ಇತಿಹಾಸ ಸೃಷ್ಟಿಸಿದ ಕೊಬ್ಬರಿ ಬೆಲೆ
ಬಿ.ರಂಗಸ್ವಾಮಿ, ತಿಪಟೂರು
ತಿಪಟೂರು: ವಿಶ್ವ ಪ್ರಸಿದ್ದ ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ 2011ರ ಜನವರಿ ಮೊದಲ ವಾರ ಕ್ವಿಂಟಾಲ್ ಕೊಬ್ಬರಿ ಧಾರಣೆ ದಿಢೀರ್ 7ಸಾವಿರ ರು. ದಾಟಿ ಏರು ಮುಖವಾಗಿ ನಂತರ ಒಂದೆರಡು ತಿಂಗಳ ಅವಧಿಯಲ್ಲೇ ಗಣನೀಯವಾಗಿ 4,500 ರು.ಗೆ ಕುಯಿತು.
2014ರ ಫೆಬ್ರವರಿಯಲ್ಲಿ 7ಸಾವಿರ ಮುಟ್ಟಿ, ಈ ವಾರ ಕೊಬ್ಬರಿ ಧಾರಣೆ ದಿಢೀರ್ 10ಸಾವಿರ ದಾಟುವ ಮೂಲಕ ಮತ್ತೆ ತೆಂಗು ಬೆಳೆಗಾರರ ಮುಖದಲ್ಲಿ ಸಂತಸ ಮತ್ತು ಹರ್ಷ ತಂದಿದೆಯಾದರೂ, ರೈತರ ಬಳಿ ಕೊಬ್ಬರಿ ದಾಸ್ತಾನೇ ಇಲ್ಲದಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
2005ರಲ್ಲಿ ಒಮ್ಮೆ ಮಾತ್ರ ಕೊಬ್ಬರಿ ಧಾರಣೆ ಕ್ವಿಂಟಾಲ್ಗೆ 8900 ರು.ಗೆ ಟೆಂಡರ್ ನಡೆಯುವ ಮೂಲಕ ಒಂದು ವಾರ ಮಾತ್ರ ದಾಖಲೆ ಬೆಲೆ ನಿರ್ಮಾಣವಾಗಿತ್ತು. ಈ ಬೆಲೆ ಆಗ ಕೆಲವೇ ದಿನಗಳು ಮಾತ್ರ ಚಾಲ್ತಿಯಲ್ಲಿದ್ದು, ದಿಡೀರನೆ 4000 ರು.ಗಳಿಗೆ ಕುಸಿದು ತೆಂಗು ಬೆಳೆಗಾರರನ್ನು 2011ರವರೆಗೂ ಇನ್ನಿಲ್ಲದ ಆತಂಕಕ್ಕೆ ದೂಡಿತ್ತು. ಕಳೆದ 3 ವರ್ಷಗಳಿಂದಲೂ ಕೊಬ್ಬರಿ ಧಾರಣೆ ಕ್ವಿಂಟಾಲ್ಗೆ 4000ದಿಂದ 4500 ರು.ಗಳ ನಡುವೆಯೇ ಗಿರಕಿ ಹೊಡೆಯುತ್ತಿತ್ತು.
ಹಂತಹಂತವಾಗಿ ತರಲಿ: ಮಾರುಕಟ್ಟೆಯ ಕೊಬ್ಬರಿ ರವಾನೆ ಕಿಂಗ್ ಎಂದೇ ಪ್ರಸಿದ್ದಿಯಾಗಿರುವ ಮಾಜಿ ಶಾಸಕ ಬಿ.ನಂಜಾಮರಿ ಮತ್ತು ದಕ್ಷ, ರೈತಪರ ಅಧಿಕಾರಿ ಎಂದೇ ಹೆಸರು ಗಳಿಸಿರುವ ತಿಪಟೂರು ಮಾರುಕಟ್ಟೆ ಕಾರ್ಯದರ್ಶಿ ಸಿದ್ದುನ್ಯಾಮನಗೌಡ ಪತ್ರಿಕೆಯೊಂದಿಗೆ ಮಾತನಾಡಿ ಮತ್ತೆ ಏರಿಕೆಯಾಗಿರುವ ಕೊಬ್ಬರಿ ಬೆಲೆ ಮತ್ತಷ್ಟು ಏರುವ ಲಕ್ಷಣಗಳು ಕಾಣಬೇಕಾದರೆ ರೈತರು ತಮ್ಮಲ್ಲಿರುವ ಕೊಬ್ಬರಿಯನ್ನು ಒಮ್ಮೆಲೇ ಮಾರುಕಟ್ಟೆಗೆ ತರದೆ ಹಂತ ಹಂತವಾಗಿ ತರುವ ಬಗ್ಗೆ ವಿಚಾರ ಮಾಡಬೇಕಿದೆ. ರೈತರು ಮತ್ತೆ ಅವಸರ ಪಟ್ಟು ದಾಸ್ತಾನನ್ನು ಮಾರುಕಟ್ಟೆಗೆ ತರದೆ 3-4 ವಿಭಾಗ ಮಾಡಿಕೊಂದು ಗುಣಮಟ್ಟದ ಕೊಬ್ಬರಿಯನ್ನು ತಂದಲ್ಲಿ ಬೆಲೆ ಇನ್ನೂ ಹೆಚ್ಚಾಗುವ ಮತ್ತು ಸ್ಥಿರವಾಗಿರುವ ಸಂದರ್ಭ ಇದೆ ಎಂದರು.
ಭ್ರಮನಿರಸನ
ಪ್ರತಿವರ್ಷ ಕೊಬ್ಬರಿ ಬೆಲೆ ದೀಪಾವಳಿ ಹಬ್ಬದ ಸಮಯದಲ್ಲಿ ಮಾತ್ರ ಏರಿಕೆಯಾಗುವ ವಾಡಿಕೆ ಹಲವಾರು ದಶಕಗಳಿಂದ ನಡೆದುಕೊಂಡು ಬರುತ್ತಿದ್ದು, ಕಳೆದ ದೀಪಾವಳಿಯಲ್ಲಿ ಮಾತ್ರ ಬೆಲೆ ಏರಿಕೆ ಆಗದೇ ರೈತರು ಭ್ರಮನಿರಸನರಾಗಿದ್ದರು. ತಮ್ಮ ಬಳಿ ಇದ್ದ ಕೊಬ್ಬರಿಯನ್ನು ದೀಪಾವಳಿ ಸಮಯದಲ್ಲಿ ಮತ್ತು ನಫೆಡ್ ಖರೀದಿ ಸಮಯದಲ್ಲಿ ಕಡಿಮೆ ಬೆಲೆಗೆ ಮಾರಿಕೊಂಡಿರುವ ರೈತರು ಬೆಲೆ ಏರಿಕೆಯ ಈ ಸಮಯದಲ್ಲಿ ಆಗಿರುವ ನಷ್ಟ ನೆನೆಪಿಸಿಕೊಂಡು ನಿಟ್ಟುಸಿರು ಬಿಡುತ್ತಿದ್ದಾರೆ. ಆದರೆ ಕೆಲ ದೊಡ್ಡ ರೈತರು ಹಾಗೂ ವರ್ತಕರ ಬಳಿ ಕೊಬ್ಬರಿ ದಾಸ್ತಾನು ಇದ್ದು ದಾಖಲೆ ಬೆಲೆ ಮತ್ತೆ ಉಳ್ಳವರಿಗೇ ಸಿಗುತ್ತಿರುವುದು ಸಣ್ಣ ಮತ್ತು ಮಧ್ಯಮ ರೈತರಲ್ಲಿ ಇನ್ನಿಲ್ಲದ ನೋವು ತಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

