ತುಮಕೂರು

ಕುಡಿವ ನೀರು ಕಾಮಗಾರಿಗೆ ಅಡ್ಡಿ: ಆಕ್ರೋಶ

Published On :

ಪಾವಗಡ: ರಸ್ತೆ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಗೆ ರೈತರೊಬ್ಬರು ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಗ್ರಾಮದ ಸುತ್ತ ಬೇಲಿ ಹಾಕಿ ದಿಗ್ಬಂಧನ ವಿಧಿಸಿ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ತಾಲೂಕಿನ ಚನ್ನಮ್ಮರೆಡ್ಡಿ ಹಳ್ಳಿಯಲ್ಲಿ ನಡೆದಿದೆ.ತಾಲೂಕಿನ ದೊಮ್ಮತಮರಿ ಗ್ರಾಪಂ ವ್ಯಾಪ್ತಿಯ ಚನ್ನಮ್ಮರೆಡ್ಡಿ ಹಳ್ಳಿಯಲ್ಲಿ ಜಿಪಂ ಪ್ರಾಯೋಜಿತ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲು ರು. 4.50ಲಕ್ಷ ವೆಚ್ಚದ ಕಾಮಗಾರಿ ನಡೆಯುತ್ತಿದ್ದು, ಗ್ರಾಮದ ಹೊರ ವಲಯದಲ್ಲಿರುವ ಕೊಳವೆ ಬಾವಿಯಿಂದ ಪೈಪ್‌ಲೈನ್ ಮೂಲಕ ಗ್ರಾಮಕ್ಕೆ ನೀರು ಸರಬರಾಜು ಮಾಡಲು ಜೆಸಿಬಿಯಿಂದ ಕಾಲುವೆ ತೆಗೆಯುವ ಸಂದರ್ಭದಲ್ಲಿ ನಮ್ಮ ಜಮೀನಿನಲ್ಲಿ ಕಾಲುವೆ ತೆಗೆಯಬೇಡಿ ಎಂದು ಗ್ರಾಮದ ರೈತ ವೆಂಕಟೇಶಪ್ಪ ಎಂಬುವರು ಅಡ್ಡಿಪಡಿಸಿದ್ದು ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ನಕಾಶೆಯಲ್ಲಿರುವ ರಸ್ತೆ ಒತ್ತುವರಿ ಮಾಡಿಕೊಂಡು ಸಾರ್ವಜನಿಕರ ಓಡಾಡಟಕ್ಕೆ ತೊಂದರೆ ಪಡೆಸಿರುವುದಲ್ಲದೆ.  ಈಗ ಕುಡಿಯುವ ನೀರಿನ ಕಾಮಗಾರಿಗೂ ಅಡ್ಡಿಪಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಸಮಸ್ಯೆ ಇತ್ಯರ್ಥವಾಗುವವರೆಗೂ ಗ್ರಾಮದ ಜನತೆ ಹೊರಗಡೆ ಹೋಗಬಾರದು ಮತ್ತು ಹೊರಗಿನ ಜನತೆ ಗ್ರಾಮಕ್ಕೆ ಬರಬಾರದೆಂದು ಗ್ರಾಮದ ಸುತ್ತ ಸೀಮೆ ಜಾಲಿ ಬೇಲಿ ಹಾಕಿ ಪ್ರತಿಭಟಸಿದರು.
ಗ್ರಾಮಸ್ಥರಾದ ಪಾಪಣ್ಣ, ಅಂಜಿನಪ್ಪ, ಕೃಷ್ಣಪ್ಪ,ನಾಗೇಶಪ್ಪ, ಸಂಜೀವರಾಯಪ್ಪ, ಹನುಮಂತರಾಯಪ್ಪ, ಮೈಲಾರಪ್ಪ, ಹರೀಶ್, ಆನಂದ್ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು. ಪಿಎಸ್‌ಐ ಅಶೋಕ್ ಕುಮಾರ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.