ವಸತಿ ಸಚಿವರ ವಜಾಕ್ಕೆ ಒತ್ತಾಯಿಸಿ ಪ್ರತಿಭಟನೆ
ತುಮಕೂರು: ವಸತಿ ಸಚಿವ ಅಂಬರೀಶ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಬಿಜೆಪಿಯ ಭ್ರಷ್ಟ ಆಡಳಿತದ ಪರಿಣಾಮವಾಗಿ ಕೊಳಗೇರಿಗಳಲ್ಲಿನ ದಲಿತರು, ಹಿಂದುಳಿದ ವರ್ಗಗಳ ಬೆಂಬಲದಿಂದಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಅಹಿಂದ ವರ್ಗದ ಮುಖ್ಯಮಂತ್ರಿ
ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ವಸತಿ ಸಚಿವ ಅಂಬರೀಶ್ ಅವರು ತಮಗೆ ವಹಿಸಿರುವ ಪ್ರಮುಖ ಖಾತೆಯಾದ ವಸತಿ ಖಾತೆಯನ್ನು ಸಮರ್ಥವಾಗಿ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದಿದ್ದಾರೆ.
ವಸತಿ ಖಾತೆಯು ರಾಜ್ಯದಲ್ಲಿನ ಬಡವರು, ನಿರ್ಗತಿಕರಿಗೆ ನಿವೇಶನ, ವಸತಿ ರಹಿತರಿಗೆ ಸೂರು ಒದಗಿಸುವ ಜವಾಬ್ದಾರಿ ಈ ಸಚಿವರದ್ದೇ ಆಗಿದೆ. ಆದರೆ ವಸತಿ ಸಚಿವರಾಗಿರುವ ಅಂಬರೀಶ್ ಅವರು ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ತಿಂಗಳಲ್ಲಿ ಕುದುರೆಯ ಬಾಜಿಗೆ ಹೋಗಿದ್ದೂ ಅವರ ವಿಲಾಸಿ, ಬೇಜವಾಬ್ದಾರಿ ತನದ ವರ್ತನೆಯಾಗಿದ್ದೂ, ಮಾಧ್ಯಮಗಳಲ್ಲಿ ಈ ಬಗ್ಗೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಯಿಂದ ಎಚ್ಚೆತ್ತುಕೊಳ್ಳದ ಅವರು ತಮ್ಮ ಸುಖ, ವಿಲಾಸಿ ಜೀವನವನ್ನು ಮುಂದುವರೆಸುತ್ತಾ, ತಮ್ಮ ಖಾತೆಯ ಗುರುತರ ಜವಾಬ್ದಾರಿಗಳನ್ನು ನಿರ್ವಹಿಸುತ್ತಿಲ್ಲ ಹಾಗೂ ಇತ್ತೀಚೆಗೆ ರಾಜ್ಯದಲ್ಲಿ ಕೊಳಚೆ ಪ್ರದೇಶಗಳನ್ನು ದ್ವಂಸ, ಎತ್ತಂಗಡಿಗಳು ದಿನನಿತ್ಯ ನಡೆಯುತ್ತಿವೆ. ಉದಾಹರಣೆಗೆ ಬೆಂಗಳೂರಿನ ಈಡಬ್ಲೂಎಸ್, ವಿನೋಭಾ ನಗರ, ಹುಬ್ಬಳಿಯ ಬೆಂಗೇರಿ, ಕೇಶವಪುರ ಯಾದಗಿರಿಯ ಮೌನೇಶ್ವರ ಸ್ಲಂ ಮತ್ತು ಮದನಪುರ ಸ್ಲಂಗಳು ಸಾಕ್ಷಿಯಾಗಿವೆ ಎಂದಿದ್ದಾರೆ.
ಪ್ರತಿಕ್ರಿಯೇ ನೀಡದೇ ತಟಸ್ಥ: ಈ ರೀತಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವರ್ಗಗಳೇ ಹೆಚ್ಚಾಗಿ ವಾಸಿಸುತ್ತಿರುವ ಕೊಳಗೇರಿಗಳ ದ್ವಂಸ ನಡೆಯುತ್ತಿದ್ದೂ, ಇದಕ್ಕೆ ವಸತಿ ಸಚಿವರು ಮತ್ತು ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಆಗಿರುವ ಅಂಬರೀಶ್ ಅವರು ಯಾವುದೇ ಪ್ರತಿಕ್ರಿಯೇ ನೀಡದೇ ತಟಸ್ಥವಾಗಿರುವುದು ಸಹ ವಿಪರ್ಯಾಸವೇ ಆಗಿದೆ. ಇದು ದಲಿತ, ಹಿಂದುಳಿದ, ಅಲ್ಪ ಸಂಖ್ಯಾತ ವರ್ಗಗಳ ಮೇಲೆ ಇವರು ಮಾಡುತ್ತಿರುವ ಸಾಮಾಜಿಕ ತಾರತಮ್ಯವಲ್ಲದೇ ಮತ್ತೇನಲ್ಲಾ ಎಂದಿದ್ದಾರೆ.
ಈ ರೀತಿ ಬೇಜವಾಬ್ದಾರಿಯಾದ ಮಜಾ ಮಾಡುವ ಸಚಿವರು ಕಾಂಗ್ರೆಸ್ ಸರ್ಕಾರಕ್ಕೆ ಒಂದು ಕಪ್ಪು ಚುಕ್ಕೆ. ಈ ಸಚಿವರನ್ನು ತಕ್ಷಣ ಸಂಪುಟದಿಂದ ವಜಾ ಮಾಡದಿದ್ದರೆ, ಮುಂದಿನ ಲೋಕ ಸಭಾ ಚುನಾವಣೆಯಲ್ಲಿ ಕೊಳಗೇರಿ ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಬೇಕಾಗುತ್ತದೆ ಎಂದು ತಿಳಿಸಿದ ಅವರು ಸರ್ಕಾರದ ವರ್ಚಸ್ಸನ್ನು ಮತ್ತು ಮುಖ್ಯಂತ್ರಿಗಳ ಆಶಯವನ್ನು ಈಡೇರಿಸುವಂತ ಬಡಜನರ ಪರವಿರುವ ಯೋಗ್ಯರಿಗೆ ವಸತಿ ಖಾತೆ ನೀಡಬೇಕೆಂದು ಒತ್ತಾಯಿಸಿದ್ದರು.
ಈ ಪ್ರತಿಭಟನೆಯಲ್ಲಿ ಸಂಪಾದನೆ ಮಠ, ಮಾರಿಯಮ್ಮ ನಗರ, ಇಸ್ಮಾಯಿಲ್ ನಗರ, ದಿಬ್ಬೂರು, ಬಂಡೇಪಾಳ್ಯ ಮತ್ತು ಎಸ್.ಎನ್. ಪಾಳ್ಯದ ಕೊಳಗೇರಿ ನಿವಾಸಿಗಳು ಪಾಲ್ಗೊಂಡಿದ್ದರು.
ಪ್ರತಿಭಟನೆ ನೇತೃತ್ವವನ್ನು ಕೊಳಗೇರಿ ಸಮಿತಿಯ ಸೈಯದ್ ಅಲ್ತಾಫ್, ರಾಮಕ್ಕ, ಶೆಟ್ಟಾಳಯ್ಯ, ರಾಮಯ್ಯ, ಅಟ್ಟೇಕರ್, ರಾಜಣ್ಣ, ನಾಗರಾಜು, ಜಯಣ್ಣ, ಭಾಷಾ, ರುಕ್ಮುಣಿ, ಸುಬ್ಬ, ಕಾಶಿ, ಕಣ್ಣನ್, ಕೊಳಗೇರಿ ಸಂಘದ ಪದಾಧಿಕಾರಿಗಳು ನೇತೃತ್ವ ವಹಿಸಿದ್ದರು ನಂತರ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

