ತುಮಕೂರು

ಮಧುಗಿರಿ ಪುರಸಭೆಗೆ ನೂತನ ಅಧ್ಯಕ್ಷ ಗಂಗಣ್ಣ

Published On :

ಕ,ಪ್ರ, ವಾರ್ತೆ   ಮಧುಗಿರಿ   ಸೆ.7
ಮಧುಗಿರಿ ಪುರಸಭೆಗೆ ನೂತನ ಅಧ್ಯಕ್ಷರಾಗಿ  ಕಾಂಗ್ರೆಸ್ ಅಭ್ಯರ್ಥಿ ಎನ್.ಗಂಗಣ್ಣ ಶನಿವಾರ  ಅವಿರೋಧವಾಗಿ ಆಯ್ಕೆಯಾದರು. ಪಕ್ಷೇತರ ಅಭ್ಯರ್ಥಿಯಾಗಿ ಗೆಲವು ಸಾಧಿಸಿದ್ದ  ಜುಬೇದ ಭಾನು ಕಾಂಗ್ರೆಸ್ಗೆ ಬೆಂಬಲ ನೀಡುವ ಮೂಲಕ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಮಧುಗಿರಿ ಪುರಸಭೆ ವ್ಯಾಪ್ತಿಯ ಎಲ್ಲ 23 ವಾರ್ಡ್ಗಳಿಗೂ ಚುನಾವಣೆ ನಡೆದು ಈ ಪೈಕಿ 12 ಮಂದಿ ಕಾಂಗ್ರೆಸ್ನಿಂದ ಗೆಲವು ಸಾಧಿಸಿದ್ದರು.7 ಮಂದಿ ಜೆಡಿಎಸ್ನವರು ಗೆದ್ದಿದ್ದರು. ಪಕ್ಷೇತರರು 4 ಮಂದಿ ಗೆಲವು ಸಾಧಿಸಿದ್ದರು. ಇದರಲ್ಲಿ  3 ಜನ ಪಕ್ಷೇತರರು ಕಾಂಗ್ರೆಸ್ಗೆ ಬೆಂಬಲ ಸೂಚಿಸಿದ್ದರು. ಅದೇ ಪ್ರಕಾರ ಶಾಸಕ ಕೆ.ಎನ್.ರಾಜಣ್ಣ ಅವರ ಆದೇಶದ ಮೇರೆಗೆ  ಎನ್. ಗಂಗಣ್ಣ ಅಧ್ಯಕ್ಷರಾಗಿ ಮತ್ತು ಜುಬೇದಬಾನು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಯೆಯಾದರು.
ನಂತರ ಮಾಲೀಮರಿಯಪ್ಪ ರಂಗಮಂದಿರದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಶಾಸಕ ಕೆ.ಎನ್. ರಾಜಣ್ಣ ಮಾತನಾಡಿ, ನೂತನ ಅಧ್ಯಕ್ಷ ಎನ್.ಗಂಗಣ್ಣ  ಜನರು ಹೆಮ್ಮೆ ಪಡುವ ರೀತಿ ಸದಸ್ಯರ ಬೆಂಬಲ, ಹಿರಿಯರ ಮಾರ್ಗದರ್ಶನದಲ್ಲಿ ಪಟ್ಟಣದ ಸರ್ವತೋಮುಖ ಅಭಿವೃದ್ಧಿ ಪಡಿಸಬೇಕು. ಚುನಾಯಿತ ಜನಪ್ರತಿನಿಧಿಗಳು ಅಧಿಕಾರವನ್ನು ಸ್ವಾರ್ಥಕ್ಕೆ ಬಳಸದೇ ಸಾರ್ವಜನಿಕರ ಅಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು. ಎಲ್ಲ ಸದಸ್ಯರು ಒಗ್ಗಟ್ಟಾಗಿ ಪಟ್ಟಣದ ಪ್ರಗತಿಗೆ ಶ್ರಮಿಸಬೇಕು ಎಂದು ಅಭಿನಂದನೆ ಸಲ್ಲಿಸಿದರು.
ನೂತನ ಅಧ್ಯಕ್ಷ ಎನ್.ಗಂಗಣ್ಣ ಮಾತನಾಡಿ, ನನ್ನನ್ನು ಅಧ್ಯಕ್ಷನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲ ಸದಸ್ಯರಿಗೆ, ಹಿರಿಯರಿಗೆ ಹಾಗೂ ನನ್ನ ರಾಜಕೀಯ ಗುರು ಶಾಸಕ ಕೆ.ಎನ್.ರಾಜಣ್ಣ ಮತ್ತು ಪುರಸಭೆ  ಮಾಜಿ ಅಧ್ಯಕ್ಷ ಕೆ.ಪ್ರಕಾಶ್ ಅವರಿಗೆ ಅಭಿನಂದನೆ ಸಲ್ಲಿಸಿ, ನಾನು  ಎಲ್ಲರ ಸಹಕಾರದಿಂದ  ಪಟ್ಟಣದ ಅಭಿವೃದ್ಧಿಗೆ ಪ್ರಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.
ಕಾಂಗ್ರೆಸ್ ವೀಕ್ಷಕರಾಗಿ ಆಗಮಿಸಿದ್ದ ವೇಣುಗೋಪಾಲ ಕೃಷ್ಣ ಮಾತನಾಡಿದರು.  ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಂದ್ರಶೇಖರ್,  ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಕೆ.ಪ್ರಕಾಶ್,ಆರ್.ಸಿ. ವಿಜಯ್ ಕುಮಾರ್ ಜೈನ್,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಲ್ಲಿಕಾರ್ಜುನಯ್ಯ, ರಾಜ್ಗೋಪಾಲ್, ಎಸ್.ಡಿ.ಕೃಷ್ಣಪ್ಪ, ಜಿ.ಪಂ.ಸದಸ್ಯ ಶಾಂತಲ ರಾಜಣ್ಣ, ಎಚ್. ಕೆಂಚಮಾರಯ್ಯ, ಸುಮನ, ಮುಖಂಡ ಎಂ.ಜಿ. ಶ್ರೀನಿವಾಸಮೂರ್ತಿ, ರಂಗನಾಥಬಾಬು, ಗುಟ್ಟೆ ಚಿಕ್ಕರಂಗಪ್ಪ, ಟಿ.ರಾಮಣ್ಣ, ಪಿ.ಸಿ.ಕೆ.ರೆಡ್ಡಿ, ತಾ.ಪಂ.ಅಧ್ಯಕ್ಷೆ ಯಶೋಧ, ಸಿದ್ಧಗಂಗಾಂಬಿಕೆ ಸದಸ್ಯರಾದ ಶ್ರೀನಿವಾಸ್, ಗೋಪಿ, ಮಂಜು, ಅಲೀಮ್, ಅಯೂಬ್, ರಾಧಾನಾರಾಯಣ್, ಪುಟ್ಟಮ್ಮ ಆನಂದ್, ಎಂ.ಪಿ.ಗಣೇಶ್, ಸಾಧಿಕ್ ಹಾಗೂ ಅನೇಕರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.