ತುಮಕೂರು

16ರಂದು ಪಾವಗಡ ತಾಲೂಕು ವೀರಶೈವ ಮಹಾ ಸಮಾವೇಶ

Published On :

ಪಾವಗಡ: ತಾಲೂಕು ವೀರಶೈವ ಸಮಾಜ ಹಾಗೂ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪಾವಗಡ ತಾಲೂಕು ವೀರಶೈವ ಮಹಾ ಸಮಾವೇಶವನ್ನು ಫೆ.16ರಂದು ಬೆಳಿಗ್ಗೆ 11ಗಂಟೆಗೆ ಪಟ್ಟಣದ ಎಸ್‌ಎಸ್‌ಕೆ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿರುವುದಾಗಿ ವೀರಶೈವ ಸಮಾಜದ ಅಧ್ಯಕ್ಷ ಅರಸೀಕೆರೆ ವಾಗೀಶ್ ತಿಳಿಸಿದರು.
ಸಮಾವೇಶದ ಹಿನ್ನೆಲೆಯಲ್ಲಿ ಅವರು ಗುರುವಾರ ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ
ತಾಲೂಕಿನ ಸುಮಾರು 10ಸಾವಿರ ವೀರ ಶೈವ ಸಮುದಾಯವರನ್ನು ಈಗಾಗಲೇ ಭೇಟಿ ಮಾಡಿ ಸಂಘಟಿಸಲಾಗಿದೆ. ಜನಾಂಗದ ಸ್ವಾಮೀಜಿಗಳ ಅರ್ಶೀವಾದದಿಂದ ಅದ್ಧೂರಿಯ ಸಮಾವೇಶಕ್ಕೆ ಸಿದ್ಧತೆ ನಡೆಸಿದ್ದು, ವಿದ್ಯಾರ್ಥಿನಿಲಯದ ಸ್ಥಾಪನೆ, ಶೈಕ್ಷಣಿಕ ಅಭಿವೃದ್ಧಿ ಮತ್ತು ಜನಾಂಗದ ಆರ್ಥಿಕ ಪ್ರಗತಿಯಿಂದ  ಸಮುದಾಯವನ್ನು ಸಂಘಟಿಸಲಾಗಿದೆ ಎಂದರು.
ಕಾರ್ಯಕ್ರಮಕ್ಕೆ ಗಣ್ಯರನ್ನು ಆಹ್ವಾನಿಸಿರುವುದಾಗಿ ತಿಳಿಸಿದ ಅವರು ಶ್ರೀ ಕ್ಷೇತ್ರ ಸಿದ್ದರಬೆಟ್ಟ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಚಿಕ್ಕತೊಟ್ಟಲಕೆರೆ ಅಟವಿ ಶಿವಲಿಂಗ ಸ್ವಾಮಿ ಮತ್ತು ಶಿರಾ, ಗವಿ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಜೀಗಳು ಸಾನಿಧ್ಯ ವಹಿಸಲಿದ್ದಾರೆಂದು ಅವರು ತಿಳಿಸಿದರು.
ಚಿತ್ರದುರ್ಗ ಸಂಸದ ಜನಾರ್ದನಸ್ವಾಮಿ ಸಮಾರಂಭ ಉದ್ಘಾಟಿಸಲಿದ್ದು ಜಿಲ್ಲಾ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಸಿ.ವಿ. ಮಹದೇವಯ್ಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಮುದಾಯದ ನಿವೃತ್ತ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ,ಖ್ಯಾತ ಚಲನಚಿತ್ರ ನಟ ಎಸ್. ದೊಡ್ಡಣ್ಣ, ಶಾಸಕ ಕೆ.ಎಂ.ತಿಮ್ಮರಾಯಪ್ಪ, ಮಾಜಿ ಸಚಿವ ವೆಂಕಟರಮಣಪ್ಪ, ಮಾಜಿ ಶಾಸಕ ಸೋಮ್ಲನಾಯ್ಕ್, ಹಿರಿಯ ಮುಖಂಡ ಜಿ.ಎಸ್.ಧರ್ಮಪಾಲ್, ತಹಸೀಲ್ದಾರ್ ಪಾಷ, ತಾಪಂ ಇಒ ತಿಪ್ಪೇಸ್ವಾಮಿ, ಸಿಪಿಐ ಭಾನುಪ್ರಕಾಶ್ ಹಾಗೂ ಸಮುದಾಯದ ಜಿಲ್ಲಾ ಸಂಘದ ಅಧ್ಯಕ್ಷ ಸೋಮಶೇಖರ್, ಕಾರ್ಯಾಧ್ಯಕ್ಷ ಶಿವಶಂಕರ್, ಮಾಜಿ ಅಧ್ಯಕ್ಷ ವಿರೂಪಾಕ್ಷಯ್ಯ, ಮಡಕಶಿರಾ ಜಯದೇವಪ್ಪ, ಕಸಾಪ ಅಧ್ಯಕ್ಷ ಅಂತರ ಗಂಗೆ ಶಂಕರಪ್ಪ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿಲಿದ್ದಾರೆ.
ಸನ್ಮಾನ: ಚಿತ್ರ ನಟ ದೊಡ್ಡಣ್ಣ ಸೇರಿದಂತೆ ಸಮಾಜ ಸೇವಕರಾದ ಜನಾಂಗದ ವೈ.ಎನ್ ಹೊಸಕೋಟೆ ಚನ್ನಮಲ್ಲಪ್ಪ,ಅರಸೀಕೆರೆ ಯರಗುಂಟಪ್ಪ, ಬೂದಿಬೆಟ್ಟ ಬಸವರಾಜ್, ರಂಗಸಮುದ್ರ ಮಲ್ಲಿಕಾರ್ಜುನಪ್ಪ,ಎಚ್.ಟಿ.ಬಸವರಾಜಪ್ಪ ಇತರರನ್ನು ಸಮಾರಂಭದಲ್ಲಿ ಸನ್ಮಾನಿಸುವುದಾಗಿ ಅವರು ತಿಳಿಸಿದರು.
ಜನಾಂಗದ ಮುಖಂಡರಾದ ಗುಮ್ಮಘಟ ಬಸವರಾಜ್, ಅರಸೀಕೆರೆ ಬೀದಿ ಮನೆ ಬಸಪ್ಪ, ಕತಿಕ್ಯಾತನಹಳ್ಳಿ ಮಲೇಶಪ್ಪ, ನಿವೃತ್ತ ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನಪ್ಪ, ಶ್ರೀ ಪ್ರೆಸ್ ಬಸವರಾಜ್ ಇತರರು ಪತ್ರಿಕಾಗೋಷ್ಠಿಯಲಿದ್ದರು.     

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.