ಬ್ರಾಹ್ಮಣ, ವೈಶ್ಯ ಬಡವರಿಗೆ ಮೀಸಲಾತಿ ಕಲ್ಪಿಸಿ
ಪಾವಗಡ: ಬ್ರಾಹ್ಮಣ ಹಾಗೂ ವೈಶ್ಯ ಸಮುದಾಯಗಳಲ್ಲಿ ಅತ್ಯಂತ ಕಡು ಬಡವರಿದ್ದು ಅವರಿಗೂ ಮೀಸಲಾತಿ ಕಲ್ಪಿಸಿ ಎಂದು ತಾ. ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಎಂ. ಮೈಲಾರರೆಡ್ಡಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬ್ರಾಹ್ಮಣ ಮತ್ತು ವೈಶ್ಯ ಜನಾಂಗಗಳ ಬಹುತೇಕ ಕಡು ಬಡವರಿಗೆ ಇಂದಿಗೂ ವಾಸಿಸಲು ನಿವೇಶನವಾಗಲಿ ಅಥವಾ ಮನೆಗಳಾಗಲಿ ಇಲ್ಲದೇ ಬಡ್ಡಿಯೊಂದಿಗೆ ಸಾಲ ಪಡೆದು ಚಿಲ್ಲರೆ ವ್ಯಾಪಾರ ಮಾಡಿಕೊಂಡ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ. ತಮ್ಮ ಗೌರವ ಕಾಪಾಡಿಕೊಳ್ಳಲು ಮೇಲ್ನೋಟಕ್ಕೆ ಸ್ಥಿತಿವಂತರಾಗಿ ಕಂಡರೂ ತಮ್ಮ ನಿತ್ಯ ಜೀವನಕ್ಕೆ ಪಡಬಾರದ ಕಷ್ಟಪಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಿ ಸರ್ವರಿಗೂ ಸಮಾನತೆ ಸೇರಿದಂತೆ ಮನೆ ನಿರ್ಮಾಣ, ಸಹಾಯಧನ ಮತ್ತು ಆ ಸಮುದಾಯಗಳ ಆರ್ಥಿಕಾಭಿವೃದ್ಧಿಗಾಗಿ ಇತರೆ ಸಮುದಾಯಗಳಿಗೆ ನೀಡಿದಂತೆ ಕನಿಷ್ಠ ಮೀಸಲಾತಿ ಸೌಲಭ್ಯ ಕಲ್ಪಿಸಿ ಅವರ ಏಳಿಗೆಗೆ ಸಹಕರಿಸಲು ತಿಳಿಸಿದರು.
ತಾ.ಬ್ರಾಹ್ಮಣ ಸಮುದಾಯದ ಯುವ ಮುಖಂಡ ಸಿ.ಕೆ.ಪುರ ಬಿಂಧುಮಾದವರಾವ್ ಮಾತನಾಡಿ ಸಮಾನತೆ, ಸುಭದ್ರತೆ ಸೇರಿದಂತೆ ದೇಶದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಆಸಕ್ತಿ ವಹಿಸಿದೆ. ಅದರಂತೆ ಬ್ರಾಹ್ಮಣ ಮತ್ತು ವೈಶ್ಯರಿಗೆ ಸರ್ಕಾರದಲ್ಲಿ ಮೀಸಲಾತಿ ಕಲ್ಪಿಸುವ ಬಗ್ಗೆ ಚಿಂತನೆ ಮಾಡಿದರೆ, ಆರ್ಥಿಕವಾಗಿ ಹಿನ್ನೆಡೆ ಅನುಭವಿಸುತ್ತಿರುವ ಆ ಸಮುದಾಯಗಳ ಕಡು ಬಡವರು ಸ್ವಲ್ಪ ಸುಧಾರಿಸಿಕೊಳ್ಳಲು ಸಾಧ್ಯ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

