ಪೌಷ್ಟಿಕತೆಯಿಂದ ಮಾನಸಿಕ, ದೈಹಿಕ ದೃಢತೆ
ಕನ್ನಡಪ್ರಭ ವಾರ್ತೆ ತುಮಕೂರು ಸೆ.4
ಅಡುಗೆ ಮನೆಯಿಂದ ಸಮೃದ್ಧ ಆರೋಗ್ಯ ಸಾಧ್ಯ ಎಂದು ಆಹಾರ ತಜ್ಞ ಎ. ಶಿವಕುಮಾರ್ ಪ್ರತಿಪಾದಿಸಿದರು.
ತುಮಕೂರಿನ ಎಸ್ಐಟಿ ಬಡಾವಣೆಯ ಹೆಚ್.ಎಸ್.ಆರ್. ನಿವಾಸದಲ್ಲಿ ಅಡುಗೆ ಮನೆಯಿಂದ ಆರೋಗ್ಯ ವಿಷಯವಾಗಿ ನಡೆದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರೋಗ್ಯವನ್ನು ಕೊಂಡುಕೊಂಡು ಬರಲು ಸಾಧ್ಯವಿಲ್ಲ. ಓಟ್ಸ್ನಂತಹ ಪರಿವರ್ತಿತ ಆಹಾರ ಬಳಸಬಾರದು. ಅಪೂರ್ವ ವೈದ್ಯಕೀಯ ಗುಣಗಳುಳ್ಳ ಮಾಮೂಲು ಅಡುಗೆಯಲ್ಲಿ ಬಳಸುವ ಆಹಾರ ಪದಾರ್ಥಗಳ ಸಮರ್ಪಕ ಬಳಕೆಯಿಂದ ಉತ್ತಮ ಆರೋಗ್ಯ ಹೊಂದಬಹುದೆಂದು ತಿಳಿಸಿದರು.
ಪದಾರ್ಥಗಳ ಬಳಕೆ ತಪ್ಪಿದೆ: ಪರಂಪರೆಯಿಂದ ಬಳಕೆಯಲ್ಲಿರುವ ಪದಾರ್ಥಗಳ ಬಳಕೆ ತಪ್ಪಿಹೋಗಿದೆ. ಇವುಗಳ ಸಮರ್ಪಕ ಮತ್ತು ವೈಜ್ಞಾನಿಕ ಬಳಕೆಯಿಂದ ಸಂಪೂರ್ಣ ಆರೋಗ್ಯ ಪಡೆಯಬಹುದೆಂದು ತಿಳಿಸುತ್ತಾ ಪ್ರತಿಯೊಬ್ಬರೂ ಆರೋಗ್ಯಪೂರ್ಣರಾಗಿರಬೇಕೆಂದು ಆಶಿಸಿದರು.
ಅಗಸೆ ಬೀಜದ ಬಳಕೆ ಒಳ್ಳೆಯದು: ಮಾರುಕಟ್ಟೆಯಲ್ಲಿ ದೊರಕುವ ಬಹುತೇಕ ಅಡುಗೆ ಎಣ್ಣೆಗಳು ರೋಗಕಾರಕ. ಪರಿಶುದ್ಧವಾದ ಎಣ್ಣೆ ಮಾತ್ರ ಬಳಸಬೇಕು. ಹಸಿಮೆಣಸಿನಕಾಯಿ, ಹುಣಸೇ ಹಣ್ಣು ಹೆಚ್ಚು ಬಳಸಬಾರದು. ಸೊಪ್ಪುಗಳನ್ನು, ನಾರಿನ ಅಂಶ ಇರುವ ತರಕಾರಿಗಳನ್ನು ಮತ್ತು ಕರಿಬೇವು ಹೇರಳವಾಗಿ ಬಳಸಬೇಕು. ಅಗಸೆ ಬೀಜದ ಬಳಕೆ ಒಳ್ಳೆಯದು. ಉಪ್ಪಿನಕಾಯಿ ಅಪಾಯವಿದೆ. ಆದರೆ ಮಾಕಳಿಬೇರು ಉಪ್ಪಿನಕಾಯಿ ಬಳಸಬಹುದು ಎಂದು ಕಿವಿಮಾತು ಹೇಳಿದರು.
ಆರೋಗ್ಯಕರ ಪದಾರ್ಥ ಹಾಗೂ ಸಾಂಬಾರು ಪದಾರ್ಥಗಳ ರಾಜನ ಸ್ಥಾನದಲ್ಲಿರುವ ಮೆಣಸು ಬಳಕೆಯ ಬಗ್ಗೆ ವಿವರಿಸಿ ಇದು ಕಫ ಹರ, ಜ್ವರಹರ ಮತ್ತು ಜೀರ್ಣತೆಗೆ ಪೂರಕ. ಹಸಿಮೆಣಸಿನಕಾಯಿ ಬಳಕೆಯಿಂದ ಅನಾರೋಗ್ಯ ಉಂಟಾಗುವುದರಿಂದ ಅದರ ಪರ್ಯಾಯವಾಗಿ ಖಾರ ಪದಾರ್ಥವಾಗಿ ಮೆಣಸನ್ನು ಆದಷ್ಟು ಹೆಚ್ಚಾಗಿ ಬಳಸಬೇಕೆಂದರು.
ರಾಣಿಯ ಸ್ಥಾನದಲ್ಲಿರುವ ಏಲಕ್ಕಿ-ಕ್ಯಾಲ್ಸಿಯಂ, ಪೊಟ್ಯಾಷಿಯಂ, ಸೆಲೆನಿಯಂ, ಜಿಂಕ್, ಮೆಗ್ನೀಷಿಯಂ ಇತ್ಯಾದಿ ಲೋಹಗಳ ಅಂಶಗಳನ್ನು ಒಳಗೊಂಡಿದ್ದು ಲೋಹ ಸಮುದ್ರ ರೀತಿಯಲ್ಲಿದೆ. ಇದರಿಂದ ಹೃದಯಕ್ಕೆ ಅನುಕೂಲವಿದೆ, ಜೀರ್ಣತೆ ಹೆಚ್ಚುತ್ತದೆ, ನಿದ್ರೆ ಬರುತ್ತದೆ ಎಂದು ಬಳಕೆಯ ಪ್ರಯೋಜನಗಳನ್ನು ತಿಳಿಸಿದರು.
ಮಂತ್ರಿ ಸ್ಥಾನದಲ್ಲಿರುವ ಅರಿಶಿಣದ ಬಳಕೆಯಿಂದ ದೀರ್ಘಾಯಸ್ಸು ಪ್ರಾಪ್ತವಾಗುತ್ತದೆ. ಇದು ಅರ್ಬುದ ನಿರೋಧಿ.
ಕಿಡ್ನಿಕಲ್ಲು ರೂಪುಗೊಳ್ಳುವುದನ್ನು ತಡೆಯುತ್ತದೆ. ಸಂದಿನೋವು ನಿವಾರಿಸುತ್ತದೆ. ಅಪಾಹಾರಿಯಾಗಿದೆ. ಮೂಳೆಸವೆತ ತಡೆಯುತ್ತದೆ ಎಂದರು.
ಕಾರ್ಯಕ್ರಮ ಆಯೋಜಕಿ ಹೆಚ್. ಎಸ್. ಸಾವಿತ್ರಿ ರಾಮಣ್ಣ ಸ್ವಾಗತಿಸಿದರು. ಪಾರಂಪರಿಕ ವೈದ್ಯರಾದ ಹೆಚ್.ವಿ.ಗುರುಸಿದ್ದಾರಾಧ್ಯ, ಎಂ. ಪಾರ್ಥಸಾರಥಿ, ವಿಜಯಕುಮಾರ್ ಮತ್ತು ಹೆಚ್.ಎಸ್. ರಾಮಣ್ಣ ಹಾಜರಿದ್ದರು. ಕಾರ್ಯಕ್ರಮದಲ್ಲಿ 40 ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡು ಮಾಹಿತಿ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

