ತುಮಕೂರು

ಚಿ.ನಾ.ಹಳ್ಳಿ ತಾಪಂ ಪ್ರಭಾರ ಅಧ್ಯಕ್ಷರಾಗಿ ವಸಂತಯ್ಯ

Published On :

ಚಿ.ನಾ.ಹಳ್ಳಿ: ಹಾಲಿ ಅಧ್ಯಕ್ಷರ  ರಾಜಿನಾಮೆಯಿಂದಾಗಿ ತೆರವಾಗಿದ್ದ ತಾಲೂಕು ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಸ್ಥಾಯಿ ಸಮಿತಿ ಅಧ್ಯಕ್ಷ ವಸಂತಯ್ಯ ಆಯ್ಕೆಯಾಗಿದ್ದರೆ.
ಸೋಮವಾರ ಪಟ್ಟಣದ ತಾಪಂ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಚುನಾವಣೆ ನಡೆದು ನೂತನ ಅಧ್ಯಕ್ಷರು ಆಯ್ಕೆಯವರಗೆ ಕಚೇರಿಯ ಕೆಲಸ ಕಾರ್ಯಗಳಿಗೆ ತೊಂದರೆಯುಂಟಾಗದಂತೆ ಸರ್ಕಾರದ ನಿಯಾಮಾವಳಿ ಪ್ರಕಾರ ಅಧಿಕಾರ ಸ್ವೀಕರಿಸಿದ್ದೇನೆ. ನೂತನ ಅಧ್ಯಕ್ಷರ ಆಯ್ಕೆಯವರೆಗೆ ನಾನು ಜನಸಾಮನ್ಯರ ದಿನನಿತ್ಯದ ಕೆಲಸಗಳಿಗೆ ತೊಂದರೆಯಾಗದಂತೆ ಸಹಕಾರ ನೀಡುವುದಾಗಿ ನುಡಿದರು.
ಪದತ್ಯಾಗ ಮಾಡಿರುವ ಎಚ್.ಆರ್.ಶಶಿಧರ್ ಅವರು ಮಾತನಾಡಿ ಅಧಿಕಾರ ಹಂಚಿಕೆ ಸೂತ್ರದನ್ವಯ ಮುಂದಿನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸುಸೂತ್ರವಾಗಿ ನಡೆಯಲು ಅನುಕೂಲವಾಗುವಂತೆ ನಾನು ರಾಜಿನಾಮೆ ನೀಡಿದ್ದೇನೆ.ಇದರಲ್ಲಿ ಯಾರದು ಮತ್ತು ಯಾವುದೇ ರೀತಿಯ ಒತ್ತಡವಿಲ್ಲ.
ಬಿಜೆಪಿ ಜೊತೆ ಸೇರಿ ಅಧ್ಯಕ್ಷರಾಗಿ ಆಡಳಿತ ನಡೆಸಲು ಸಹಕರಿಸಿದ ತಾಲೂಕು ಪಂಚಾಯ್ತಿ ಎಲ್ಲಾ ಸದಸ್ಯರಿಗೂ ಮತ್ತು ಕಚೇರಿ ಸಿಬ್ಬಂದಿಗೂ ಧನ್ಯವಾದಗಳು. ಮುಂಬರುವ ಅಧ್ಯಕ್ಷರಿಗೂ ಇದೇ ರೀತಿ ಸಹಕಾರ ನೀಡಬೇಕೆಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಕೃಷ   ಾನಾಯ್ಕ್, ಕೆಂಕೆರೆ ನವೀನ್, ವಿಶ್ವೇಶ್ವರ, ಮಂಜುನಾಥ್  ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.