ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಖಚಿತ
ಕೊರಟಗೆರೆ: ದೇಶದಲ್ಲಿ ನರೇಂದ್ರಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭವಿಷ್ಯ ನುಡಿದರು.
ಅವರು ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ತಾಲೂಕು ಬಿಜೆಪಿ ಘಟಕದಿಂದ ಏರ್ಪಡಿಸಿದ್ದ ಮಹಿಳಾ ಮೋರ್ಚಾ ಸಮಾರಂಭದಲ್ಲಿ ಮಾತನಾಡಿ ಯುಪಿಎ ಸರ್ಕಾರ ಮಹಿಳೆಯರಿಗೆ ರಕ್ಷಣೆ ನೀಡಲಾಗದೆ ಅಮಾಯಕ ಹೆಣ್ಣು ಮಕ್ಕಳು ಅತ್ಯಾಚಾರದಿಂದ ಸಾವನ್ನಪ್ಪಿದ್ದಾರೆ, ದೇಶದ ರಕ್ಷಣಾ ಇಲಾಖೆಯನ್ನೂ ದುರ್ಬಲ ಗೊಳಿಸಿರುವ ಯುಪಿಎ ಸರ್ಕಾರ ದೇಶದಲ್ಲಿ ಬಡತನ, ಹದಗೆಟ್ಟ ಕಾನೂನು ವ್ಯವಸ್ಥೆ, ಹಣದುಬ್ಬರ ಮಾಡಿರುವುದೇ ಅದರ ಸಾಧನೆಯಾಗಿದ್ದು ಇದಕ್ಕಾಗಿಯೇ ಬಲಿಷ್ಠ ಭಾರತವನ್ನು ಕಟ್ಟುವ ಹೊಣೆ ಬಿಜೆಪಿ ಹೊಂದಿದೆ. ಅದಕ್ಕಾಗಿಯೆ ಸಮರ್ಥ ನಾಯಕ ನರೇಂದ್ರಮೋದಿಯವರನ್ನು ಪ್ರಧಾನ ಅಭ್ಯರ್ಥಿ ಎಂದು ಬಿಂಬಿಸಲಾಗಿದೆ ಎಂದರು.
ವಿಶೇಷ ಕಾನೂನು: ದೇಶದಲ್ಲಿ ನರೇಂದ್ರ ಮೋದಿಯವರ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದರೆ ಮಹಿಳೆಯರ ರಕ್ಷಣೆಗೆ ವಿಶೇಷವಾದ ಕಾನೂನನ್ನು ತರಲಾಗುವುದು ಎಂದ ಅವರು ಗುಜರಾತ್ ರಾಜ್ಯದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳೆ ಸಾಕ್ಷಿಯಾಗಿದ್ದು ಆ ರಾಜ್ಯದಲ್ಲಿ ರೈತರಿಗೆ ವಿಶೇಷವಾದ ಆರ್ಥಿಕ ನೆರವು, ದಿನದ 24 ಗಂಟೆ ವಿದ್ಯುತ್ ಹಾಗೂ ಮಹಿಳೆಯರಿಗೆ ವಿಶೇಷವಾದ ಕಾನೂನನ್ನು ರಚಿಸಲಾಗಿದೆ. ಈ ಅಭಿವೃದ್ಧಿ ಕೆಲಸಗಳು ಭಾರತದಾದ್ಯಂತ ಅನುಷ್ಠಾನ ಗೊಳಿಸಲು ನರೇಂದ್ರಮೋದಿಯವರನ್ನು ಪ್ರದಾನಿಯನ್ನಾಗಿ ಮಾಡಬೇಕು ಈ ವಿಷಯವನ್ನು ನಮ್ಮ ಪಕ್ಷದ ಮಹಿಳೆಯರು ಗ್ರಾಮೀಣ ಹಾಗೂ ನಗರದ ಪ್ರತಿ ಮಹಿಳೆಯರಿಗೂ ತಲುಪಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಂತೆ ಮಾಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯೆ ಹಾಗೂ ಚಿತ್ರ ನಟಿ ತಾರಾ ಮಾತನಾಡಿ ಬಿಜೆಪಿ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರು ಪ್ರಧಾನಿ ಸ್ಥಾನ ಪಡೆಯಬಹುದು ಎಂಬುದಕ್ಕೆ ಟೀ ಮಾರುತ್ತಿದ್ದು ರಾಜಕೀಯದಲ್ಲಿ ಬೆಳೆದ ನರೇಂದ್ರ ಮೋದಿಯವರೇ ಸಾಕ್ಷಿಯಾಗಿದ್ದಾರೆ. ಇತರ ಪಕ್ಷಗಳ ರೀತಿ ವಂಶ ಪಾರಂಪರ್ಯ ರಾಜಕಾರಣ ಬಿಜೆಪಿ ಪಕ್ಷದಲ್ಲಿಲ್ಲ ಎಂದರು.
ಯುಪಿಎ ಸರ್ಕಾರದಲ್ಲಿ ಮಹಿಳೆಯರ ಮೇಲೆ ದಬ್ಬಾಳಿಕೆ ಹೆಚ್ಚುತ್ತಿದ್ದು ಬಿಜೆಪಿ ಸರ್ಕಾರದಿಂದ ಮಹಿಳಾ ರಕ್ಷಣೆ ಸಾಧ್ಯ. ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಮಹಿಳಾ ಕಾನೂನುಗಳನ್ನು ಸಮರ್ಥವಾಗಿ ಬಲ್ಲವರಾಗಿದ್ದಾರೆ ಎಂದರು.
ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಸುಲೋಚನಾಭಟ್, ಜಿಲ್ಲಾಧ್ಯಕ್ಷ ಸುರೇಶ್ಗೌಡ, ತಾಲೂಕು ಅಧ್ಯಕ್ಷ ಎಸ್. ಪವನ್ ಕುಮಾರ್ ಮಾಜಿ ಶಾಸಕ ಸಿ.ವೀರಭದ್ರಯ್ಯ, ಮರಿಸ್ವಾಮಿ, ವಿಜಯ್ ಕುಮಾರ್, ಸಿ.ಎಸ್. ಹನುಮಂತರಾಜು, ಪ್ರಸನ್ನಕುಮಾರ್, ವಿಶ್ವನಾಥ್, ಹೇಮಲತಾ ಇನ್ನಿತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

