ತುಮಕೂರು

ಹಂದಿ, ನಾಯಿಗಳ ವಾಸಸ್ಥಾನವಾದ ಸಾಮರ್ಥ್ಯ ಸೌಧ

Published On :

ಮಧುಗಿರಿ: ನಿರುದ್ಯೋಗಿ ಯುವ ಜನ ಸೇರಿದಂತೆ ತಾ.ಪಂ. ಪಿಡಿಒ ಕಾರ್ಯದರ್ಶಿ ಮತ್ತಿತರೆ ಸಂಘಟನೆಗಳ ಸದಸ್ಯರಿಗೆ ತರಬೇತಿ ನೀಡಿ ಆತ್ಮವಿಶ್ವಾಸ ಹೆಚ್ಚಿಸುವ ಸಾಮರ್ಥ್ಯ ಸೌಧ ಬಹುತೇಕ ನಿರ್ವಹಣೆಯಿಲ್ಲದೆ ಕಳಹೀನವಾಗಿ ಹಂದಿ, ನಾಯಿ ಮತ್ತಿತರೆ ಪ್ರಾಣಿಗಳ ವಾಸಸ್ಥಾನವಾಗಿ ಮಾರ್ಪಟ್ಟಿದೆ.
ಸರ್ಕಾರ  ಲಕ್ಷಾಂತರ ರು. ಖರ್ಚು ಮಾಡಿ ಕಟ್ಟಿರುವ ಸಾಮರ್ಥ್ಯಸೌಧ ಕಟ್ಟಡದಲ್ಲಿ ಯಾವುದೇ ರೀತಿಯ ಚಟುವಟಿಕೆ ನಡೆಯದೆ ಮತ್ತು ಸೂಕ್ತ ರಕ್ಷಣೆಯಿಲ್ಲದೆ ಸೊರಗುತ್ತಿದ್ದು, ಸರ್ಕಾರದ ಹಣ ಹೇಗೆ ಪೋಲಾಗುತ್ತಿದೆ ಎಂಬುದಕ್ಕೆ ಈ ಸೌಧ ತಾಜಾ ಉದಾಹರಣೆ.
2009-10ನೇ ಸಾಲಿನಲ್ಲಿ ಗ್ರಾಮ ಸ್ವರಾಜ್ ಯೋಜನೆಯಡಿ ಲಕ್ಷಂತಾರ ರು. ಖರ್ಚು ಮಾಡಿ ತಾ.ಪಂ.ಪಿಡಿಒ, ಕಾರ್ಯದರ್ಶಿ ಹಾಗೂ ಸ್ವಯಂಸೇವಕ ಸಂಘಟನೆಗಳು ತರಬೇತಿ ನಡೆಸಿಕೊಳ್ಳಲು ಸಾಮರ್ಥ್ಯ ಸೌಧ ಕಟ್ಟಡ ಕಟ್ಟಲಾಗಿದೆ. ಈ ಕಟ್ಟಡಕ್ಕೆ ಗೇಟ್ ಇಲ್ಲ, ಕಿಟಕಿಗಳು ಪುಡಿ ಪುಡಿಯಾಗಿವೆ. ಬಾಗಿಲಿಗೆ ಬೀಗ ಕೂಡ ಹಾಕಲ್ಲ, ಆಳುವ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗುತ್ತಿದೆ.
ಈ ಕಟ್ಟಡ ಮಧುಗಿರಿ ಶಿರಾ ಗೇಟಿನ ತಾಪಂ ವಸತಿ ಗೃಹಗಳ ಮಧ್ಯಭಾಗದಲ್ಲಿದೆ. ಇಲ್ಲಿ ತಾಪಂಗೆ ಸೇರಿದ 23 ವಸತಿ ಗೃಹಗಳಿದ್ದು ನಾನಾ ಇಲಾಖೆ ನೌಕರರು ಕೂಡ ಈ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿ ಸಮರ್ಪಕ ಕುಡಿವ ನೀರಿಲ್ಲ, ಸ್ವಚ್ಚತೆ ಬಗ್ಗೆ ಕೇಳಬೇಡಿ, ಎಲ್ಲವೂ ಅವ್ಯವಸ್ಥೆಯ ಆಗರ. ಈ ತರಬೇತಿ ಕಟ್ಟಡವೇನೋ ನೋಡಲು ಸಂದರವಾಗಿದೆ. ಒಳಗೆ ಹೋದರೆ ಸ್ವಚ್ಛತೆ ಇಲ್ಲದೆ ದುರ್ನಾತ ಬೀರುತ್ತದೆ. ಈಗಾದರೆ ಗ್ರಾಮ ಸ್ವರಾಜ್ ಯೋಜನೆ ಉದ್ದೇಶ ಈಡೇರಲು ಹೇಗೆ ಸಾಧ್ಯ ಎಂಬುದು ನಾಗರಿಕರ ಪ್ರಶ್ನೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರ ಆಗ್ರಹವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.