ತುಮಕೂರು

ವಿದ್ಯೋದಯ ಕಾನೂನು ಕಾಲೇಜಿಗೆ ಅನುದಾನ; ಭರವಸೆ

Published On :

ತುಮಕೂರು: ತುಮಕೂರಿನ ವಿದ್ಯೋದಯ ಕಾನೂನು ಮಹಾವಿದ್ಯಾಲಯಕ್ಕೆ ಸರ್ಕಾರಿ ಅನುದಾನ ದೊರಕಿಸಿಕೊಡುವ ಭರವಸೆಯನ್ನು ಕಾನೂನು ಸಚಿವ ಟಿ.ಬಿ. ಜಯಚಂದ್ರ ನೀಡಿದರು. ಕಾಲೇಜು ಮುಖ್ಯಸ್ಥ ಪ್ರೊ.ಎಚ್.ಎಸ್. ಶೇಷಾಧ್ರಿ ತಮ್ಮನ್ನು ಭೇಟಿ ಮಾಡಿದ್ದರು. ಹಿರಿಯರು ತಮ್ಮನ್ನು ಭೇಟಿ ಮಾಡಿ ಮನವಿ ಮಾಡಿದ್ದು ಮುಜುಗರವಾಗಿತ್ತು.  ಮನವಿ ಮಾಡುವ ಮುನ್ನವೇ ಅನುದಾನ ದೊರಕಿಸಿಕೊಡುವ ಕುರಿತಂತೆ ಚಿಂತಿಸಿದ್ದೆ ಎಂದು ಜಯಚಂದ್ರ ತಿಳಿಸಿದರು.
ಇತರೆ ಕಚೇರಿ ಸ್ಥಳಾಂತರಕ್ಕೆ ಭರವಸೆ: ಜಯಚಂದ್ರ ತಮ್ಮ ಭಾಷಣದ ವೇಳೆ ನ್ಯಾಯಾಲಯದ ಆವರಣದಲ್ಲಿ ಕೃಷಿ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಇರುವ  ಇತರೆ ಸರ್ಕಾರಿ ಕಚೇರಿ ಸ್ಥಳಾಂತರಕ್ಕೆ ಪರಿಶೀಲನೆ ನಡೆಸುವ ಭರವಸೆ ನೀಡಿದರು. ಈ ಎಲ್ಲ ಕಚೇರಿಗಳು ನ್ಯಾಯಾಲಯದ ಆವರಣದೊಳಕ್ಕೆ ಹೇಗೆ ಬಂದವು ಎಂಬ ಅನುಮಾನವನ್ನೂ ವ್ಯಕ್ಯಪಡಿಸಿದರು. ಜಯಚಂದ್ರರ ಅನುಮಾನಕ್ಕೆ ತಕ್ಕಂತೆ ವಕೀಲರೂ ದನಿಗೂಡಿಸಿದರು.
ತುಮಕೂರು ನ್ಯಾಯಾಲಯ ಸಂಕೀರ್ಣದ ಒಟ್ಟು ವಿಸ್ತಾರ 4 ಎಕರೆ 17 ಗುಂಟೆ ಅಥವಾ 20 ಗುಂಟೆ. ಆದರೆ ಇಂದು ವಿವಿಧ ಸರ್ಕಾರಿ ಇಲಾಖೆಗಳು ಎರಡೂವರೆ ಎಕರೆಗಿಂತಲೂ ಹೆಚ್ಚು ನ್ಯಾಯಾಲಯದ ಆವವರಣವನ್ನು ಆಕ್ರಮಿಸಿವೆ.
ಜಿಲ್ಲಾಧಿಕಾರಿಗಳು ಮನಸೋ ಇಚ್ಚೆ ಸರ್ಕಾರಿ ಇಲಾಖೆಗಳಿಗೆ ನೀಡಿದ್ದಾರೆ. ಕೂಡಲೇ ನ್ಯಾಯಾಲಯದ ಆವರಣದಲ್ಲಿರುವ ಸರ್ಕಾರಿ ಕಚೇರಿಗಳನ್ನು ಸ್ಥಳಾಂತರಗೊಳಿಸಿ, ನ್ಯಾಯಾಲಯ ಆವರಣವನ್ನು ಬಿಡಿಸಿಕೊಡಬೇಕೆಂದು ಮನವಿ ಸಲ್ಲಿಸಿದರು. ಜಯಚಂದ್ರ ವಕೀಲರ ಮನವಿಗೆ ಧನಿಗೂಡಿಸಿ, ನ್ಯಾಯಾಲಯ ಆವರಣವನ್ನು ಬಿಡಿಸಿಕೊಡುವ ಭರವಸೆ ನೀಡಿದರು.        

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.