಾರ್ಥ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಚ್.ಎಸ್. ಗಿರೀಶ್, ಪರಿವರ್ತನ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷೆ ಮಂಜುಳಾ, ಹೆಲನ್ ಕೆಲರ್ ಶಿಕ್ಷಣ ಸಂಸ್ಥೆಯ ಗಾಯಿತ್ರಿ ರವೀಶ್ ವೇದಿಕೆಯಲ್ಲಿದ್ದರು. ಪ್ರತಿಭಾನಾಯಕಿ, ನೇತ್ರಾವತಿ, ಪ್ರಾರ್ಥಿಸಿದರು. ಶಂಭುಲಿಂಗಸ್ವಾಮಿ ಬಿ.ಎನ್. ಸ್ವಾಗತಿಸಿ.  ಜಗದೀಶ್ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.