ಎತ್ತಿನಹೊಳೆ ಸಾಧಕ-ಬಾಧಕ ಚರ್ಚಿಸಿ
ಶಿರಾ: ಏತ್ತಿನ ಹೊಳೆ ನೀರಾವರಿ ಯೋಜನೆ ಕೋಲಾರ, ತುಮಕೂರು ಜಿಲ್ಲೆಗಳ ಕುಡಿಯುವ ನೀರಿನ ಬವಣೆ ನೀಗಿಸಲು ಸಹಕಾರಿಯಾದರೂ, ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡುವುದಕ್ಕೂ ಮುನ್ನ ಆ ಭಾಗದ ರೈತ ಮತ್ತು ಜನಸಾಮಾನ್ಯರೊಂದಿಗೆ ಯೋಜನೆಯ ಅನುಷ್ಠಾನದಿಂದಾಗುವ ಸಾಧಕ-ಭಾದಕಗಳನ್ನು ಮುಕ್ತವಾಗಿ ಚರ್ಚಿಸಿ ಮನವರಿಕೆ ಮಾಡಿ ಕೊಟ್ಟಾಗ ಮಾತ್ರ ಯಶಸ್ವಿಯಾಗಲಿವೆ ಎಂದು ನಂಜಾವಧೂತ ಸ್ವಾಮೀಜಿ ಹೇಳಿದರು.
ಅವರು ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯ ಶ್ರೀಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದಲ್ಲಿರುವ ಶ್ರೀಅನ್ನಪೋಣೆಶ್ವರ ಪ್ರಾರ್ಥನ ಮಂದಿರದಲ್ಲಿ ಭಕ್ತರು ಹಮ್ಮಿಕೊಂಡಿದ್ದ ನಂಜಾವಧೂತ ಶ್ರೀಗಳ ಹುಟ್ಟು ಹಬ್ಬದ ಸಂಭ್ರಮದಲ್ಲಿ ಭಕ್ತ ಸಮೂಹದಿಂದ ಶುಭಾಶಯ ಸ್ವೀಕರಿಸಿ ಮಾತನಾಡಿದರು. ರೈತ ಬೆಳೆದ ಬೆಳೆಗೆ ಸರ್ಕಾರ ಸೂಕ್ತ ಬೆಂಬಲ ಬೆಲೆ ನಿಗದಿ ಪಡಿಸಬೇಕು ಮತ್ತು ಮಾರುಕಟ್ಟೆ ಸೌಲಭ್ಯ ಒದಗಿಸಿದಾಗ ಮಾತ್ರ ರೈತನ ಏಳಿಗೆ ಸಾಧ್ಯ. ಈ ನಿಟ್ಟಿನಲ್ಲಿ ಹೋರಾಟ ಅಗತ್ಯವಿದ್ದು ಮುಂಬರುವ ದಿನಗಳಲ್ಲಿ ಶ್ರೀಮಠ ಹೋರಾಟ ರೂಪಿಸಲಿದೆ. ನೀರಾವರಿ ಯೋಜನೆಗಳಿಗೆ ಹೆಚ್ಚು ಒತ್ತು ಕೊಟ್ಟು ಸರ್ಕಾರದ ಗಮನ ಸೆಳೆದ ಪರಿಣಾಮ ಮತ್ತು ಆಡಳಿತ ಪಕ್ಷದ ಶಾಸಕ ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಮದಲೂರು ಕೆರೆಗೆ ಹೇಮಾವತಿ ನೀರು ಬರಲು ಸಾಧ್ಯವಾಗುತ್ತಿದೆ. ಇಂತಹ ಹೋರಾಟದಿಂದ ಜನಸಾಮಾನ್ಯನಿಗೆ ಅನುಕೂಲವಾದಾಗ ನಮ್ಮ ಸೇವೆ ಸಂತಸ ನೀಡಲಿದೆ. ಸಮಾಜದಲ್ಲಿ ಶೋಷಿತ ಜನರ ಪರವಾಗಿ ಶ್ರೀಮಠ ಹೋರಾಟ ಕೈಗೊಂಡಾಗ ಭಕ್ತರು ಪಾಲ್ಗೊಂಡು ಅನ್ಯಾಯದ ವಿರುದ್ಧ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರೆ ಅದುವೆ ಭಕ್ತರ ನೀಡುವ ನಿಜವಾದ ಗುರುವಂದನೆ, ಈ ಭಾಗದ ಜ್ವಲಂತ ಸಮಸ್ಯೆಗಳಿಗೆ ಸದಾ ಮುಡಿಪು. ಮನುಷ್ಯನ ಇಚ್ಛಾಶಕ್ತಿಗೆ ನಿಲುಕದ ಶಕ್ತಿ ಇದೇ ನಾವು ಕೂಡುವ ವಿಚಾರಧಾರೆಯಿಂದ ಪ್ರೇರಣೆಯಾದರೆ ಅದುವೇ ಸಂತೃಪ್ತಿತರಲಿದೆ ಎಂದರು.
ಶ್ಲಾಘನೀಯ: ಮಾಜಿ ಶಾಸಕ ಎಚ್.ನಿಂಗಪ್ಪ ಮಾತನಾಡಿ ಶ್ರೀಗಳು ಅತಿಕಿರಿಯ ವಯಸ್ಸಿನಲ್ಲಿ ರೈತ ಪರ ಕಾಳಜಿ ಹೊಂದಿರುವುದು ಶ್ಲಾಘನೀಯ, ತಮ್ಮ ಜನ್ಮ ಜಯಂತಿಯನ್ನು ನೀರಾವರಿ ಹಕ್ಕ್ಕೊತ್ತಯ ಸಮಾವೇಶವಾಗಿ ಆಚರಿಸುತ್ತಿರುವುದು ಇವರ ಸೇವಾ ಕಾರ್ಯ ನಿಷ್ಠೆಗೆ ಕೈಗನ್ನಡಿಯಾಗಿದೆ. ನಿವೃತ್ತ ಚುನಾವಣಾ ಆಯುಕ್ತ ಚಿಕ್ಕಣ್ಣ ಮಾತನಾಡಿ ಜೂನ್ ತಿಂಗಳಿನಲ್ಲಿ ಶ್ರೀಗಳ ಗುರುವಂದನೆ ಸಮಾರಂಭ ಮಾಡಲು ಉದ್ದೇಶಿಸಿದ್ದು, ಈ ಸಮಾರಂಭದಲ್ಲಿ ಸಾಮೂಹಿಕ ವಿವಾಹ ಮತ್ತು ಜನಪರ ಕಾರ್ಯಕ್ರಮ ರೂಪಿಸಲಾಗುವುದೆಂದರು.
ಮಾಜಿ ಸಚಿವ ಬಿ.ಸತ್ಯನಾರಾಯಣ, ಜಿಪಂ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು, ಚಿತ್ರನಟ ಹನುಮಂತೇಗೌಡ, ಜಿಲ್ಲಾ ಕುಂಚಿಟಿಗ-ವಕ್ಕಲಿಗರ ಸಂಘದ ಅಧ್ಯಕ್ಷ ದೊಡ್ಡಲಿಂಗಯ್ಯ, ಮುದಿಮಡು ರಂಗಸ್ವಾಮಯ್ಯ, ಬೆಳ್ಳಿ ಲೋಕೇಶ್, ಪಿ.ಆರ್.ರಮೇಶ್, ಶ್ರೀರಂಗ, ಡಿ.ಯಶೋಧರ, ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್, ಲಗ್ಗೆರೆ ನಾರಯಣಸ್ವಾಮಿ, ಬಿಇಓ ರಾಜಕುಮಾರ್, ಹೊನ್ನಪ್ಪ, ನಾದೂರು ಗಾ.ಪಂ ಅಧ್ಯಕ್ಷೆ ಎಂ.ಲೀಲಾವತಿ ದೇವರಾಜು, ಉಸ್ಮನ್ಸಾಬ್, ಕರವೇ ಅಧ್ಯಕ್ಷ ನಾಗರಾಜು, ಹೊಸಮನೆ ರಂಗನಾಥ್, ಕೆ.ಎಂ.ಶ್ರೀನಿವಾಸ ಸೇರಿದಂತೆ ಹಲವಾರು ಭಕ್ತರು ಶ್ರೀಗಳಿಗೆ ಶುಭಾಷಯ ಕೋರಿದರು, ಇದೇ ಸಂದರ್ಭದಲ್ಲಿ ಲೋಕ ಕಲ್ಯಾಣಾರ್ಥ ಶಿವ ಪಾರ್ವತಿ ಕಲ್ಯಾಣೋತ್ಸವ ಮತ್ತು ಹೋಮ-ಹವನ ಹಮ್ಮಿ ಕೊಳ್ಳಲಾಗಿತ್ತು. ಯುವ ಸಾಹಿತಿ ಶೇಕ್ ಮಹಮದ್ ಅಲಿ ರಚಿಸಿದ್ದ ಕವನ ಸಂಕಲನ ಪುಸ್ತಕ ಬಿಡುಗಡೆ ಮಾಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

