ತುಮಕೂರು

ವಿದ್ಯುನ್ಮಾನ ಗುರ್ತಿನ ಚೀಟಿ ರೈತರ ನೋಂದಣಿ ಪ್ರಾರಂಭ

Published On :

ಹುಳಿಯಾರು: ರಾಜ್ಯ ಸರ್ಕಾರವು ರೈತರು ಬೆಳೆದ ಬೆಳೆಗೆ ಬೆಳೆಗಳಿಗೆ ಸ್ಪರ್ಧಾತ್ಮಕ ಬೆಲೆ ದೊರಕಿಸಿಕೊಡುವ ಹಾಗೂ ಮಧ್ಯವರ್ತಿ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಕೃಷಿ ಮಾರಾಟ ನೀತಿ 2013ನ್ನು ರೂಪಿಸಿದ್ದು, ಅದರನ್ವಯ ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ವಿದ್ಯುನ್ಮಾನ ವೇದಿಕೆ ಮೂಲಕ ನೇರವಾಗಿ ಮಾರಾಟ ಮಾಡುವ  ಸಲುವಾಗಿ ತಮ್ಮ ಹೆಸರನ್ನು ನೋಂದಾಯಿಸಿ ವಿದ್ಯುನ್ಮಾನ ಗುರುತಿನ ಚೀಟಿಯನ್ನು ಪಡೆಯುವಂತೆ ಹುಳಿಯಾರಿನ ಎಪಿಎಂಸಿಯ ಕಾರ್ಯದರ್ಶಿ ಎಂ. ಆರ್. ಜಯರಾಂ ಮನವಿ ಮಾಡಿದ್ದಾರೆ.
ವಿದ್ಯುನ್ಮಾನ ಗುರುತಿನ ಚೀಟಿಯ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಅವರು  ಈ ನೀತಿಯಲ್ಲಿ ಕೊಬ್ಬರಿ ಸೇರಿದಂತೆ ಹುಳಿಯಾರು ಎಪಿಎಂಸಿ, ಚಿ.ನಾ.ಹಳ್ಳಿ ಉಪ ಮಾರುಕಟ್ಟೆ, ಹಂದನಕೆರೆ ಉಪಮಾರುಕಟ್ಟೆ ಹಾಗೂ ಉಗ್ರಾಣದಾರಿತ ಮಾರಾಟದಲ್ಲಿ ರೈತರು ಬೆಳೆದ ಯಾವುದೇ ಕೃಷಿ ಉತ್ಸನ್ನಗಳನ್ನು ವಿದ್ಯುನ್ಮಾನ ವೇದಿಕೆಯಲ್ಲಿ ಪಾರದರ್ಶಕತೆಯಿಂದ ಮಾರಾಟ ಮಾಡಬಹುದಾಗಿದೆ.ಅದಕ್ಕಾಗಿ ಮಾರಾಟ ಮಾಡುವ ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ತಮ್ಮದೇ ಆದ ವಿದ್ಯುನ್ಮಾನ ತಂತ್ರಜ್ಞಾನದ ಗುರುತಿನ ಚೀಟಿಯನ್ನು ಹೊಂದುವ ಮೂಲಕ ತಮ್ಮ ವ್ಯಾಪಾರ ವಹಿವಾಟನ್ನು ನಡೆಸಬಹುದಾಗಿದೆ.
ಮುಂಬರುವ ದಿನಗಳಲ್ಲಿ ರೈತರು ತಾವು ಬೆಳೆದ ಯಾವುದೇ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವಾಗ, ಉತ್ಪನ್ನಗಳ ಆಧಾರದ ಮೇಲೆ ಸಾಲ ಪಡೆಯುವಾಗ, ಮಾರುಕಟ್ಟೆ ವರ್ತಕರಿಂದ ತೂಕ, ಹಣ ಸಂದಾಯ ಸೇರಿದಂತೆ ಇನ್ನಿತರ ಯಾವುದೇ ವ್ಯವಹಾರಗಳಲ್ಲಿ ರೈತರಿಗೆ ವಂಚನೆಯಾಗಬಾರದೆಂಬ ಸದುದ್ದೇಶದಿಂದ ಈ ನಿಯಮ ಜಾರಿಗೆ ಬಂದಿದೆ. ಇ-ಟೆಂಡರ್ ಮೂಲಕ ಕೊಬ್ಬರಿ ಖರೀದಿಸುವಂತೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.