ತುಮಕೂರು

ಬಸ್‌ಗಳಿಗಾಗಿ ಪ್ರಯಾಣಿಕರು ಕಾದು ಬಸವಳಿದರು...

Published On :

ಶಿರಾ: ಲೋಕಸಭಾ ಚುನಾವಣೆ ಹಾಗೂ ಸಾಲು ಸಾಲು ಸರ್ಕಾರಿ ರಜೆಗಳ ಹಿನ್ನೆಲೆಯಲ್ಲಿ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್‌ಗಳಿಗಾಗಿ ಪ್ರಯಾಣಿಕರು ಕಾದು ಕಾದು ಬಸವಳಿದ ಸಂಗತಿ ಸಾಮಾನ್ಯವಾಗಿತ್ತು.
ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಹಾಗೂ ಖಾಸಗಿ ಬಸ್  ನಿಲ್ದಾಣದಲ್ಲಿ ಬಸ್‌ಗಾಗಿ ವಿವಿಧ ಊರುಗಳಿಗೆ ಹೋಗಬೇಕಾದ ಪ್ರಯಾಣಿಕರು ಗಂಟೆಗಟ್ಟಲೆ ಕಾಯುತ್ತಿದ್ದರೂ ಬಸ್‌ಗಳು ನಿರೀಕ್ಷಿತ ಸಮಯಕ್ಕೆ ಬಾರದೇ ಪ್ರಯಾಣಿಕರು ಸಾಕಷ್ಟು ಸಂಕಷ್ಟಕ್ಕೆ ಒಳಗಾದರು.  ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಕರ್ತವ್ಯಕ್ಕಾಗಿ ಸಾಕಷ್ಟು ಸರ್ಕಾರಿ ಹಾಗೂ ಖಾಸಗಿ ಬಸ್‌ಗಳನ್ನು ತೆಗೆದುಕೊಂಡಿದ್ದ ಪರಿಣಾಮ ಬುಧವಾರ ಮುಂಜಾನೆಯಿಂದಲೇ ಬಸ್‌ಗಳಿಗಾಗಿ ಪ್ರಯಾಣಿಕರು ಪರದಾಡುವಂತಹ ವಾತಾವರಣ ನಿರ್ಮಾಣವಾಯಿತು.

ಹುಳಿಯಾರು: ಶಾಂತ ಮತದಾನ
ಹುಳಿಯಾರು : ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ನಡೆದ  ಲೋಕಸಭಾ ಚುನಾವಣೆ  ಶಾಂತಿಯುತವಾಗಿ ನಡೆಯಿತು. ಬೆಳಿಗ್ಗೆ 7ಕ್ಕೆ ಮತದಾನ ಪ್ರಾರಂಭಗೊಂಡು ಯಾವುದೇ ಗದ್ದಲ, ಗಲಾಟೆಯಿಲ್ಲದೆ ಶಾಂತಿಯುತವಾಗಿ ಸಂಜೆ 6ರ ತನಕ ನಡೆಯಿತು.
 ಪಟ್ಟಣದ ಒಟ್ಟು 14 ಬೂತ್‌ಗಳ ಪೈಕಿ ಐದಾರು ಬೂತ್‌ಗಳನ್ನು ಬಿಟ್ಟರೆ ಉಳಿದ ಬೂತ್‌ಗಳಲ್ಲಿ ಮಂದಗತಿಯಲ್ಲಿ ಮತದಾನ ಸಾಗಿತ್ತು. ಬಿಜೆಪಿಯ ಜಿ.ಎಸ್.ಬಸವರಾಜು, ಕಾಂಗ್ರೆಸ್ ಮುದ್ದಹನುಮೇಗೌಡ, ಜೆಡಿಎಸ್ ಎ.ಕೃಷ್ಣಪ್ಪ  ಹೋಬಳಿಯಲ್ಲಿ ಸಂಚರಿಸಿ ಸದ್ದು ಮಾಡಿದ್ದನ್ನು ಬಿಟ್ಟರೆ ಇನ್ನುಳಿದ ಪಕ್ಷದವರಾಗಲಿ, ಪಕ್ಷೇತರ ಅಭ್ಯರ್ಥಿಗಳಾಗಲಿ ಗ್ರಾಮೀಣ ಪ್ರದೇಶಕ್ಕೆ ಹೆಚ್ಚಾಗಿ ಗಮನ ನೀಡದ್ದರಿಂದ ಹೆಚ್ಚಿನ ಜನಕ್ಕೆ ಕಣದಲ್ಲಿದ್ದ ಅಭ್ಯರ್ಥಿಗಳ ಬಗ್ಗೆ ತಿಳಿಯಲಿಲ್ಲ.ಮಾಜಿ ಶಾಸಕ ಕಿರಣ್ ಕುಮಾರ್ ಹುಳಿಯಾರಿನ 35ನೇ ಮತಗಟ್ಟೆಯಲ್ಲಿ ಮತಚಲಾಯಿಸಿದರೆ, ಕೆಂಕೆರೆ ಮತಗಟ್ಟೆಯಲ್ಲಿ ತಾ.ಪಂ. ಅಧ್ಯಕ್ಷ ನವೀನ್ ಮೊದಲು ಮತಚಲಾಯಿಸಿದರು.ಶಾಸಕ ಸಿ.ಬಿ.ಸುರೇಶ್ ಬಾಬು ಪಟ್ಟಣದ ವಿವಿಧ ಮತಗಟ್ಟೆಗೆ ಭೇಟಿ ನೀಡಿ ಮಾಹಿತಿ ಪಡೆದರು.
ಹೋಬಳಿಯಲ್ಲಿ ಒಟ್ಟು 58,466 ಮತದಾರರಿದ್ದು, ಶೇ.70ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.ಢಿ

ಜಯಚಂದ್ರ ಕುಟುಂಬ  ಹಕ್ಕು ಚಲಾವಣೆ
ಶಿರಾ:  ಕ್ಷೇತ್ರದಲ್ಲಿ ಎಲ್ಲಾ ಮತಗಟ್ಟೆಗಳಲ್ಲೂ ಶಾಂತಿಯುತ ಮತದಾನ ನಡೆದಿದೆ. ಯಾವುದೇ ರೀತಿಯ ಅವಘಡ ನಡೆದಿಲ್ಲ. ಮತಗಟ್ಟೆಯ ಸಂಖ್ಯೆ 134 ಸೋರೆಕುಂಟೆಯಲ್ಲಿ ಮಾತ್ರ ಮತಯಂತ್ರದ ತಾಂತ್ರಿಕ ದೋಷ ಉಂಟಾಗಿತ್ತು. ಅದನ್ನು ತಕ್ಷಣ ಸರಿಪಡಿಸಲಾಯಿತು ಎಂದು ಸಹಾಯಕ ಚುನಾವಣಾಧಿಕಾರಿ ಮಲ್ಲಿಕಾರ್ಜುನ ಅವಛರು ತಿಳಿಸಿದರು.
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ  ಒಟ್ಟು 264 ಮತಗಟ್ಟೆಗಳಿದ್ದು, ಇದರಲ್ಲಿ 39 ಸೂಕ್ಷ್ಮ, 45 ಅತೀ ಸೂಕ್ಷ್ಮ, 180 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿತ್ತು. ಯಾವುದೇ ಮತಗಟ್ಟೆಯಲ್ಲಿ ಮತ ಬಹಿಷ್ಕಾರ ನಡೆದಿಲ್ಲ ಎಂದು ಅವರು ತಿಳಿಸಿದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಶಿರಾ ಕ್ಷೇತ್ರದಲ್ಲಿ 1,05,747 ಪುರುಷ ಮತದಾರರು, 1,02,017 ಮಹಿಳಾ ಮತದಾರರು 14 ಇತರೆ ಮತದಾರರು ಸೇರಿದಂತೆ ಒಟ್ಟು 2,07,778 ಮತದಾರರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.