ತುಮಕೂರು

ಶಿಕ್ಷಣ ಉದ್ಯಮವಲ್ಲ, ಸೇವೆ ಡಾ. ನಾಗಭೂಷಣ್ ಪ್ರತಿಪಾದನೆ

Published On :

ಕ.ಪ್ರ.ವಾರ್ತೆ    ಕೊರಟಗೆರೆ    ಫೆ.18
ಶಿಕ್ಷಣ ಒಂದು ಉದ್ಯಮವಲ್ಲ ಇದೊಂದು ಸೇವೆ  ಎಂದು  ಎಲ್ಲಾ ಖಾಸಗಿ ಶಾಲೆಗಳು ಅರಿತು ಕರ್ತವ್ಯ ನಿರ್ವಹಿಸಬೇಕು ಎಂದು ಸಾಹಿತಿ ಹಾಗೂ ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನಕನ್ನಡ ವಿಭಾಗದ ಮುಖ್ಯಸ್ಥ ಡಾ. ನಾಗಭೂಷಣ್ ತಿಳಿಸಿದರು.
ಅವರು ಪಟ್ಟಣದ ತೆರೆಸಾ ಸ್ಕೂಲ್ನ ಅಭಿಜ್ಞಾನ ಶಾಲಾ ವಾರ್ಷಿಕೋತ್ಸವದ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿ ಶಿಕ್ಷಣ ಎನ್ನುವುದು ಹಿಂದೆ ಎಲ್ಲರಿಗೂ ಸಿಗುತ್ತಿರಲಿಲ್ಲ. ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು. ಇಂದು ಪ್ರತಿಯೊಂದು ಮನೆಯ ಬಾಗಿಲಿಗೂ ಶಿಕ್ಷಣ ಬಂದಿದ್ದು ಶಿಕ್ಷಣದಿಂದ ಮನುಕುಲದ ವಿಕಸನವಾಗುತ್ತಿದೆ ಎಂದರು.
ದೇಶದಲ್ಲಿ ಶಿಕ್ಷಣದ ಮಟ್ಟ ಹೆಚ್ಚಾಗಲು ಮುಖ್ಯ ಕಾರಣ ತಾಯಂದಿರು. ಅವರ ಪರಿಶ್ರಮದಿಂದ ಮಕ್ಕಳು ಶಾಲೆಗೆ ಬರುತ್ತಿದ್ದು ಹಲವಾರು ಪ್ರತಿಭೆಗಳು ಜಗತ್ತಿಗೆ ಕಾಣುತ್ತಿದ್ದು ಶಿಕ್ಷಣ ಕ್ಷೇತ್ರದಲ್ಲಿ.  ಇಂದಿನ ಕ್ರಾಂತಿಗೆ ತಾಯಂದಿರ ಶ್ರಮ ಸಿಂಹಪಾಲು ಎಂದು ಪ್ರತಿಪಾದಿಸಿದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷ ಆಶ್ವತ್ಥಪ್ಪ ಮಾತನಾಡಿ ಒಂದು ಶಾಲೆಯ ಗುಣಮಟ್ಟವನ್ನು ನಿರ್ಧರಿಸುವುದು ಕೇವಲ ಕಟ್ಟಡವಲ್ಲ. ಅಲ್ಲಿನ ಬೋಧಕೇತರ ವರ್ಗ ಪಾಠಪ್ರವಚನ ಮಾಡುವುದರ ಮೇಲೆ ಶಾಲೆಯ ಗುಣಮಟ್ಟ ಇದೆ. ಇದನ್ನು ಪೋಷಕರು ಅರಿತು ಶಾಲೆಗಳನ್ನು ಆಯ್ಕೆಮಾಡಿಕೊಳ್ಳುವಂತೆ ಪೋಷಕರಿಗೆ ಸೂಚಿಸಿದರು.
 ಪ.ಪಂ ಸದಸ್ಯರಾದ ಸೈಯದ್ ಸೈಫುಲ್ಲಾ, ಭಾಗ್ಯಮ್ಮ,  ಶಾಲೆಯ ಅಧ್ಯಕ್ಷೆ ತಿಮ್ಮಾಜಮ್ಮ,  ಕಾರ್ಯದರ್ಶಿ ಚಿಕ್ಕಾಮಣ್ಣ, ಖಜಾಂಚಿ ಶಿಲ್ಪಾ, ಪದಾಧಿಕಾರಿಗಳಾದ ಆನಂದ್, ಉಪನ್ಯಾಸಕ ಅನುಪ್ರಸಾದ್, ಶಿಕ್ಷಕ ವೆಂಕಟೇಶ್ ಸೇರಿದಂತೆ ಇತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.