'ಬದ್ಧತೆ, ಸಭ್ಯತೆ ಇಲ್ಲದಿದ್ದರೆ ಪ್ರಬುದ್ಧತೆ ಸಾಧ್ಯವಿಲ್ಲ'
ತಿಪಟೂರು: ಹನ್ನೆರಡನೆ ಶತಮಾನದ ಶರಣರಂತೆ ಶಿಶುನಾಳ ಶರೀಫರ ಚಿಂತನೆಗಳು ಕೂಡ ಎಲ್ಲಾ ಕಾಲ ಘಟ್ಟಗಳಲ್ಲಿಯೂ ಪ್ರಸ್ತುತವಾಗಿದ್ದು, ಅವರ ವಾಣಿಯಲ್ಲಿ ಸರ್ವಧರ್ಮಗಳಲ್ಲಿ ಸಮಾನತೆ, ಮೇಲು-ಕೀಳು ಬೇದ ಭಾವಗಳನ್ನು ಕಾಪಾಡಿಕೊಂಡು ಬಂದ ಸಂತರಾಗಿದ್ದಾರೆಂದು ಶಿಶುನಾಳ ಷರೀಫರ ತತ್ವ ಪ್ರಚಾರಕರಾದ ಎಂ.ಸಿ.ನರಸಿಂಹಮೂರ್ತಿ ತಿಳಿಸಿದರು.
ಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ 2ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಅವರು ವಿದ್ಯೆಯ ಜೊತೆಗೆ ವಿದ್ವತ್ತಿರಬೇಕು. ಬದ್ಧತೆ ಮತ್ತು ಸಭ್ಯತೆ ಇಲ್ಲದಿದ್ದರೆ ಪ್ರಭುದ್ಧತೆ ಬರಲು ಸಾಧ್ಯವಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಮಹನೀಯರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕೆಂದು ಕರೆ ನೀಡಿದರು. ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕರಾದ ಡಾ.ಕೆ.ಬಿ.ಸರಸ್ವತಿ ಮಾತನಾಡಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಬಡತನ, ನಿರುದ್ಯೋಗ, ತಾಂತ್ರಿಕತೆಯ ಕೊರತೆಯಿದ್ದರೂ ವಿದ್ಯಾಭ್ಯಾಸಕ್ಕೆ ಹೆಚ್ಚು ಆದ್ಯತೆ ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮೌಲ್ಯಯುತ ಶಿಕ್ಷಣ ಪಡೆಯಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಕೃತ ವಿದ್ವಾಂಸರದಾ ಡಿ.ಎಚ್.ಗಂಗಣ್ಣ ಮಾತನಾಡಿ ಇಂತಹ ಶಿಬಿರಗಳ ಮೂಲಕ ವಿದ್ಯಾರ್ಥಿಗಳು ಶಿಸ್ತು, ಸಂಯಮ, ಸಮಯ ಬದ್ಧತೆ ಜೊತೆಗೆ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ ಎಂದರು.
ಶಿಬಿರದಲ್ಲಿ ರಂಗಾಪುರ ಶಂಕರೇಶ್ವರ ಕೈಗಾರಿಕ ತರಬೇತಿ ಕೇಂದ್ರದ ಉಪನ್ಯಾಸಕ ಎಚ್.ಎಸ್.ಚಂದ್ರಶೇಖರ್, ತರಬೇತಿ ಅಧಿಕಾರಿ ಅಯಾಜ್ ಪಾಷಾ, ಗ್ರಾ.ಪಂ.ಸದಸ್ಯೆ ಕೆಂಪನಂಜಮ್ಮ, ತುಮಕೂರು ವಿವಿಯ ಸಮಾಜ ಕಾರ್ಯವಿಭಾಗದ ಶಶಿಕಾಂತ್ ರಾವ್, ಪೋಷಕರ ಸಂಘದ ಅಧ್ಯಕ್ಷ ಚಂದ್ರಶೇಖರಯ್ಯ ಬಿಲ್ಲೇಮನೆ, ಶಿಬಿರಾಧಿಕಾರಿಗಳಾದ ಕೆ.ವಿ.ನಾಗರಾಜು, ಡಾ.ಹೊನ್ನಾಂಜಿನಯ್ಯ, ಪ್ರೊ. ಜ್ಯೋತಿಕಿರಣ್, ಡಾ.ಎಲ್.ಎಂ.ವೆಂಕಟೇಶ್, ವಾತ್ಸಲ್ಯ ಮತ್ತಿತರರಿದ್ದರು. ಶಿಬಿರಾರ್ಥಿಗಳು ಶಂಕರೇಶ್ವರ ದೇವಾಲಯದ ಪಾರ್ಕ್, ರಂಗಾಪುರ ಮಠ, ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳ ಅವರಣ ಹಾಗೂ ಸಾರ್ವಜನಿಕ ಆಸ್ಪತ್ರೆಗಳ ಆವರಣಗಳನ್ನು ಸ್ವಚ್ಛಗೊಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

