ಜಿಲ್ಲೆಯ ಕೆಲವಡೆ ಮತದಾನ ಬಹಿಷ್ಕಾರ
ತುಮಕೂರು: ಜಿಲ್ಲೆಯ ಕೆಲವು ಮತಗಟ್ಟೆಗಳಲ್ಲಿ ಮತದಾನ ಬಹಿಷ್ಕಾರ ಹೊರತು ಪಡಿಸಿದಂತೆ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ ನಡೆದಿದೆ.
ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಒಟ್ಟು 16 ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಸಿಪಿಐ, ಬಿ.ಎಸ್.ಪಿ, ಅಭ್ಯರ್ಥಿಗಳ ಜೊತೆಗೆ ಎಎಪಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದು, ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ದಬ್ಬೆಘಟ್ಟ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸುಮಾರು 16 ಹಳ್ಳಿಗಳ ಜನರು ಮತದಾನವನ್ನು ಬಹಿಷ್ಕರಿಸಿದರೆ, ಶಿರಾ ತಾಲೂಕಿನ ಹಲ್ಕೂರು ಗ್ರಾಮಸ್ಥರು ಜೀವಸಂಕುಲಕ್ಕೆ ಮಾರಕವಾಗಿರುವ ಕೋಳಿಫಾರಂ ತೆರವಿಗೆ ಒತ್ತಾಯಿಸಿ ಮತದಾನ ಬಹಿಷ್ಕರಿಸಿದ್ದಾರೆ.
ತುರುವೇಕೆರೆ ತಾಲೂಕಿನ ಬಿಗೇನಹಳ್ಳಿ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಮತದಾನವನ್ನು ಬಹಿಷ್ಕರಿಸಿದ್ದಾರೆ.
ಉಳಿದಂತೆ ಪಾವಗಡ ತಾಲೂಕಿನ ನಿಜಗಲ್, ಹಳ್ಳದ ಹೊಸಹಳ್ಳಿ ಗ್ರಾಮದ ಜನರು ಮತದಾನವನ್ನು ಬಹಿಷ್ಕರಿಸಿರುವುದು ಕಂಡುಬಂದಿದೆ.
ನೋಟಾಗಾಗಿ ಪ್ರತ್ಯೇಕ ಮತಯಂತ್ರ: ಚುನಾವಣೆಗೆ ಬಳಕೆಯಾಗುತ್ತಿರುವ ಎಲೆಕ್ಟ್ರಾನಿಕ್ ಮತಯಂತ್ರದ ಬ್ಯಾಲೇಟ್ ಯೂನಿಟ್‌ನಲ್ಲಿ 16 ಜನರ ಹೆಸರು ಮಾತ್ರ ಸೇರಿಸಲು ಅವಕಾಶವಿದೆ.
ಆದರೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳಿದ್ದು, ಇದೇ ಮೊದಲ ಬಾರಿಗೆ ಪರಿಚಯಿಸುತ್ತಿರುವ ನೋಟಾ (ಮೇಲಿನ ಯಾರು ಅಲ್ಲ) ಎಂಬ ಹೊಸ ಬಟನ್‌ಗಾಗಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮತ್ತೊಂದು ಬ್ಯಾಲೆಟ್ ಯೂನಿಟ್ ನ್ನು ಇರಿಸಿದ್ದು ಒಂದರ ಪಕ್ಕ ಒಂದನ್ನು ಇಡಲಾಗಿದೆ.
ನಿಡಗಲ್ ಹೋಬಳಿಯಲ್ಲಿ ಮತದಾನ ಬಹಿಷ್ಕಾರ
ಪಾವಗಡ: ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ವಂಚನೆ ಮತ್ತು ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆಂದು ಆರೋಪಿಸಿ ಗುರುವಾರ ಚುನಾವಣೆಗೆ ಬಹಿಷ್ಕಾರ ಹಾಕಿ ಪ್ರತಿಭಟನೆ ನಡೆಸಿದ ಘಟನೆ ತಾ.ನಿಡಗಲ್ ಹೋಬಳಿ ಕೇಂದ್ರದಲ್ಲಿ ನಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

