ಜೆಡಿಎಸ್ಗೆ ಮತ ಹಾಕುವುದು ದಂಡ
ಚಿಕ್ಕನಾಯಕನಹಳ್ಳಿ: ಪ್ರಾದೇಶಿಕ ಪಕ್ಷವಾದ ಜೆಡಿಎಸ್ನಿಂದ ದೇಶದ ಅಭಿವೃದ್ಧಿ ಮತ್ತು ರಕ್ಷಣೆ ಸಾಧ್ಯವಿಲ್ಲದ ಮಾತು. ಆದ್ದರಿಂದ ಆ ಪಕ್ಷಕ್ಕೆ ಮತಹಾಕುವುದು ವೇಸ್ಟ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್ ಅನ್ನು ಲೇವಡಿ ಮಾಡಿದರು.
ಅವರು ಪಟ್ಟಣದ ಸರ್ಕಾರಿ ಮಾಧ್ಯಮಿಕ ಶಾಲೆ ಮೈದಾನದಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಿದ್ದರು. ಜೆಡಿಎಸ್ ಅನ್ನು ಅದರ ಅಭ್ಯರ್ಥಿಗಳೇ ನಂಬಲಾರದ ಸ್ಥಿತಿಯಾಗಿದೆ. ದೇವೇಗೌಡ ಮತ್ತು ಕುಮಾರಸ್ವಾಮಿಯವರ ಮೇಲೆ ಮತದಾರರಿಗೆ ನಂಬಿಕೆಯಿಲ್ಲ, ಇನ್ನು ಅಭ್ಯರ್ಥಿಗಳು ಚುನಾವಣಾ ಕಣದಿಂದ ಪಲಾಯನ ಮಾಡದೆ ಏನು ಮಾಡುತ್ತಾರೆ ಎಂದು ಕಾರವಾರ ಮತ್ತು ಬೆಳಗಾವಿ ಅಭ್ಯರ್ಥಿಗಳ ಪಲಾಯನವನ್ನು ಉದಾಹರಿಸಿದರು.
ದೇಶದ ಮತದಾರರಿಂದ ನಿರ್ಣಯವಾಗುವ ಈ ಚುನಾವಣೆ ಮುಂದಿನ ಭವಿಷ್ಯದ ದಿಕ್ಸೂಚಿಯಾಗಿದೆ. ಕಳೆದ 10 ತಿಂಗಳ ಹಿಂದೆ ಕರ್ನಾಟಕವನ್ನು ಕೈಗೆ ನೀಡಿದ್ದೀರಿ. ಅದರಂತೆ ಮುಂಬರುವ ಚುನಾವಣೆಯಲ್ಲಿ ದೇಶವನ್ನು ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕುವ ಮೂಲಕ ನೀಡಿ ಎಂದರು.
ವೇಸ್ಟ್: ಜೆಡಿಎಸ್ಗೆ ಅಸ್ಥಿತ್ವವಿರುವುದೇ ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರದಂತಹ 3 ರಿಂದ 4
ಕ್ಷೇತ್ರಗಳಲ್ಲಿ. ತುಮಕೂರಿಗೆ ಅಭ್ಯರ್ಥಿ ಸಿಗದೆ ಬೆಂಗಳೂರಿನ ಅಭ್ಯರ್ಥಿಯನ್ನು ತಂದು ಇಲ್ಲಿ ನಿಲ್ಲಿಸಿದ್ದಾರೆ. ಎ.ಕೃಷ್ಣಪ್ಪನವರಿಗೂ ತುಮಕೂರಿಗೂ ಏನು ಸಂಬಂಧ, ಅವರ ಸೇವೆ ಏನು, ಆದ್ದರಿಂದ ಅವರು ಗೆಲ್ಲುವುದಿಲ್ಲ.ಈ ನಿಟ್ಟಿನಲ್ಲಿ ಜೆಡಿಎಸ್ಗೆ ಮತಹಾಕುವುದು ವೇಸ್ಟ್ ಎಂದರು.
ಇನ್ನು ಬಿಜೆಪಿ ಒಂದು ಕೋಮುವಾದಿ ಪಕ್ಷ. ಜನಸಂಘದ ಹಿಂದುತ್ವದ ಪ್ರತಿಪಾದನೆಯೇ ಅದರ ಅಜೆಂಡಾ.ಅವರು ಅಧಿಕಾರಕ್ಕೆ ಬಂದರೆ 370 ನೇ ವಿಧಿ ರದ್ದು, ಏಕರೂಪ ನಾಗರಿಕ ಸಂಹಿತೆ ಜಾರಿ, ರಾಮಂದಿರ ನಿರ್ಮಾಣದಂತಹ ಕಾರ್ಯಗಳಿಗೆ ಕೈಹಾಕುವ ಮೋದಿ ಗ್ಯಾಂಗ್, ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತದೆ. ಗೋಧ್ರಾ
ಹತ್ಯಾಕಾಂಡದ ಬಗ್ಗೆ ಬಿಜೆಪಿಗೆ ಪಶ್ಚಾತ್ತಾಪವಿಲ್ಲ, ಅವರ ಭಾಷಣದಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ, ಬಡವರ ಬಗ್ಗೆ ಪ್ರಸ್ತಾಪವಿಲ್ಲ. ಆದ್ದರಿಂದ ಎಲ್ಲರು ತೀರ್ಮಾನಿಸಿ ಮೋದಿ ಪ್ರಧಾನಿಯಾಗುವುದನ್ನು ತಡೆಯಬೇಕು ಎಂದರು.
ಜೆಡಿಎಸ್ ಅನ್ನು ಅದರ ಅಭ್ಯರ್ಥಿಗಳೇ ನಂಬಲಾರದ ಸ್ಥಿತಿಯಾಗಿದೆ. ದೇವೇಗೌಡ ಮತ್ತು ಕುಮಾರಸ್ವಾಮಿಯವರ ಮೇಲೆ ಮತದಾರರಿಗೆ ನಂಬಿಕೆಯಿಲ್ಲ, ಇನ್ನು ಅಭ್ಯರ್ಥಿಗಳು ಚುನಾವಣಾ ಕಣದಿಂದ ಪಲಾಯನ ಮಾಡದೆ ಏನು ಮಾಡುತ್ತಾರೆ
-ಸಿದ್ದರಾಮಯ್ಯ, ಮುಖ್ಯಮಂತ್ರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

