ತುಮಕೂರು

ಶಾಸಕ ಡಿ.ನಾಗರಾಜಯ್ಯಗೆ ಹತಾಶೆ

Published On :

ಕ.ಪ್ರ.ವಾರ್ತೆ ಕುಣಿಗಲ್  ಏ.6
ತಾಲೂಕಿನಲ್ಲಿ ಕಾಂಗ್ರೆಸ್ ಜನಪ್ರಿಯತೆ ದಿನದಿಂದದಿನಕ್ಕೆ ಹೆಚ್ಚುತ್ತಿರುವ ಕಾರಣ, ಸೋಲಿನಹತಾಶೆ
ಮನೋಭಾವದಿಂದ ಜೆಡಿಎಸ್ ಮುಖಂಡ, ಶಾಸಕ ಡಿ.ನಾಗರಾಜಯ್ಯ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ನಿರಾಧಾರ ಆರೋಪಗಳನ್ನು ಮಾಡುತ್ತಾ ಕ್ಷೇತ್ರದ ಮತದಾರರಿಗೆ ತಪ್ಪುಮಾಹಿತಿ ನೀಡುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲವೆಂದು ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ತಿಳಿಸಿದರು.
 ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆ ಘೋಷಣೆ ಮುನ್ನ ಕನಕಪುರದಲ್ಲಿ ನಡೆದ ಕನಕೋತ್ಸವ ಸಮಾರಂಭದಲ್ಲಿ ವಿತರಿಸಲಾದ ಕೈಗಡಿಯಾರಗಳನ್ನು ಶಾಸಕ ಡಿ.ನಾಗರಾಜಯ್ಯ, ಕಾಂಗ್ರೆಸ್ ಅಭ್ಯರ್ಥಿ ಮತದಾರರಿಗೆ  ಹಂಚುತ್ತಿದ್ದಾರೆಂದು ಆರೋಪಿಸುತ್ತಿದ್ದಾರೆ. ಇವರದೆ ಪಕ್ಷದ ಕಾರ್ಯಕರ್ತರೇ ಸಮಾರಂಭಕ್ಕೆ ತೆರಳಿ ಕೈಗಡಿಯಾರ ಪಡೆದಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಜನಪ್ರಿಯತೆ ಸಹಿಸಲಾಗದೆ, ಜೆಡಿಎಸ್  ಮುಖಂಡರು ಪರದಾಡುವಂತಾಗಿ ಜನತೆಗೆ ದಿಕ್ಕುತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ.  ಡಿ.ನಾಗರಾಜಯ್ಯ, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ವಿರುದ್ಧ ಯಾವುದೇ ಆರೋಪಗಳನ್ನು ಮಾಡುವ ಮುನ್ನ ದಾಖಲೆಗಳ ಸಮೇತ ಮಾಡುವಂತೆ ಸವಾಲು ಹಾಕಿದರು.
ಯೋಜನೆಗೆ ತೊಡರಗಾಲು: ಮುಖಂಡ ಡಾ.ರಂಗನಾಥ್, ಕಾಂಗ್ರೆಸ್ ಅಭ್ಯರ್ಥಿ ಇರಲಿ, ಯಾವುದೇ ಹಂತದ ಮುಖಂಡರಿರಲಿ ಕುಡಿಯುವ ನೀರಿನ ವಿಷಯದಲ್ಲಿ ರಾಜಕಾರಣ ಮಾಡುವುದಿಲ್ಲ, ಮಾಡುವ ಅವಶ್ಯಕತೆ ಇಲ್ಲ. ಕ್ಷೇತ್ರದ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸಲು ಕಾಂಗ್ರೆಸ್ ಮುಖಂಡರು ಮುಂದಾಗಿದ್ದು, ಇದೇ ಜೆಡಿಎಸ್ ಮುಖಂಡರು, ಶಾಸಕರು, ಬಹುತೇಕ ಕಡೆ ಯೋಜನೆಗೆ ತೊಡರುಗಾಲು ಹಾಕಿದ್ದಾರೆ. ಎಡೆಯೂರಿನಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಘಟಕ ಕಾರ್ಯಾರಂಭ ಮಾಡಿದ ಎರಡೇ ದಿನಕ್ಕೆ ಮುಚ್ಚಿಸಲು ಜೆಡಿಎಸ್ ಮುಖಂಡರು ಮೂಲಕ ಸಣ್ಣತನ ತೋರಿದ್ದಾರೆ ಎಂದರು.
ಕಾಂಗ್ರೆಸ್ ಸಂಸದರು ಬಂದು ಕೇವಲ ಕೆಲವೇ ತಿಂಗಳ ಅವಧಿಯಲ್ಲಿ 16ಕ್ಕೂಹೆಚ್ಚು ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆಗೆ ಯಾವುದೇ ಪಕ್ಷ, ಜಾತಿ, ಮತ ನೋಡದೆ ಮುಂದಾಗಿದ್ದಾರೆ. ಕ್ಷೇತ್ರದಲ್ಲಿ ಕಳೆದ ಹಲವು ದಶಕದಿಂದಿರುವ ಜೆಡಿಎಸ್ ಶಾಸಕರು ಏಕೆ ಮಾಡಲಿಲ್ಲ. ಜೆಡಿಎಸ್ ಮುಖಂಡರು ಕುಡಿಯುವ ನೀರಿಗೆ ಕಲ್ಲುಹಾಕುವಂತ ಕೀಳುತನದ ರಾಜಕಾರಣ ಮಾಡಿದಲ್ಲಿ ಕ್ಷೇತ್ರದ ಜನತೆ ತಕ್ಕಪಾಠ ಕಲಿಸಲಿದ್ದಾರೆ
ಎಂದು ಎಚ್ಚರಿಸಿ, ಇದೇ ಎಂಟರಂದು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅಮೃತೂರಿನಲ್ಲಿ ಮತಯಾಚನೆಗೆ ಆಗಮಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸೇರಿದಂತೆ ಇತರೆ ಪ್ರಮುಖರಿಂದ ಬಹಿರಂಗಸಭೆ ಹಮ್ಮಿಕೊಳ್ಳಲಾಗುವುದೆಂದರು. ಬ್ಲಾಕ್ ಅಧ್ಯಕ್ಷ ಶಂಕರ್, ಮಹಿಳಾ ಕಾಂಗ್ಸೆಸ್ ಜಿಲ್ಲಾಧ್ಯಕ್ಷೆ
ಗಾಯಿತ್ರಿರಾಜು, ಮುಖಂಡರಾದ ಗಿರೀಶ್, ರೆಹಮಾನ್ ಷರೀಫ್, ಪುರಸಭೆ ಸದಸ್ಯ ರಂಗಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.