ತುಮಕೂರು

ಬಿಜೆಪಿಗಾಗಿ ಮತಕೇಳುತ್ತಿಲ್ಲ: ವಿ.ಎಸ್. ಉಗ್ರಪ್ಪ

Published On :

ಈ 16 ನೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಿಜೆಪಿಗಾಗಿ ಮತ ಕೇಳುತ್ತಿಲ್ಲ. ಬದಲಾಗಿ ನರೇಂದ್ರ ಮೋದಿಗಾಗಿ ಮತ ಕೇಳುತ್ತಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ಮಾಜಿ ನಾಯಕ, ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಲೇವಡಿ ಮಾಡಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷದ ಸಿದ್ಧಾಂತ, ತತ್ವಕ್ಕೆ ಬದಲಾಗಿ ಮೋದಿ ಜಪ ಮಾಡಲಾಗುತ್ತಿದೆ. ಗುಜರಾತ್ ಮಾಡೆಲ್ ಎಂಬುದು ಕೇವಲ ಪೇಪರ್ಗಳಲ್ಲಿದೆ. ಆದರೆ ಮೋದಿ ಮಾಡೆಲ್ ದೇಶಕ್ಕೆ ಬೇಕು ಎಂದು ಬಿಂಬಿಸಲಾಗುತ್ತಿರುವುದು ಸರಿಯಲ್ಲ. ಗುಜರಾತ್ ಅಭಿವೃದ್ಧಿ 2006 -07 ರಲ್ಲಿ ಇದ್ದ ಗುಜರಾತ್ ಅಭಿವೃದ್ಧಿ, 2012-13 ರಲ್ಲಿ ಇರುವ ಗುಜರಾತ್ ಅಭಿವೃದ್ಧಿಗೆ ಹೋಲಿಸಿದರೆ ಏನೇನು ಅಲ್ಲ. ಕೇವಲ 900 ಕೋಟಿ ರು. ಗಳ ವ್ಯತ್ಯಾಸವಷ್ಟೇ ಎಂದರು.
ತಾವು ವೈಯಕ್ತಿಕ, ರಾಜಕೀಯ ಸ್ಥಾನ-ಮಾನ ನಿರೀಕ್ಷೆಯಿಟ್ಟುಕೊಂಡು ರಾಜಕಾರಣ ಮಾಡುತ್ತಿಲ್ಲ. ತಮ್ಮನ್ನು ಪಕ್ಷ ಸೈಡ್ ಲೈನ್ ಮಾಡಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಅಕ್ರಮ ಗಣಿಗಾರಿಕೆ ವರದಿ ನೀಡಿ, ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿದ ಸಂತೋಷ ತಮಗಿದೆ ಎಂದು ಉಗ್ಗಪ್ಪ ಪ್ಪಶ್ನೆಯೊಂದಕ್ಕೆ ಉತ್ತರಿಸಿದರು. ರಾಜ್ಯದಲ್ಲಿ ಈ ಬಾರಿ 18 ರಿಂದ 20 ಲೋಕಸಭಾ ಸೀಟುಗಳು ಕಾಂಗ್ರೆಸ್ ಪಕ್ಷಕ್ಕೆ ಲಭ್ಯವಾಗಲಿವೆ ಎಂಬ ವಿಶ್ವಾಸವನ್ನು ಉಗ್ರಪ್ಪ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವದಲ್ಲಿ ವಿರೋಧಿಗಳ ಸೋಲನ್ನು ಬಯಸಬೇಕೇ ಹೊರತು, ಸಾವನ್ನಲ್ಲ ಎಂದು ಕೆಪಿಸಿಸಿ ಅಧ್ಯಕ್ಷರ ಹೇಳಿಕೆಗೆ ಸಂಬಂಧಿಸಿದಂತೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.