ತುಮಕೂರು

13 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ: ಕೃಷ್ಣಪ್ಪ

Published On :

ತುಮಕೂರು: ಈ ಬಾರಿಯ ಚುನಾವಣೆಯಲ್ಲಿ ನಮ್ಮ ಪಕ್ಷ ರಾಜ್ಯದಲ್ಲಿ 12 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪ ವ್ಯಕ್ತಪಡಿಸಿದರು. ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ  ನಾನು ದೇವೇಗೌಡರನ್ನು ನಂಬಿದ್ದೇನೆ.
ಕೆಲವರು ಮೋದಿಯನ್ನು, ಮತ್ತೆ ಕೆಲವರು ರಾಹುಲ್ ಗಾಂಧಿಯನ್ನು ಹೇಗೆ ನಂಬುತ್ತಾರೋ ಹಾಗೆ ತಾವು ಗೌಡರನ್ನು ನಂಬಿರುವುದಾಗಿ ತಿಳಿಸಿದರು. ಜೆಡಿಎಸ್ ಒಂದು ಸ್ಥಾನವೂ ಬರುವುದಿಲ್ಲ ಎಂಬ ಮುಖ್ಯಮಂತ್ರಿಗಳ ಪ್ರತಿಕ್ರಿಯೆಗೆ ತೀಕ್ಷ್ಮಣವಾಗಿ ಪ್ರತಿಕ್ರಿಯಿಸಿದ ಕೃಷ್ಣಪ್ಪ ನಾಲಿಗೆ ಮೇಲೆ ಹಿಡಿತವಿಲ್ಲದವರು ಹೀಗೆ ಮಾತನಾಡುತ್ತಾರೆ. ಚುನಾವಣೆ ನಂತರ ಸಿದ್ದರಾಮಯ್ಯ ಅವರಿಗೆ ಜನರೇ ಉತ್ತರ ನೀಡಲಿದ್ದಾರೆ ಎಂದರು.

ಮುದ್ದಹನುಮೇಗೌಡರ ಪರ ಅನುಕಂಪದ ಅಲೆ: ವೀರಣ್ಣ
ಕೊರಟಗೆರೆ: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡರ ಅನುಕಂಪದ ಅಲೆ ಇದ್ದು ಮತದಾರ ಅಭಿವೃದ್ಧಿಗೆ ಒಲವು ತೋರಿಸುತ್ತಿರುವುದರಿಂದ ಅವರ ಗೆಲವು ಖಚಿತ ಎಂದು ಮಾಜಿ ಸಚಿವ ಸಿ ವೀರಣ್ಣ ತಿಳಿಸಿದರು. ಅವರು ಕೊರಟಗೆರೆ ವಿದಾನ ಸಭಾ ಕ್ಷೇತ್ರದ ಕೋಳಾಲ ಹೋಬಳಿ ವ್ಯಾಪ್ತಿಯ ತಣ್ಣೇನಹಳ್ಳಿ ಗ್ರಾಮದಲ್ಲಿ ಮುದ್ದಹನುಮೇಗೌಡರ ಪರ ಪ್ರಚಾರದ ಬಳಿಕ ಮಾತನಾಡಿ ಈ ಬಾರಿ ಜನರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ ಕೊರಟಗೆರೆ ವಿಧಾನ ಸಭಾ ಕ್ಷೇತ್ರದಿಂದ ಅತಿ ಹೆಚ್ಚು ಮತಗಳನ್ನು ನೀಡಲಿದ್ದಾರೆಂದರು. ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಜನರಲ್ಲಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಸೋಲಿಸಿದ ತಪ್ಪು ಭಾವನೆ ಕಾಡುತ್ತಿದ್ದು ಪರಿತಪಿಸುತ್ತಿದ್ದಾರೆ. ಆದ್ದರಿಂದ ಈ ಬಾರಿ ಕ್ಷೇತ್ರದ ಎಲ್ಲಾ ಸಮುದಾಯದ ಮತದಾರರು ಡಾ.ಜಿ.ಪರಮೇಶ್ವರ್ ಪರವಾಗಿ ಹಾಗೂ ಸ್ವಚ್ಛ, ಸಜ್ಜನ ರಾಜಕಾರಣಿ, ಅಭಿವೃದ್ಧಿಗಳ ಬಗ್ಗೆ ವಿಶೇಷ ಕಾಳಜಿಯನ್ನು ಇಟ್ಟು ಕೆಲಸ ಮಾಡುವ ಮುದ್ದಹನುಮೇಗೌಡರನ್ನು ಬೆಂಬಲಿಸಿ ಮತ ನೀಡಲಿದ್ದಾರೆ ಎಂದರು. ಪೆಟ್ರೋಲ್ ಬಂಕ್ ತಿಮ್ಮರಾಯಪ್ಪ, ರಾಮಚಂದ್ರಪ್ಪ, ಆನಂದ್, ಟಿ.ಆರ್. ಗೋವಿಂದರಾಜು, ರವಿಶಂಕರ್, ಶಿವಕುಮಾರ್, ಸದಾಶಿವ, ಮುರಳೀಧರ, ಶಿವಶಂಕರ್, ಪುಟ್ಟೆಗೌಡ, ಲಕ್ಷ್ಮಣ್, ಹನುಮಂತರಾಯಪ್ಪ, ಸಂಜೀವರಾಜು, ಅಂಬರೀಷ್ ಸೇರಿದಂತೆ ಇತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.