ಭ್ರಷ್ಟಾಚಾರ ನಡೆಸಿದ್ದೇ ಕಾಂಗ್ರೆಸ್ ಸಾಧನೆ
ಕುಣಿಗಲ್: ಕೇಂದ್ರದಲ್ಲಿನ ಆಡಳಿತದ ಸಮಯದಲ್ಲಿ ಹಲವು ಭ್ರಷ್ಟಾಚಾರಗಳಲ್ಲಿ ಮುಳುಗೇಳುತ್ತಾ, ಸಾಮಾನ್ಯಜನತೆ ಜೀವನ ನಡೆಸುವುದೇ ದುಸ್ತರವಾನ್ನಾಗಿ ಮಾಡಿರುವುದೇ ಕಾಂಗ್ರೆಸ್ ಸಾಧನೆಯಾಗಿದೆ. ಭ್ರಷ್ಟಾಚಾರವನ್ನು ಪೋಷಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆ ಚುನಾವಣೆಯಲ್ಲಿ ಮತದಾರರು ತಕ್ಕಪಾಠ ಕಲಿಸಬೇಕೆಂದು ಬಿಜೆಪಿ ಯುವಮೋರ್ಚಾ ರಾಜ್ಯಾಧ್ಯಕ್ಷ, ಗ್ರಾಮಾಂತರ ಲೋಕಸಭೆ ಸಂಭಾವ್ಯ ಅಭ್ಯರ್ಥಿ ಪಿ. ಮುನಿರಾಜು ತಿಳಿಸಿದರು.
ಶುಕ್ರವಾರ, ತಾಲೂಕಿನ ಯಡೆಯೂರಿನಲ್ಲಿ ನಮೋ ಟೀಸ್ಟಾಲ್ ಉದ್ಘಾಟಿಸಿ ಮಾತನಾಡಿ, ಕಳೆದ ಹಲವು ದಶಕಗಳಿಂದ ದೇಶವನ್ನಾಳುತ್ತಿರುವ ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಕುಮ್ಮುಕ್ಕು ನೀಡಿದ ಪರಿಣಾಮ ದೇಶದಲ್ಲಿ ಅಗತ್ಯವಸ್ತುಗಳ ಬೆಲೆ ಸತತವಾಗಿ ಏರಿಕೆಯಾಗಿ, ಜನ ಪರದಾಡುವಂತಾಗಿದೆ. ನೆರ ರಾಷ್ಟ್ರಗಳಾದ ಚೀನಾ,ಪಾಕಿಸ್ತಾನ ಕಾಲುಕೆರೆದು ನಮ್ಮ ಸೈನಿಕರನ್ನು ಕೊಲ್ಲುತ್ತಿದ್ದರೂ ಆ ಬಗ್ಗೆ ಸೊಲ್ಲೆತ್ತುವ ಧೈರ್ಯವನ್ನೂ ಮಾಡದ ಕೇಂದ್ರದ ಕಾಂಗ್ರೆಸ್ ಸರ್ಕಾರ ದೇಶರಕ್ಷಣೆ ವಿಷಯದಲ್ಲೂ ವಿಫಲವಾಗಿದೆ. ಕೇವಲ ಚುನಾವಣೆ ಸಮಯದಲ್ಲಿ ಸಾಮಾನ್ಯಜನತೆ ನೆನೆಪಿಸಿಕೊಳ್ಳುವ ಕಾಂಗ್ರೆಸ್ 9 ಸಿಲಿಂಡರ್ ಬದಲು 12 ಸಿಲಿಂಡರ್ ನೀಡುವ ಪೊಳ್ಳು ಭರವಸೆ ನೀಡಿ ಜನತೆಯ ದಾರಿತಪ್ಪಿಸುವಂತೆ ಕೆಲಸ ಮಾಡುತ್ತಿದೆ ಎಂದರು.
ಬಿಜೆಪಿಯೊಂದೇ ಪರಿಹಾರ: ಸಮರ್ಪಕ ಆರ್ಥಿಕ ನೀತಿ ಅನುಸರಿಸದೆ, ಕೈಗೊಂಡು ಹಲವು ಗೊಂದಲಕಾರಿ ಕ್ರಮಗಳಿಂದಾಗಿ ದೇಶವನ್ನು ಸಾಲಗಾರ ದೇಶವನ್ನಾಗಿಸಿದೆ. ಸದೃಢ, ಸಶಕ್ತ, ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕಾಗಿ ಬಿಜೆಪಿಯೊಂದೆ ಪರಿಹಾರವಾಗಿದ್ದು, ಈಗಾಗಲೆ ಗುಜರಾತ್ನಲ್ಲಿ ಕಳೆದ ಕೆಲವೇ ವರ್ಷಗಳಲ್ಲಿ ಅತ್ಯದ್ಭುತ ಅಭಿವೃದ್ಧಿ ಸಾಧನೆ ಮಾಡಿ, ಸಾಧಿಸಿ ತೋರಿಸಿರುವ, ಪಕ್ಷದ ಮುಂದಿನ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರನ್ನು ಮುಂಬರುವ ಲೋಕಸಭೆ ಚುನಾವಣೆಗಳಲ್ಲಿ ಮತದಾರರು ಬೆಂಬಲಿಸುವ ಮೂಲಕ ರಾಷ್ಟ್ರವನ್ನು ಭ್ರಷ್ಟಾಚಾರಕೂಪದಿಂದ ರಕ್ಷಿಸುವ ಜೊತೆಯಲ್ಲಿ ಅಭಿವೃದ್ಧಿ ಪಥದತ್ತ ಸಾಗಲು ಸಹಕರಿಸಬೇಕೆಂದರು.
ತಾಲೂಕು ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್, ಕಾಂಗ್ರೆಸ್ ಪಕ್ಷವು ಬ್ರಿಟೀಶರ ನೀತಿ ಅನುಸರಿಸುತ್ತಾ
ತಮಗೆ ಪ್ರಾಬಲ್ಯ ಇಲ್ಲದ ರಾಜ್ಯಗಳಲ್ಲಿ ಒಡೆದು ಆಳುವ ತಂತ್ರಕ್ಕೆ ಬಲಿಯಾಗಿ, ತಮ್ಮ ಸ್ವಾರ್ಥ ಸಾಧನೆಗೆ ಜನರನ್ನು ಬಲಿಕೊಡುವಂತ ಕೀಳುಮಟ್ಟಕ್ಕೆ ಇಳಿದಿದೆ. ಇಂತಹ ಪಕ್ಷದಿಂದ ಮುಂಬರುವ ದಿನಗಳಲ್ಲಿ ರಾಜ್ಯ ಅಥವಾ ರಾಷ್ಟ್ರಕ್ಕೆ ಭವಿಷ್ಯವಿಲ್ಲ. ಮತದಾರರು ಜಾಗೃತರಾಗಿ ಅಭಿವೃದ್ಧಿ ಮತ್ತು ಸ್ಥಿರತೆಗಾಗಿ ಕಾಂಗ್ರೆಸ್ ತಿರಸ್ಕರಿಸಿ, ಬಿಜೆಪಿ ಬೆಂಬಲಿಸಬೇಕೆಂದರು.
ತಾಲೂಕು ಅಧ್ಯಕ್ಷ ಚಿಕ್ಕರಾಮಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿಕೆ.ಎಂ.ತಿಮ್ಮಪ್ಪ, ಪ್ರಮುಖರಾದ ವೆಂಕಟೇಶ,ತಿಮ್ಮಪ್ಪ, ನಡೇಮಾವಿನಪುರ ರಂಗಸ್ವಾಮಿ, ರಂಗನಾಥ, ಲ್ಯಾಬ್ ಶ್ರೀನಿವಾಸ, ಗೋಪಿ, ನರಸಿಂಹ,
ಸಿದ್ದಲಿಂಗಯ್ಯ, ರೇವಣ್ಣ, ಅರುಣಕುಮಾರ, ಮಲ್ಲಿಕಾರ್ಜುನ, ಮಹಿಳಾಮೋರ್ಟಾ ಅಧ್ಯಕ್ಷೆ ಗೌರಮ್ಮ ಇತರರು ಉಪಸ್ತಿತರಿದ್ದು, ಜನತೆಗೆ ಉಚಿತ ಚಹ ಮತ್ತು ನಮೋ ಬಗ್ಗೆ ಕರಪತ್ರ ವಿತರಿಸಿದರು. ವಾಹನವೊಂದರ ಮೇಲೆ ಬೃಹತ್ ಟಿವಿ ಅಳವಡಿಸಿ, ನಮೋ ಸಾಧನೆಯ ಬಗ್ಗೆ ಚಿತ್ರ ಪ್ರದರ್ಶನ ಆಯೋಜಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

