ತುಮಕೂರು

ದೇವೇಗೌಡರ ಜಿಲ್ಲಾ ಪ್ರವಾಸ ಇಂದಿನಿಂದ

Published On :

ತುಮಕೂರು: ಏ.7 ಹಾಗೂ 8 ರಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತುಮಕೂರು ಜಿಲ್ಲೆಯಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಕೈಗೊಳ್ಳಲ್ಲಿದ್ದಾರೆ ಎಂದು ತುಮಕೂರು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಾ.ಎಂ.ಆರ್. ಹುಲಿನಾಯ್ಕರ್ ತಿಳಿಸಿದರು.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಏ.7 ರಂದು 10 ಗಂಟೆಗೆ ಪಾವಗಡ, 1 ಗಂಟೆಗೆ ಶಿರಾ, 2 ಗಂಟೆಗೆ ಬುಕ್ಕಾಪಟ್ಟಣ, 3 ಗಂಟೆಗೆ ಕಾಯಿತಿಮ್ನಳ್ಳಿ ಬಹಿರಂಗ ಸಭೆ ಏರ್ಪಾಟಾಗಿದೆ. 3-30 ಕ್ಕೆ ಹುಳಿಯಾರ್‌ನಲ್ಲಿ ರೋಡ್ ಶೋ ಏರ್ಪಾಟಾಗಿದೆ. ಸಂಜೆ 5 ರಿಂದ 10 ರವೆರೆಗೆ ತಿಪಟೂರಿನಲ್ಲಿ ರೋಡ್ ಶೋ, ಗಂಗನಹಳ್ಳಿ, ಹುಣಸೇಘಟ್ಟ, ಬಜಗೂರು, ಮಲ್ಲೇನಹಳ್ಳಿ,ದಸರಿಘಟ್ಟ, ನೊಣವಿನಕೆರೆಗಳಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮ ಏರ್ಪಾಟಾಗಿದೆ. ನಂತರ ದೇವೇಗೌಡರು ಬೆಂಗಳೂರಿಗೆ ತೆರಳಲಿದ್ದಾರೆ.
ಏ. 8 ರಂದು ಬೆಳಗ್ಗೆ 11 ಗಂಟೆಗೆ ಕುಣಿಗಲ್ ಖಾಸಗಿ ಬಸ್ ನಿಲ್ದಾಣದ ಬಳಿ, ನಂತರ, ಹೆಬ್ಬೂರು, ನಾಗವಲ್ಲಿಯಲ್ಲಿ ರೋಡ್ ಶೋ, ಮಧ್ಯಾಹ್ನ 1 ಗಂಟೆಗೆ ತುಮಕೂರಿನ ಕೇಂದ್ರ ಗ್ರಂಥಾಲಯ ಆವರಣದಲ್ಲಿ ಬಹಿರಂಗ ಸಭೆ ನಡೆಸಲಿದ್ದಾರೆ. ತುಮಕೂರು ಸಭೆಗೂ ಮುನ್ನ ಕುಣಿಗಲ್ ಗೇಟ್‌ನಿಂದ ಬೈಕ್ ರ್ಯಾಲಿ ಏರ್ಪಾಟಾಗಿದೆ. ಮಧ್ಯಾಹ್ನ 3-30 ಕ್ಕೆ ಮದುಗಿರಿ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಹುಲಿನಾಯ್ಕರ್ ತಿಳಿಸಿದರು.
     ಜಿಎಸ್ ಬಿ ಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ ಎಂಬ ತಮ್ಮ ಟೀಕೆಯನ್ನು ಸಮರ್ಥಿಸಿಕೊಂಡ ಹುಲಿನಾಯ್ಕರ್, ಜಿಎಸ್‌ಬಿ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದರು. ಜಿಲ್ಲಾ ಜೆಡಿಎಸ್‌ನಲ್ಲಿ ಒಗ್ಗಟ್ಟಿದೆ. ಒಡಕಿಲ್ಲ ಎಂದ ಹುಲಿನಾಯ್ಕರ್, ಸಾಹಿತಿಗಳು ಯಾವುದೇ ಪಕ್ಷದ ಪರ ವಹಿಸಿ ಪ್ರಚಾರ ನಡೆಸಬಾರದು.ತಪ್ಪುಗಳನ್ನು ಎತ್ತಿ ತೋರಿಸಲಿ. ಆದರೆ ಪಕ್ಷಪಾತ,  ಪ್ರಚಾರ ಬೇಡ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.