ತುಮಕೂರು

3250 ಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿಲ್ಲ: ಎಚ್ಕೆಪಿ

Published On :

ತುಮಕೂರು: ರಾಜ್ಯದ 3250 ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿಲ್ಲ. ಫ್ಲೋರೈಡ್, ಆರ್ಸೆನಿಕ್, ನೈಟ್ರೆಟ್ ಲವಣಾಂಶಗಳನ್ನೊಳಗೊಂಡ ಕುಡಿಯುವ ನೀರು ಸೇವನೆಯಿಂದ ಜನರ ಆರೋಗ್ಯ ಹದಗೆಟ್ಟಿದೆ ಎಂದು ಗ್ರಾಮೀಣಾಬಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಆತಂಕ ವ್ಯಕ್ತಪಡಿಸಿದರು. ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಆಯೋಜಿಸಲಾಗಿದ್ದ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಶುದ್ಧ ಕುಡಿಯುವ ನೀರು ಒದಗಿಸಲು ಸರ್ಕಾರ, ಜನಪ್ರತಿನಿಧಿಗಳು, ಆಡಳಿತಶಾಹಿಗಳಿಂದ ಮಾತ್ರ ಸಾಧ್ಯವಿಲ್ಲ. ಇದು ಜನಾಂದೋಲ ರೂಪ ಪಡೆಯಬೇಕು. ಇದರ ನೇತೃತ್ವವನ್ನು ಸಿದ್ಧಗಂಗಾ ಶ್ರೀಗಳು ವಹಿಸಬೇಕು ಎಂದು ಮನವಿ ಮಾಡಿದರು. ಆರ್ಥಿಕ ವ್ಯತ್ಯಾಸ, ಅಸಮಾನತೆಯಿಂದ ನಮ್ಮ ದೇಶದಲ್ಲಿ ಎರಡು ವರ್ಗ ನಿರ್ಮಾಣವಾಗಿದೆ. 15 ಕೊಟ್ಟು ನೀರು ಕುಡಿಯುವರಿದ್ದಾರೆ. ಅದರ ಜತೆಗೆ ಹಳ್ಳದ, ಬಾವಿ, ಕೆರೆಯ ಕಚ್ಚಾ ನೀರು ಕುಡಿಯುವ ಶ್ರಮಜೀವಿಗಳೂ ನಮ್ಮಲ್ಲಿದ್ದಾರೆ ಎಂದರು.
ತಂದೆಯನ್ನೇ ಕೊಂದ ಮಗ
ಕೋಟ: ಖರ್ಚಿಗೆ ಹಣ ನೀಡಲಿಲ್ಲವೆಂದು ತಂದೆಯನ್ನೇ ಯುವಕನೊಬ್ಬ ಇರಿದು ಕೊಂದ ಘಟನೆ ಇಲ್ಲಿನ ಹಾರ್ದಳ್ಳಿ -ಮಂಡಳ್ಳಿ ಗ್ರಾಮದ ಜವಳಿಜೆಡ್ಡು ಎಂಬಲ್ಲಿ ಗುರುವಾರ ನಡೆದಿದೆ. ಮೃತರನ್ನು ನಾರಾಯಣ (60) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ನರಸಿಂಹ ಎಂಬಾತನನ್ನು ಬಂಧಿಸಲಾಗಿದೆ. ನಿರುದ್ಯೋಗಿ ನರಸಿಂಹ ಕಳೆದ ಅನೇಕ ವರ್ಷಗಳಿಂದ ತಂದೆಯೊಂದಿಗೆ ಹಣಕ್ಕಾಗಿ ಜಮೀನಿನಲ್ಲಿ ಪಾಲಿಗಾಗಿ ಜಗಳವಾಡುತ್ತಿದ್ದ. ಬುಧವಾರ ರಾತ್ರಿಯೂ ಇದೇ ರೀತಿ ಜಗಳವಾಡಿದ್ದ. ನಂತರ ರಾತ್ರಿ 2 ಗಂಟೆಗೆ ಕತ್ತಿಯಿಂದ ತಂದೆಯ ಎದೆ, ಕಾಲು, ಹೊಟ್ಟೆ, ಬೆನ್ನಿಗೆ ಕೊಚ್ಚಿದ್ದಾನೆ. ತಂದೆ ಮುಂಜಾನೆ 4 ಗಂಟೆಗೆ ಪ್ರಾಣ ಕಳೆದುಕೊಂಡಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.