ಲೇಖಕಿಯರು ಉನ್ನತ ಸ್ಥಾನಕ್ಕೇರಲು ಸಮರ್ಥರು
ಕ.ಪ್ರ.ವಾರ್ತೆ ತುಮಕೂರು ಜ.6
ಕೇವಲ ಗೃಹಿಣಿಯರಾಗಿಯೇ ಇದ್ದ ಲೇಖಕಿಯರು ಇಂದು ಉನ್ನತ ಸ್ಥಾನಕ್ಕೇರಲು ಸಮರ್ಥರು ಎಂದು ಲೇಖಕಿ ಕಮಲಾ ಬಡ್ಡಿಹಳ್ಳಿ ಅಭಿಪ್ರಯಪಟ್ಟರು.
ನಗರದ ಕ್ಯಾತಸಂದ್ರದಲ್ಲಿನ ಕವಿತಾಕೃಷ ಸಾಹಿತ್ಯ ಮಂದಿರದಲ್ಲಿ ಮಹಿಳಾ ಮಕ್ಕಳ ಸಾಹಿತ್ಯಕೂಟ ಆಯೋಜಿಸಿದ್ದ ಕವಯತ್ರಿ ಉಮಾಶರ್ಮರ ಕೃತಿ ಚಿಣ ರ ಬಣ ದ ಲೋಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದು ಮಹಿಳೆ ಎಲ್ಲಾ ಕ್ಷೇತ್ರಗಳನ್ನು ವ್ಯಾಪಿಸಿಕೊಂಡು, ಅರ್ಥಪೂರ ಬದುಕನ್ನು ಸಾಗಿಸುತ್ತಿದ್ದಾರೆ. ಲೇಖಕಿಯಾಗಿ, ವಿಮರ್ಶಕಳಾಗಿ, ಸಂಶೋಧಕಳಾಗಿ ಸಾಹಿತ್ಯ ಕ್ಷೇತ್ರದಲ್ಲಿ ವಿರಾಜಿಸುತ್ತಿದ್ದಾಳೆ. ಸಾಧನೆಯ ಹಾದಿಯಲ್ಲಿ ಸಾಗಿ, ಮತ್ತಷ್ಟು ವ್ಯಾಪಕಸೇವೆ ಹಾಗೂ ಪರಿಶ್ರಮದಿಂದ ವಿಜೃಂಭಿಸಬೇಕಾಗಿದೆ ಎಂದು ನುಡಿದರು.
ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ನಾಟಕಕಾರ, ಕವಿ ವಿದ್ಯಾವಾಚಸ್ಪತಿ ಕವಿತಾಕೃಷ , ಹೆಣ ಾಗಲಿ, ಗಂಡಾಗಲಿ ಅರ್ಥಪೂರ ವಾಗಿ ಸಾಹಿತ್ಯ ಕೃಷಿಮಾಡಿ, ಋಷಿಗಳಾಗಿ ಬದುಕಬಹುದು. ಲೇಖಕಿಯರ ಸಾಧನೆ ಮೆಚ್ಚುವಂತಹದ್ದು. ಇಂದು ಬಹಳಷ್ಟು ಮಂದಿ ಕವಿತಾ ರಚನೆಗಷ್ಟೇ ತೃಪ್ತಿ ಪಟ್ಟುಕೊಂಡಿದ್ದಾರೆ, ಕತೆ, ಪ್ರಬಂಧ, ನಾಟಕ, ಸಂಶೋಧನೆಗೂ ಮುಂದಾಗಬೇಕು. ಕೇವಲ ಖುಷಿಯಿಂದ ಕಾವ್ಯ ಹುಟ್ಟದು, ಶೋಕವೂ ಶ್ಲೋಕವಾಗಬಲ್ಲದು ಎಂದು ಆದಿ ಕವಿ ವಾಲ್ಮೀಕಿ ತೋರಿಕೊಟ್ಟಿದ್ದಾನೆ. ಪದ್ಯ ಪ್ರಾಕಾರ ಹಿಂದೆ ಬಹು ಜನಪ್ರಿಯವಾಗಿತ್ತು. ಜಗತ್ತಿನಲ್ಲಿ ರಾಮಾಯಣವು ಒಂದು ಲಕ್ಷ ಬಗೆಯಲ್ಲಿ ಅವತರಣಿಕೆ ಕಂಡಿದೆ. ಉಮಾಶರ್ಮರು ಗೃಹಿಣಿಯಾಗಿ ಬಾಳಿನಲ್ಲಿ ಸಂತೃಪ್ತಿಪಟ್ಟು, ಇದೀಗ ಮಾಗಿದ ಮನದಿಂದ ಮಕ್ಕಳ ಸಾಹಿತ್ಯ ರಚನೆಗೆ ಮುಂದಾಗಿರುವುದು ಸ್ವಾಗತಾರ್ಹ ಸಂಗತಿ ಎಂದು ಶ್ಲಾಘಿಸಿದರು.
ಸಫಲ: ಕೃತಿ ಕುರಿತು ಲೇಖಕಿ ಪದ್ಮ ಕೃಷ ಮೂರ್ತಿ ಮಾತನಾಡಿ, ಉಮಾ ಅವರ ಬಣ ದ ಚಿಣ ರ ಲೋಕ ವರ ಮಯವಾಗಿದೆ, ಹತ್ತಾರು ವಿಷಯಗಳನ್ನು ಸರಳ ಸುಂದರವಾಗಿ, ಮಕ್ಕಳಿಗೆ ಪ್ರಿಯವಾಗುವಂತೆ ರಚಿಸುವಲ್ಲಿ ಸಫಲರಾಗಿದ್ದಾರೆ ಎಂದು ನುಡಿದರಲ್ಲದೆ ಕೆಲವು ಪದ್ಯಗಳನ್ನು ವಾಚಿಸಿ, ಪದ್ಯದ ಹಿರಿಮೆಯನ್ನು ಗುರುತಿಸಿದರು.
ಸಭೆಯನ್ನುದ್ದೇಶಿಸಿ ಮತನಾಡಿದ ಹಿರಿಯ ಕವಿ ಪೌಳಿಶಂಕರಾನಂದಪ್ಪ ವಿದೇಶಗಳಲ್ಲಿನ ಮಕ್ಕಳ ಸಾಹಿತ್ಯ ಕುರಿತು ಮಾತನಾಡಿದರೆ, ಮತ್ತೋರ್ವ ಅತಿಥಿ ಚಿರಂತನ ಬುಕ್ ಹೌಸ್ನ ಎ.ವಿ. ನಾಗರಾಜ ಯಾದವ್ ಮಾತನಾಡಿ, ಜಿಲ್ಲೆಯಲ್ಲಿ ಸಾಹಿತ್ಯ ವಿಪುಲವಾಗಿ ಬೆಳೆದಿದೆ. ಉತ್ತಮ ಕೃತಿ ಹೊರತರಲು ನಮ್ಮ ಪ್ರಕಾಶನ ಸಿದ್ಧವಾಗಿದೆ ಎಂದರು.
ಜಿಲ್ಲಾ ಕರವೇ ಅಧ್ಯಕ್ಷೆ ಸುನಿತಾಮೂರ್ತಿ ಮಾತನಾಡಿ ಕನ್ನಡ ರಕ್ಷಣೆಗೆ ಮುಂದಾಗುವ ಎಂದರು.
ಖ್ಯಾತ ಲೇಖಕರಾದ ಡಾ.ಕೆ.ಬಿ.ರಂಗಸ್ವಾಮಿ, ವಿದ್ವಾನ್ ಸವಣೂರು, ಕಲಾವಿದ ಚನ್ನಬಸಯ್ಯ ಗುಬ್ಬಿ, ಪಾವಗಡ ಸಣ ರಂಗಮ್ಮ, ನಾಗರತ್ನಕೃಷ , ವಾಜಿದ್ ಖಾನ್, ಕೃಷ ಮೂರ್ತಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

