ನಾಳೆ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ
ಕನ್ನಡಪ್ರಭ ವಾರ್ತೆ ತುಮಕೂರು ಸೆ.8
ಇಲ್ಲಿನ ಡಾ. ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಸೆ. 10 ರಂದು ಬೆಳಿಗ್ಗೆ 11.30 ಕ್ಕೆ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಅಂಗವಾಗಿ ಮನೋವೈದ್ಯರೊಂದಿಗೆ ಸಂವಾದ-ಆಪ್ತ ಸಲಹೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಉದ್ಘಾಟನೆಯನ್ನು ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ವೆಂಕಟನಂಜಪ್ಪ ನೆರವೇರಿಸುವರು. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ. ಬಿ.ಎಲ್. ವೈದ್ಯೇಶ್ವರ್ ವಹಿಸಲಿದ್ದಾರೆ. ಪ್ರಧಾನ ಭಾಷಣವನ್ನು ಡಾ. ಎಂ.ಟಿ. ಸತ್ಯನಾರಾಯಣ ಮಾಡಲಿದ್ದಾರೆ. ರಾಧಾ ಸಂದೇಶ್, ನಟರಾಜ್, ಪ್ರೊ. ನಳಿನಾಕ್ಷಿ ಉಪಸ್ಥಿತರಿರುವರು.
ನರಿ ಕಚ್ಚಿ ರೈತನಿಗೆ ತೀವ್ರ ಗಾಯ
ಗುಬ್ಬಿ: ಹೊಲದಲ್ಲಿ ಕೃಷಿ ಚಟುವಟಿಕೆ ಮುಗಿಸಿ ರಾಸುಗಳೊಂದಿಗೆ ಮನೆಗೆ ಹಿಂತಿರುಗುತ್ತಿದ್ದ ರೈತನ ಮೇಲೇರೆಗಿದ ನರಿ ಕಚ್ಚಿ ಗಾಯಗೊಳಿಸಿದ ಘಟನೆ ತಾಲೂಕಿನ ಗೌರಿಪುರ ಗ್ರಾಮದಲ್ಲಿ ನಡೆದಿದೆ.
ಗೌರಿಪುರದ ರೈತ ವಿಶ್ವೇಶ್ವರಯ್ಯ(57) ನರಿ ದಾಳಿಗೆ ಒಳಗಾದವರು. ಸಂಜೆ ವೇಳೆ ಹೊಲದ ಚಟುವಟಿಕೆ ಮುಗಿಸಿ ಮನೆಯತ್ತ ಹೊರಟ ಸಂದರ್ಭದಲ್ಲಿ ದಿಢೀರ್ ಪ್ರತ್ಯಕ್ಷವಾದ ನರಿ ಏಕಾಏಕಿ ದಾಳಿ ನಡೆಸಿದೆ. ವಿಶ್ವೇಶ್ವರಯ್ಯ ಅವರ ಕಾಲುಗಳನ್ನು ಕಡಿದು, ಕ್ಷಣಾರ್ಧದಲ್ಲಿ ಮುಖದ ಭಾಗಕ್ಕೆ ಆಳವಾಗಿ ಕಡಿದಿದೆ.
ಗುಬ್ಬಿ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಕೂಡಲೇ ವಲಯ ಅರಣ್ಯಾಧಿಕಾರಿ ಹರೀಶ್ ಅವರಿಗೆ ವಿಷಯ ತಿಳಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

