ತುಮಕೂರು

ಬ್ಯಾಂಕ್ ಮೂಲಕ ಪ್ರೋತ್ಸಾಹ ಧನ ವಿತರಣೆಗೆ ವಿರೋಧ

Published On :

ಮಂಡ್ಯ: ಬ್ಯಾಂಕುಗಳ ಮೂಲಕ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ವಿತರಣೆ ಮಾಡುವ ಕ್ರಮ ಸರಿಯಲ್ಲ ಎಂದು ಕೀಲಾರ ಹಾಲು ಉತ್ಪಾಕರ ಸಹಕಾರ ಸಂಘದ ಎಸ್. ಕೃಷ್ಣ ತಿಳಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಪ್ರತಿ ಲೀಟರ್ ಹಾಲಿಗೆ 4 ರು.ಪೋತ್ಸಾಹ ಧನ ವಿತರಿಸುತ್ತಿದ್ದು, ಈ ಹಣವನ್ನು ಬ್ಯಾಂಕಿನ ಮೂಲಕ ಪಾವತಿಗೆ ಮುಂದಾಗಿದೆ .ಈ ಕ್ರಮದಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದರು. ಕೆಲ ಹಳ್ಳಿಗಳಲ್ಲಿ ಬ್ಯಾಂಕುಗಳ ಸೌಲಭ್ಯ ಇಲ್ಲದೇ ನಾಲ್ಕಾರು ಕಿಲೋಮೀಟರ್ ದೂರದ ಊರಿಗೆ ಹೋಗಿ ಖಾತೆ ತೆರೆಯಬೇಕಾಗಿದ್ದು, ಈ ಕ್ರಮದಿಂದ ಹಾಲು ಉತ್ಪಾದಕರಿಗೆ ಅನಾನುಕೂಲವಾಗುತ್ತಿದೆ. ಆದ್ದರಿಂದ ಇದನ್ನು ಕೈ ಬಿಟ್ಟು ಸಹಕಾರ ಸಂಘಗಳ ಮೂಲಕವೇ ಹಣ ವಿತರಿಸಬೇಕು. ಇಲ್ಲದಿದ್ದಲ್ಲಿ  ಉಗ್ರ ಹೋರಾಟ ನಡೆಸುವುದಾಗಿ ಕೃಷ್ಣ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ರವಿ,ನಾಗರಾಜು, ಕೆ.ಚಂದ್ರಶೇಖರ್, ಪುಟ್ಟಸ್ವಾಮಿ ಇದ್ದರು.


ರೋಗ ಬಾಧಿತ ತೆಂಗಿನ ತೋಟಗಳಿಗೆ ಸಹಾಯಧನ

ಮಳವಳ್ಳಿ: 2013-14 ನೇ ಸಾಲಿನಲ್ಲಿ ಬರಪೀಡತ ಮತ್ತು ಕೀಟ ರೋಗ ಬಾಧಿತ ತೆಂಗಿನ ತೋಟಗಳಿಗೆ ಸಹಾಯಧನ ನೀಡಲಾಗುವುದೆಂದು ತೋಟಗಾರಿಕೆ ಸಹಾಯಕ ನಿರ್ದೇಶಕ ಪ್ರಸನ್ನ ತಿಳಿಸಿದ್ದಾರೆ. ಹೇಳಿಕೆ ನೀಡಿ, ಸಹಾಯಧನವನ್ನು 2 ಹೆಕ್ಟೇರ್‌ಗೆ ಮಿತಿಗೊಳಿಸಿ ನೀಡಲಾಗುತಿದ್ದು ಇದನ್ನು ಸರ್ಕಾರದ ಆದೇಶದಂತೆ 2 ರೀತಿಯಲ್ಲಿ ಅನುಷ್ಠಾನಗೊಳಿಸಲಾಗುವುದೆಂದು ತಿಳಿಸಿದ್ದಾರೆ. ಮೊದಲನೇಯದಾಗಿ ಸಂಪೂರ್ಣವಾಗಿ ಒಣಗಿರುವ ತೆಂಗಿನ ತೋಟಗಳು ಗಿಡಗಳನ್ನು ಬುಡಸಹಿತ ತೆಗೆದು ಹಾಕಿ ಪರ್ಯಾಯ ಬೆಳೆಗಳಾದ ಮಾವು, ಹುಣಸೆ, ಸೀತಾಫಲ, ಹಲಸು, ನೇರಳೆ, ಗೋಡಂಬಿಯಂತಹ ಬೆಳೆಗಳನ್ನು ಏಕ ಬೆಳೆಯಾಗಿ ಮಣ್ಣು, ಹವಾಮಾನ, ಮಳೆ, ಮಾರುಕಟ್ಟೆ, ಪರಿಸ್ಥಿತಿ ಆಧರಿಸಿ ಬೆಳೆಯಲು ಮತ್ತು ಸೇಬೆ ಹಾಗೂ ಸಪೋಟ ಮಿಶ್ರ ಬೆಳೆಯಾಗಿ ಬೆಳೆಯಲು ಅರಣ್ಯ ಸಸಿಗಳು ಬೆಳೆಯಲು ರೈತರಿಗೆ 12 ಸಾವಿರ ದಂತೆ ಪ್ರತಿ ಹೆಕ್ಟೇರ್ ಪ್ರದೇಶಕ್ಕೆ ನೀಡಲಾಗುವುದೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.