ವಯಸ್ಸಿನ ದೃಢೀಕರಣಕ್ಕೆ ಸಹಿ ಹಾಕಲು ಲಂಚ: ಪ್ರತಿಭಟನೆ
ಹುಳಿಯಾರು: ವೃದ್ಧಾಪ್ಯ ವೇತನ ಪಡೆಯಲು ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ ಅವಶ್ಯಕವಿದ್ದು ಅದನ್ನು ನೀಡಲು ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಕುಮಾರಸ್ವಾಮಿ ಲಂಚ ಪಡೆಯುತ್ತಿದ್ದಾರೆಂದು ಆರೋಪಿಸಿ ತಾ.ಪಂ.ಅಧ್ಯಕ್ಷ ಕೆಂಕೆರೆ ನವೀನ್ ಅವರ ನೇತೃತ್ವದಲ್ಲಿ ಗ್ರಾ.ಪಂ.ಸದಸ್ಯರು ಸೇರಿದಂತೆ ಸಾರ್ವಜನಿಕರು ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.
ಬುಧವಾರ ಬೆಳಿಗ್ಗೆ ತಾ.ಪಂ.ಸದಸ್ಯರಾದ ಕವಿತಾ ಅವರು ತಮ್ಮ ಗ್ರಾಮದ ವೃದ್ಧರೊಬ್ಬರಿಗೆ ವೃದ್ಧಾಪ್ಯವೇತನ ಮಾಡಿಸಲು ಬೇಕಾಗಿರುವ ವಯಸ್ಕರ ಪ್ರಮಾಣ ಪತ್ರವನ್ನು ದೃಢಿಕರಿಸಿ, ಸಹಿ ಹಾಕುವಂತೆ ಆಸ್ಪತ್ರೆಯ ವೈದ್ಯರನ್ನು ಕೇಳಿಕೊಂಡಾಗ ಅವರು ಹಣಕೊಟ್ಟರೆ ಮಾತ್ರ ಸಹಿ ಹಾಕುವುದಾಗಿ ತಿಳಿಸಿದರು. ಅನುಚಿತವಾಗಿ ವರ್ತಿಸಿದ್ದಾರೆ. ನಂತರ ಕವಿತಾ ಅವರು ತಾವು ತಾ.ಪಂ.ಸದಸ್ಯರು ಎಂದು ಹೇಳಿದರೂ ವೈದ್ಯ ತನ್ನ ಉದ್ಧಟತನದಿಂದ ಯಾರದಾರಾಗಲಿ ನನಗೆ ಹಣ ಕೊಡಿ ಸಹಿ ಹಾಕುತ್ತೇನೆ ಎಂದು ತಾಕೀತು ಮಾಡಿದ್ದಲ್ಲದೆ, ಸಹಿ ಹಾಕದೆ
ಆಸ್ಪತ್ರೆಯನ್ನು ತೊರೆದು ಹೋಗಿದ್ದಾನೆ. ವಿಷಯ ತಿಳಿದ ತಾ.ಪಂ.ಅಧ್ಯಕ್ಷರು ಸೇರಿದಂತೆ ಹೋಬಳಿಯ ಸಾರ್ವಜನಿಕರು ಗ್ರಾ.ಪಂ.ಸದಸ್ಯರು ಸೇರಿ ಈ ರೀತಿ ನಡೆದುಕೊಂಡಿರುವ ವೈದ್ಯನ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಆತ ಸ್ಥಳಕ್ಕೆ ಬರಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ವೈದ್ಯಕೀಯ ಕಾರ್ಯ ಪ್ರಾರಂಭಿಸಿರುವ ವೈದ್ಯ ಶಿವಕುಮಾರ್
ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ, ಜನ ಸಾಮಾನ್ಯರೊಂದಿಗೆ, ಜನಪ್ರತಿನಿಧಿಗಳೊಂದಿಗೆ ಸರಿಯಾಗಿ ವರ್ತಿಸದೆ, ತನಗೆ ಇಷ್ಟಬಂದ ರೀತಿಯಲ್ಲಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಲ್ಲದೆ, ಸಣ್ಣಪುಟ್ಟ ಗಾಯಗಳಿಗೆ ರೋಗಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ. ರೋಗಿಗಳು ತಾವು ಬಡವರು ಎಂಡು ಹೇಳಿದರೆ,
ನರ್ಸಿಂಗ್ ಹೋಂಗಳಲ್ಲಿ ಅವರು ಕೇಳಿದಷ್ಟು ಹಣ ನೀಡುತ್ತೀರ, ನಮಗೂ ಸ್ಪಲ್ಪ ಕೂಡಿ ಎನ್ನುತ್ತಾರೆಂದು ಸಾರ್ವಜನಿಕರು ಆರೋಪಿಸಿದರು.
ಪಿಎಸೈ ರಾಜು ನೇತೃತ್ವದಲ್ಲಿ ರಾಜಿ: ವಿಷಯ ತಿಳಿದು ಸ್ಥಳಕ್ಕಾಗಮಿಸಿದ ವೈದ್ಯ ಕುಮಾರಸ್ವಾಮಿ ಹಾಗೂ ಪ್ರತಿಭಟನಾಕಾರರೊಂದಿಗೆ ಮಾತಿನ ಚಕಮಕಿ ನಡೆಯಿತು. ನಂತರ ಪಿಎಸೈ ರಾಜು ಪ್ರತಿಭಟನಾಕಾರರು ಮತ್ತು ವೈದ್ಯರೊಂದಿಗೆ ಮಾತನಾಡಿ, ವೈದ್ಯರಿಂದ, ನನ್ನಿಂದ ತಪ್ಪಾಗಿದೆ. ಈ ರೀತಿ ಮುಂದೆ ನಡೆದುಕೊಳ್ಳುವುದಿಲ್ಲ ಎಂದು ಕ್ಷಮೆಯಾಚಿಸುವಂತೆ ತಿಳಿಸಿ ಪ್ರತಿಭಟನೆಯನ್ನು ಹಿಂಪಡೆಯುವಂತೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಪುಟ್ಟಮ್ಮ, ಸದಸ್ಯರಾದ ಬಡ್ಡಿಪುಟ್ಟಣ್ಣ, ರಾಘವೇಂದ್ರ, ಛಾಯಾಗ್ರಾಹಕ ಸಂಘದ ಜಯಣ್ಣ, ಸುದರ್ಶನಾಚಾರ್, ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳ ಜನಪ್ರತಿನಿಧಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

