ಖಾತ್ರಿ ಫಲಾನುಭವಿಗಳಿಗೆ ಕಾರ್ಯಾದೇಶ ನೀಡಿಕೆ
ಚಿಕ್ಕನಾಯಕನಹಳ್ಳಿ: ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಂಡುಆರ್ಥಿಕ ಸ್ವಾಲಂಬನೆ ಹೊಂದುವಂತೆ ತಾಪಂ ಮಾಜಿ ಉಪಾಧ್ಯಕ್ಷ ಎ.ಬಿ.ರಮೇಶ್ ಕುಮಾರ್ ಕರೆ ನೀಡಿದರು.
ಅವರು ತಾಲೂಕಿನ ಶೆಟ್ಟೀಕೆರೆ ಗ್ರಾಮಪಂಚಾಯ್ತಿಯಲ್ಲಿ ನಡೆದ ಸಮಾರಂಭದಲ್ಲಿ ಗ್ರಾಮಪಂಚಾಯ್ತಿ ವ್ಯಾಪ್ತಿಯ 50 ಜನ ಫಲಾನುಭವಿಗಳಿಗೆ ಉದ್ಯೋಗಖಾತ್ರಿ ಯೋಜನೆಯಡಿ ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಕಾರ್ಯಾದೇಶ ಪತ್ರಗಳನ್ನು ವಿತರಿಸಿ ಮಾತನಾಡುತ್ತಿದ್ದರು. ಈ ಯೋಜನೆಯಡಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಅನುಕೂಲತೆಗಳನ್ನು ಹೊಂದಬಹುದು. ಕೃಷಿಗೆ ಸಂಬಂಧಿಸಿದ ಎಲ್ಲ ರೀತಿಯ ಕಾಮಗಾರಿಗಳನ್ನು ಪ್ರಾರಂಭಿಸಿ. ರೈತರಿಗೆ ಎಲ್ಲಾ ರೀತಿಯ ನೆರವನ್ನು ನೀಡಲಾಗುವುದು ಎಂದರು. ಸಭೆಯಲ್ಲಿ ಗ್ರಾಮಪಂಚಾಯ್ತಿ ಅಧ್ಯಕ್ಷೆ ದಾಕ್ಷಾಯಿಣಿ ರಮೇಶ್, ಪಿಡಿಓ ಸಿದ್ದರಾಮಯ್ಯ ಮುಂತಾದವರಿದ್ದರು.
8 ತಿಂಗಳ ಹಿಂದೆ ಖಾಲಿಯಾದ ಹುದ್ದೆಗೆ ಇದುವರೆಗೂ ಯಾರಿಲ್ಲ
ಕೃಷಿ ಆಧಾರಿತ ತಾಲೂಕೆಂಬ ಖ್ಯಾತಿಗೊಳಗಾಗಿರುವ ಮತ್ತು ಸದಾ ಬರದ ದವಡೆಯಲ್ಲಿ ಸಿಲುಕಿರುವ ತಾಲೂಕಿಗೆ ಅಧಿಕಾರಿಗಳು ಬರಲು ಹಿಂದೇಟು ಹಾಕುತ್ತಾರೆಂಬ ಮಾತನ್ನು ಅಲ್ಲಗಳೆಯಲಾಗುವುದಿರುವುದಕ್ಕೆ ಇಲ್ಲಿದೆ ಸಾಕ್ಷಿ. ತಾಲೂಕಿನಲ್ಲಿ 680517 ಎಕರೆ ಕೃಷಿ ಭೂಮಿಯಿದ್ದು, ರೈತರು ತಮ್ಮ ಅನುಕೂಲಕ್ಕಾಗಿ ಜಮೀನು ಮಾರಾಟ ಮತ್ತು ಖರೀದಿಸುವುದು ನಿರಂತರ ಪ್ರಕ್ರಿಯೆ. ಇದಕ್ಕೆ ಪೂರಕವಾಗಿ ತಾಲೂಕಿಗೊಂದು ಉಪನೋಂದಣಾಧಿಕಾರಿಗಳ ಕಚೇರಿಯಿದ್ದು, ಕಳೆದ 8 ತಿಂಗಳ ಹಿಂದೆ ಖಾಲಿಯಾದ ಹುದ್ದೆಗೆ ಇದುವರೆಗೂ ಯಾರು ಬರುವ ಸಾಹಸ ಮಾಡಿಲ್ಲದಿರುವುದು ಇಲ್ಲಿನ ರೈತರ ದೌರ್ಭಾಗ್ಯ.
ಮೊದಲೇ ಹೇಳಿದಂತೆ ಬರೀ ಕೃಷಿ ಆಧಾರಿತ ಮತ್ತು ಸದಾ ಬರಗಾಲಕ್ಕೆ ತುತ್ತಾಗುವ ತಾಲೂಕಾಗಿರುವುದರಿಂದ ಇಲ್ಲಿಗೆ ಬರಲು ಯಾರು ಇಷ್ಟಪಡುವುದಿಲ್ಲ. ಅಧಿಕಾರಿಗಳು ಫಲವತ್ತಾದ ಜಾಗಕ್ಕೆ ವರ್ಗಾವಣೆ ಮಾಡಿಸಿಕೊಳ್ಳಲು ಹರಸಾಹಸ ಮಾಡುತ್ತಾರೆ. ಆದರೆ ಖಾಲಿಯಾದ ಉಪನೋಂದಣಾಧಿಕಾರಿಗಳ ಜಾಗಕ್ಕೆ ಇದುವರೆಗು ಯಾರು ಬಂದಿಲ್ಲ. ಇಲ್ಲಿರುವ ಪ್ರಥಮದರ್ಜೆ ಸಹಾಯಕರೇ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಬೇಕಾಗಿರುವುದರಿಂದ, ಯಾವುದೇ ಕೆಲಸಗಳು ನಿರೀಕ್ಷಿತ ಸಮಯದಲ್ಲಿ ಆಗುವುದಿಲ್ಲ. ಇದರಿಂದ ರೈತರಿಗೆ ಸರಿಯಾದ ಸಮಯದಲ್ಲಿ ತಮ್ಮ ಕೆಲಸಗಳು ಆಗದೆ ತಾಪತ್ರಯ ಪಡುತ್ತಿದ್ದಾನೆ. ಇದರ ಜೊತೆಗೆ ಬ್ಯಾಂಕುಗಳಿಂದ ಸಾಲಪಡೆಯಲು ಬೇಕಾದ ಋಣಭಾರ ರಾಹಿತ್ಯದ ನಕಲು, ಕ್ರಯಪತ್ರದಂತಹ ನಕಲುಗಳನ್ನು ಪಡೆಯಲು ಬರುವ ಜನರು ಇಲ್ಲಿಯೂ ಮಧ್ಯವರ್ತಿಗಳ ಶೋಷಣೆಗೊಳಗಾಗುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

