ಭಾವಸಾರ ಕ್ಷತ್ರಿಯರಿಂದ ಸಂಭ್ರಮದ ದಿಂಡಿ ಉತ್ಸವ
ತಿಪಟೂರು: ಪಟ್ಟಣದ ಭಾವಸಾರ ಕ್ಷತ್ರಿಯ ದೈವ ಮಂಡಳಿ ಯುವಕ ಸಂಘ, ಭಜನಾ ಮಂಡಳಿ, ಸಂತ ಶ್ರೀ ಜ್ಞನೇಶ್ವರ ಮಿತ್ರ ವೃಂದ ಸಂಯುಕ್ತಾಶ್ರಯದಲ್ಲಿ 33ನೇ ದಿಂಡಿ ಉತ್ಸವ ಮತ್ತು ಜಿಲ್ಲಾ ಮಟ್ಟದ ಜ್ಞಾನಮಾವೇಶವನ್ನು ಫೆ.7ರಿಂದ 9ರವರೆಗೆ 3 ದಿವಸ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಫೆ.7ರಂದು ಮಹಿಳಾ ಮಂಡಳಿಯವರಿಂದ ದೇವರ ನಾಮಗಳ ಭಜನೆ ಕಾರ್ಯಕ್ರಮ, ಫೆ.8ರಂದು ಭಜನೆ, ಹರಿಪಾಠ, ನಾಮಜಪ, ಪ್ರವಚನ, ಕೀರ್ತನೆಗಳ ಕಾರ್ಯಕ್ರಮದೊಂದಿಗೆ ಶ್ರೀ ವಿಠಲ್ ರುಕುಮಾಯಿ,ಶ್ರೀಗಣಪತಿ, ಶ್ರೀದತ್ತಾತ್ರೇಯ ಸ್ವಾಮಿಯವರಿಗೆ ಬೆಣ್ಣೆ ಅಲಂಕಾರ ಕಾರ್ಯಕ್ರಮ, ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರಾದ ವಾಣಿ ಹರ್ಡಿಕರ್ ಹೆಗಡೆ, ಯಲ್ಲಾಪುರ ಅವರಿಂದ ಸಂತವಾಣಿ ಹಾಗೂ ಭಕ್ತಿ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಫೆ.9ರಂದು ಬೆಳಿಗ್ಗೆ 9 ಗಂಟೆಗೆ ನಗರದ ರಾಜಬೀದಿಗಳಲ್ಲಿ ಶ್ರೀಪಾಂಡುರಂಗ ರುಕುಮಾಯಿ ಉತ್ಸವವನ್ನು ಭಜನೆಯೊಂದಿಗೆ 400ಕ್ಕೂ ಹೆಚ್ಚು ಭಕ್ತರಿಂದ ಉತ್ಸವ ಮತ್ತು ಧಾರ್ಮಿಕ ಸಮಾರಂಭ ಆಯೋಜಿಸಲಾಗಿದೆ.
ತಿಪಟೂರಿನ ಭಾವಸಾರ ಕ್ಷತ್ರಿಯ ಸಮಾಜದವರು ಧಾರ್ಮಿಕತೆಗೆ ಒತ್ತು ನೀಡಿ ಶ್ರೀ ಪಾಂಡುರಂಗಸ್ವಾಮಿ ದೇವಾಲಯದೊಂದಿಗೆ ಆಲಯದ ಆವರಣದಲ್ಲಿ ನವಗ್ರಹ, ಗಣಪತಿ, ದತ್ತಾತ್ರೇಯ ಸ್ವಾಮಿ ಹಾಗೂ ಕುರ್ಮಾ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

