ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ
ಕುಣಿಗಲ್: ವಿವಿಧ ಹಂತದ ಜನಪ್ರತಿನಿಧಿಗಳು ತಮ್ಮ ಅಧಿಕಾರವಧಿಯಲ್ಲಿ ಶಾಶ್ವತ ಕಾಮಗಾರಿಗಳ ಅನುಷ್ಠಾನವನ್ನು ಗಮನಹರಿಸುವ ಮೂಲಕ ತಾಲೂಕಿನ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ಶಾಸಕ ಡಿ.ನಾಗರಾಜಯ್ಯ ತಿಳಿಸಿದರು.
ಗುರುವಾರ, ತಾಲೂಕುಪಂಚಾಯಿತಿ ಅವರಣದಲ್ಲಿ 34ಲಕ್ಷ ರು.ವೆಚ್ಚದಲ್ಲಿ ತಾಪಂ ಸಭಾಂಗಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಶಾಸಕರ, ಸಂಸದರ ಅನುದಾನ ಸೇರಿದಂತೆ ವಿವಿಧ ಇಲಾಖೆಗಳ ಅದರದೇ ಆದ ಅನುದಾನಗಳೆಂದು
ತಾಲೂಕುಮಟ್ಟಕ್ಕೆ ವಾರ್ಷಿಕವಾಗಿ ಕೋಟ್ಯಂತರ ರು.ಅನುದಾನ ಸರ್ಕಾರ ಬಿಡುಗಡೆಗೊಳಿಸುತ್ತಿದೆ. ಆದರೆ,
ತಾಲೂಕಿನ ಬಹುತೇಕ ಕಡೆಗಳಲ್ಲಿ ಎಲ್ಲಿಯೂ ಕಣ್ಣಿಗೆ ಕಾಣುವಂತ ಶಾಶ್ವತ ಕಾಮಗಾರಿಗಳು ಕೈಗೊಳ್ಳದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ ಎಂದರು.
ಅಧಿಕಾರ ಮುಖ್ಯವಲ್ಲ: ಯಾವುದೇ ಜನಪ್ರತಿನಿಧಿಗೆ ಅಧಿಕಾರ ಮುಖ್ಯವಲ್ಲ. ಆದರೆ, ಆತ ತನ್ನ ಅಧಿಕಾರಾವಧಿಯಲ್ಲಿ ಮಾಡಿರುವ ಶಾಶ್ವತ ಕಾಮಗಾರಿಗಳು ಪ್ರಮುಖವಾಗಿದೆ. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಜನಪ್ರತಿನಿಧಿಗಳ ಪೈಕಿ ಬಹುತೇಕರು ಚರಂಡಿ ಸ್ವಚ್ಛತೆ ಸೇರಿದಂತೆ ಮಾಡಿದ ಕಾಮಗಾರಿಗೆ ಪುನಃ
ಅನುದಾನ ವ್ಯಯಮಾಡುವ ಮೂಲಕ ಎಲ್ಲಿಯೂ ಶಾಶ್ವತ ಕಾಮಗಾರಿ ಅನುಷ್ಠಾನಕ್ಕೆ ಪೂರಕವಾಗಿ ಕ್ರಿಯಾಯೋಜನೆ ಸಿದ್ಧಗೊಳಿಸಿ ಮಾಡುವ ಬದ್ಧತೆ ಇಲ್ಲದ ಕಾರಣ ಇಂದು ತಾಲೂಕಿನಾದ್ಯಂತ ಸರ್ಕಾರದ ಸಾಕಷ್ಟು ಅನುದಾನ ವ್ಯಯವಾಗುತ್ತಿದ್ದರೂ, ಶಾಶ್ವತ ಅಭಿವೃದ್ಧಿ ಕಾಮಗಾರಿಗಳು ಜನತೆಯ ಕಣ್ಣಿಗೆ ಕಾಣಿಸದೆ ಜನಪ್ರತಿನಿಧಿಗಳ ಕಾರ್ಯವೈಖರಿಯನ್ನೆ ಪ್ರಶ್ನಿಸುವಂತಾಗಿದೆ. ಇನ್ನು ಕೆಲವೆಡೆಗಳಲ್ಲಿ ಕೆಲ ಜನಪ್ರತಿನಿಧಿಗಳು ಕೇವಲ ಗುತ್ತಿಗೆದಾರರನ್ನು ಮನಒಲಿಸುವ ಸಲುವಾಗಿ ಕೆಲಕಾಮಗಾರಿಗಳನ್ನು ಕೈಗೊಳ್ಳುವಂತ ಪ್ರವೃತ್ತಿ ಬಗ್ಗೆ ತೀವ್ರ ಅಸಮಾಧಾನ ವ್ಕಕ್ತಪಡಿಸಿದ ಅವರು, ಇನ್ನಾದರೂ ವಿವಿಧ ಹಂತದ ಜನಪ್ರತಿನಿಧಿಗಳು ತಮ್ಮ ಕರ್ತವ್ಯ ಹಾಗೂ ಬದ್ಧತೆಯನ್ನು ಅರಿತು ಸಾಕಷ್ಚು ಶಾಶ್ವತ ಕಾಮಗಾರಿಗಳನ್ನು ನಿಗದಿತ ಗುಣಮಟ್ಟ, ಅವಧಿಯೊಳಗೆ ಪೂರ್ಣಗೊಳಿಸುವ ಬಗ್ಗೆ ಗಮನ ಹರಿಸಬೇಕೆಂದರು.
ಅಗತ್ಯ ಕ್ರಮ: ತಾಪಂ ಅಧ್ಯಕ್ಷೆ ತೇಜಸ್ವಿನಿ, ತಾಲೂಕು ಪಂಚಾಯಿತಿಯಲ್ಲಿ ವಿವಿಧ ತರಬೇತಿ ಸೇರಿದಂತೆ ತಾಲೂಕುಮಟ್ಟದ ಅಧಿಕಾರಿಗಳ ಸಭೆ ನಡೆಸಲು ಸೂಕ್ತ ಸಭಾಂಗಣದ ಕೊರತೆ ಇರುವ ಕಾರಣ, ತಾಪಂನ 11.70 ಕೋಟಿ ಅನುದಾನದ ಪೈಕಿ ಬಹುತೇಕ ಸದಸ್ಯರ ಅನುದಾನ ಹೊಂದಾಣಿಕೆ ಮೇರೆಗೆ ಈ ಕಾಮಗಾರಿ ಕೈಗೊಳ್ಳಲಾಗಿದೆ. ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದರು. ತಾಪಂ ಉಪಾಧ್ಯಕ್ಷ ಬಲರಾಮೇಗೌಡ, ಸ್ಥಾಯಿಸಮಿತಿ ಅಧ್ಯಕ್ಷ ಜಗದೀಶ್, ಸದಸ್ಯರಾದ ಲೋಕೇಶ, ವೆಂಕಟಲಕ್ಷ್ಮಮ್ಮ,ಅಶ್ವತ್ಥಮ್ಮ, ಜಿಪಂ ಸದಸ್ಯ ಡಾ.ಬಿ.ಎನ್.ರವಿ, ತಾಪಂ ಇಒ ಶಂಕರಪ್ಪ, ಲೆಕ್ಕಾಧಿಕಾರಿ ಶ್ರೀನಿವಾಸಯ್ಯ, ಜಿಪಂ ಎಇಇ ಮರಿಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತಾಪಂನ 13ನೇ ಹಣಕಾಸು ಯೋಜನೆಯಡಿಯಲ್ಲಿ ಶೇ.3ರ ಅನುದಾನದಿಂದ ವಿಕಲಾಂಗರಿಗೆ ಧನಸಹಾಯದ ಚೆಕ್ಕನ್ನು ಶಾಸಕರು ವಿತರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

