ಅಪಹೃತರ ಕಪಿಮುಷ್ಟಿಯಿಂದ ಪಾರಾಗಿ ಬಂದ ವಿದ್ಯಾರ್ಥಿ
ಕುಣಿಗಲ್: ಸಮಯ ಪ್ರಜ್ಞೆ ಮೆರೆದ ವಿದ್ಯಾರ್ಥಿಯೊಬ್ಬ, ಅಪಹೃತರ ಕಪಿಮುಷ್ಟಿಯಿಂದ ಪಾರಾಗಿ ಬಂದಿರುವ ಘಟನೆ ಬೆಳಕಿಗೆ ಬಂದಿದೆ.
ಪಟ್ಟಣದ ಕುವೆಂಪುನಗರದಲ್ಲಿನ ಖಾಸಗಿ ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಸಂದೀಪ್ ಎಂಬಾತ, ಎಂದಿನಂತೆ ಶಾಲೆಗೆ ಸಮೀಪದ ತನ್ನ ಮನೆಯಿಂದ ಸೋಮವಾರ ಆಗಮಿಸುವಾಗ, ವಿಳಾಸ ಕೇಳುವ ನೆಪದಲ್ಲಿ ಮೂವರು ಅಪರಿಚಿತ ಯುವಕರು, ವಿದ್ಯಾರ್ಥಿಯನ್ನು ತಡೆದು, ಮತ್ತುಬರಿಸಿ, ವಾಹನವೊಂದರಲ್ಲಿ ವಿದ್ಯಾರ್ಥಿಯನ್ನು ಅಪಹರಿಸಿ, ತುಮಕೂರು ರಸ್ತೆಯ ದೊಡ್ಡಕೆರೆಯ ಏರಿ ಸಮೀಪದ ಪಕ್ಕದಲ್ಲಿನ ನಿರ್ಜನ ಪ್ರದೇಶವಾದ ಕಡೆತೆರಳಿ ವಾಹನ ನಿಲ್ಲಿಸಿದರು. ಎಲ್ಲಾ ದುಷ್ಕರ್ಮಿಗಳು ಮುಸುಕಿದಾರಿಗಳಾಗಿದ್ದುದು ವಿಶೇಷವಾಗಿತ್ತು.
ಪ್ರಜ್ಞೆ ಕಳೆದುಕೊಂಡಿದ್ದ ವಿದ್ಯಾರ್ಥಿ ವಾಹನ ನಿಂತಾಗ, ಎಚ್ಚರಗೊಂಡಿದ್ದು, ಅಪಹರಣಕಾರರು, ವಾಹನ ನಿಲ್ಲಿಸಿ, ಧೂಮಪಾನದಲ್ಲಿ ನಿರತರಾಗಿದ್ದಾಗ, ಸಮಯಪ್ರಜ್ಞೆ ಮೆರೆದ ಬಾಲಕ, ದುಷ್ಕರ್ಮಿಗಳ ಕಪಿಮುಷ್ಟಿಯಿಂದ ತಪ್ಪಿಸಿಕೊಂಡು, ಸಮೀಪದ ಮುಖ್ಯರಸ್ತೆಯಲ್ಲಿ ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿಗಳಿಗೆ ವಿಷಯ ತಿಳಿಸಿದ.
ವಿದ್ಯಾರ್ಥಿಗಳ ಮೊಬೈಲ್ನಿಂದ ಆಪಹೃತನ ತಂದೆಗೆ ಕರೆಮಾಡಿದ್ದು, ತಂದೆ ಪ್ರಕಾಶ್ ಗ್ರಾಮಾಂತರ ಪ್ರದೇಶದ ಖಾಸಗಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದು, ಸ್ಥಳಕ್ಕಾಗಮಿಸಿದರು.
ಈ ಮಧ್ಯೆ ದುಷ್ಕರ್ಮಿಗಳು ವಾಹನ ಸಮೇತ ಪರಾರಿಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿ ಹಾಗೂ ಪೋಷಕರು, ವಿಷಯವನ್ನು ಮಂಗಳವಾರ ಕುಣಿಗಲ್ ಪೊಲೀಸರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಪೊಲೀಸರು ವಿದ್ಯಾರ್ಥಿ ತಪ್ಪಿಸಿಕೊಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದ ಶುಕ್ರವಾರ ಪಟ್ಟಣದ ಬಿಜಿಎಸ್ ನಗರದಲ್ಲಿ ಶಿಶುವಿಹಾರಕ್ಕೆ ತೆರಳಿದ ಬಾಲಕ ಕಾಣೆಯಾದ ಪ್ರಕರಣದ ನಂತರ ವಿದ್ಯಾರ್ಥಿಯ ಅಪಹರಣ ಯತ್ನ ನಡೆದಿರುವುದು ನಾಗರಿಕರ ಆತಂಕಕ್ಕೆ ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

