ಅನ್ನದಾತನಿಗೆ ನೀರಾವರಿ ಯೋಜನೆ ಜಾರಿಗೊಳಿಸಿ ನೆಮ್ಮದಿ ನೀಡಿ
ಕುಣಿಗಲ್: ಅನ್ನದಾತನಿಗೆ ಪರಿಣಾಮಕಾರಿಯಾದ ನೀರಾವರಿ ಯೋಜನೆ ಜಾರಿಗೊಳಿಸಿ, ಕೃಷಿಗೆ ಬೇಕಾದ ಮೂಲ ನೀರಾವರಿ ಸೌಲಭ್ಯ ಕಲ್ಪಿಸದೆ ಹೋದಲ್ಲಿ ಎಲ್ಲ ಶ್ರಮಗಳೂ ವ್ಯರ್ಥವಾಗುತ್ತದೆ ಎಂದು ಹಿರಿಸಾವೆ ಹೋಬಳಿ ಕರವೇ ಮುಖ್ಯಸ್ಥ ಯೋಗೀಶ್ ತಿಳಿಸಿದರು.
ಹಾಸನ ಜಿಲ್ಲೆಯ ಹಿರೆಸಾವೆ, ಶ್ರವಣಬೆಳಗೊಳ ಹೋಬಳಿಗಳಿಗೆ ಏತನೀರಾವರಿ ಯೋಜನೆಗೆ ಆಗ್ರಹಿಸಿ ಹಿರಿಸಾವೆಯಿಂದ ವಿವಿಧ ಸಂಘ, ಸಂಸ್ಥೆಗಳು ಬೆಂಗಳೂರಿಗೆ ಪಾದಯಾತ್ರೆ ಹೊರಟಿದ್ದು, ಪಾದಯಾತ್ರೆ ಪಟ್ಟಣಕ್ಕೆ ತಲುಪಿದ ಸಮಯದಲ್ಲಿ, ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರವು ನೀರಾವರಿ ಯೋಜನೆಗೆ ಕೇವಲ ಪತ್ರಿಕೆ ಪ್ರಕಟಣೆಗಳಲ್ಲಿ ನೀಡುವಷ್ಟು ಆದ್ಯತೆ ಪ್ರಾಮಾಣಿಕ ಅನುಷ್ಠಾನಕ್ಕೆ ನೀಡುತ್ತಿಲ್ಲ. ಆದ ಕಾರಣ ಬಹುತೇಕ ನೀರಾವರಿ ಯೋಜನೆ ನೆನೆಗುದಿಗೆ ಬಿದ್ದಿವೆ, ಹಿರಿಸಾವೆ, ಶ್ರವಣಬೆಳೆಗೊಳ ಹೋಬಳಿಯ 70ಕ್ಕೂ ಹೆಚ್ಚು ಗ್ರಾಮಗಳ ವ್ಯಾಪ್ತಿಯಲ್ಲಿ ಜಲಮೂಲ ಬತ್ತಿಹೋಗಿ ಜನತೆ ಪರದಾಡುವಂತಾಗಿದೆ. ಈ ಗ್ರಾಮಗಳಿಗೆ ನೀರು ಪೂರೈಕೆ ನಿಟ್ಟಿನಲ್ಲಿ 50ಕೋಟಿ ವೆಚ್ಚದಲ್ಲಿ ಏತನೀರಾವರಿ ಯೋಜನೆಗೆ ಈ ಹಿಂದೆಯೇ ಚಾಲನೆ ನೀಡಿದ್ದರೂ, ಈ ಭಾಗದ ಜನಪ್ರತಿನಿಧಿಗಳ ಒಣಪ್ರತಿಷ್ಠೆಯಿಂದ ಯೋಜನೆ ಪ್ರಾರಂಭವಾಗಿಲ್ಲ.
ಯೋಜನೆ ಅನುಷ್ಠಾನಕ್ಕೆ ಜನಪ್ರತಿನಿಧಿಗಳಿಗೆ ಆಗ್ರಹಿಸಿ ಅವರು ಸ್ಪಂದಿಸದ ಕಾರಣ ವಿವಿಧ ಸಂಘ, ಸಂಸ್ಥೆಗಳಾದ ಕರವೇ, ಕಸಾಪ, ಅಂಬೇಡ್ಕರ್ ಸಂಘ, ಛಲವಾದಿ ಸಂಘ, ರೈತ ಸಂಘ ಸೇರಿದಂತೆ ಹಲವು ಸಂಸ್ಥೆಯ ಪದಾಧಿಕಾರಿಗಳು ಪಾದಯಾತ್ರೆ ಮೂಲಕ ಬೆಂಗಳೂರಿಗೆ ತೆರಳಿ ಯೋಜನೆ ಅನುಷ್ಠಾನಕ್ಕೆ ಸಿಎಂಗೆ ಮನವಿ ಸಲ್ಲಿಸುತ್ತಿದ್ದು, ಮನವಿಗೆ ಸ್ಪಂದಿಸದಿದ್ದಲ್ಲಿ ಉಗ್ರಹೋರಾಟ ನಡೆಸುವುದಾಗಿ ತಿಳಿಸಿದರು. ಪ್ರಮುಖರಾದ ಮಹೇಶ, ಮಂಜುಳಾ, ಕೃಷ್ಣೆಗೌಡ ಇತರರು ಇದ್ದರು. ಭಾನುವಾರ ಬೆಳಗ್ಗೆ ಹಿರೆಸಾವೆಯಿಂದ ಹೊರಟ ಪಾದಯಾತ್ರೆ ಸೋಮವಾರ ಬೆಳಗ್ಗೆ ಪಟ್ಟಣಕ್ಕೆ ಆಗಮಿಸಿದ್ದು ತಾಲೂಕು ಕರವೇ ಅಧ್ಯಕ್ಷ ಮಂಜುನಾಥ ಮತ್ತು ಪದಾಧಿಕಾರಿಗಳು ಪಾದಯಾತ್ರಿಗಳಿಗೆ ಶುಭಕೋರಿ ಬೀಳ್ಕೊಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

