ಸಾಹಿತ್ಯದ ಮೂಲಕ ಸಮನ್ವಯತೆ ಸಾರಿದವರು ಕುವೆಂಪು
ಹುಳಿಯಾರು: ಕನ್ನಡ ಸಾಹಿತ್ಯದಲ್ಲಿನ ಮಹಾನ್ ಸಾಹಿತಿಗಳಲ್ಲಿ ಒಬ್ಬರಾಗಿ, ನಮ್ಮ ನಾಡಿನ ಸಾಹಿತ್ಯ, ನುಡಿ ಬಗ್ಗೆ ತಮ್ಮ ಬರಹಗಳ ಮೂಲಕ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯತೆಯನ್ನು ಜನಸಾಮಾನ್ಯರಿಗೆ ಸಾರಿದರಲ್ಲದೆ, ಕನ್ನಡ ಭಾಷೆಗೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮಹಾನ್ ವ್ಯಕ್ತಿ ಕುವೆಂಪು ಅವರಾಗಿದ್ದಾರೆಂದು ನಿವೃತ್ತ ಶಿಕ್ಷಕ ಹಾಗೂ ಸಾಹಿತಿ ತ.ಶಿ.ಬಸವಮೂರ್ತಿ ಹೇಳಿದರು.
ಹುಳಿಯಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪಟ್ಟಣದ ವಿಜಯನಗರ ಬಡವಾಣೆಯಲ್ಲಿನ ನಿವೃತ್ತ ಶಿಕ್ಷಕ ಕೆ.ಲಿಂಗದೇವರು ಅವರ ನಿವಾಸದಲ್ಲಿ ಆಯೋಜಿಸಿದ್ದ ಮನೆಮನೆಗಳಲ್ಲಿ ಕನ್ನಡ ಕವಿಕಾವ್ಯಗೋಷ್ಠಿ ಪಾಕ್ಷಿಕ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ಅವರನ್ನು ಕುರಿತಂತೆ ವಿಶೇಷ ಉಪನ್ಯಾಸ ನೀಡಿದರು.
ಕುವೆಂಪು ಅವರು ಕನ್ನಡ ಭಾಷೆಯ ಹಿರಿಮೆಯನ್ನು ಎತ್ತಿಹಿಡಿದವರಾಗಿದ್ದರು. ವಿಶ್ವಕ್ಕೆ ವಿಶ್ವ ಮಾನವ ಸಂದೇಶವನ್ನು ಹಾಗೂ ಪಂಚಮಂತ್ರಗಳನ್ನು ಕುರಿತಂತೆ ತಿಳಿಸಿದರು. ಹೆತ್ತವರು ಹುಟ್ಟಿನಿಂದ ತಮ್ಮ ಮಗುವಿಗೆ ಜಾತಿ, ಮತ, ವರ್ಣಗಳ ಬಂಧನದ ಸಂಕೋಲೆಯಲ್ಲಿ ಬಂಧಿಸುವ ಬದಲು, ಇವುಗಳೆಲ್ಲವನ್ನು ತೊರೆದು, ನಮ್ಮ ನಾಡು, ನುಡಿ, ನಾವೆಲ್ಲ ಒಂದೇ ಎಂಬ ವಿಶಾಲ ಮನೋಭಾವವನ್ನು ಬೆಳೆಸುವಂತೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಸೂಡಿ ಸ.ಪ್ರೌ.ಶಾಲೆಯ ಶಿಕ್ಷಕ ಗಿರೀಶ್ ಮಾತನಾಡಿ, ಹೋಬಳಿ ಕಸಾಪ ಈ ರೀತಿಯ ಪಾಕ್ಷಿಕ ಕಾರ್ಯಕ್ರಮ ಮಾಡಿಕೊಂಡು ಸಾಗುತ್ತಿರುವುದು ಶ್ಲಾಘನೀಯ. ಇಂತಹ ಇನ್ನೂ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಕನ್ನಡ ಭಾಷೆಯ ಹಿರಿಮೆಯನ್ನು ನಮ್ಮ ನಾಡಿನ ಜನರಿಗೆ ತಿಳಿಸುವ ಕಾರ್ಯ ನಡೆಯಬೇಕು ಎಂದರು.
ಶಿಕ್ಷಕಿ ತೇಜಾವತಿ ಅವರು ಜಾನಪದ ಸಾಹಿತ್ಯದ ಹುಟ್ಟು, ಬೆಳವಣಿಗೆ ಬಗ್ಗೆ ತಿಳಿಸುತ್ತಾ ಜಾನಪದ ಗೀತೆಗಳನ್ನು ಹಾಡಿದರು. ಶಿಲ್ಪಾ ಹಾಗೂ ಐಶ್ವರ್ಯ ಪ್ರಾರ್ಥಿಸಿ, ಯಲ್ಲಪ್ಪ ನಿರೂಪಿಸಿ, ಕುಮಾರಸ್ವಾಮಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

