ಒಕ್ಕಲಿಗರ ಸಂಘಕ್ಕೆ ಶಶಿ, ಬಾಬು ಆಯ್ಕೆ
ಕ.ಪ್ರ.ವಾರ್ತೆ ತುಮಕೂರು ಜ.6
ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಒಕ್ಕಲಿಗರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಶಶಿಕಿರಣ ಹಾಗೂ ನರೇಂದ್ರಬಾಬು ಆಯ್ಕೆಯಾಗಿದ್ದಾರೆ.
ತುಮಕೂರಿನ ಡಯಟ್ನಲ್ಲಿ ಸೋಮವಾರ ನಡೆದ ಮತಎಣಿಕೆಯಲ್ಲಿ ಶಶಿಕಿರಣ ಅವರು 6546 ಮತ ಹಾಗೂ ನರೇಂದ್ರಬಾಬು ಅವರು 6342 ಮತ ಪಡೆದು ನಿರ್ದೇಶಕರಾಗಿ ಆಯ್ಕೆಯಾದರು.
ಕೇಂದ್ರ ಒಕ್ಕಲಿಗರ ಸಂಘಕ್ಕೆ ತುಮಕೂರು ಜಿಲ್ಲೆಯಿಂದ ಇಬ್ಬರು ನಿರ್ದೇಶಕರು ಆಯ್ಕೆಯಾಗಲಿದ್ದು ಶಶಿಕಿರಣ್ ಮತ್ತು ನರೇಂದ್ರಬಾಬು ಆಯ್ಕೆಯಾಗುವ ಮೂಲಕ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಹಗ್ಗ ಜಗ್ಗಾಟಕ್ಕೆ ಕೊನೆ ಬಿದ್ದಿದೆ.
ಉಳಿದಂತೆ ಹನುಮಂತರಾಯಪ್ಪ 6035 ಮತ, ಜಗದೀಶ್ 6260 ಮತ, ಆಡಿಟರ್ ಯಲಚವಾಡಿ ನಾಗರಾಜ್ 4537 ಮತ, ಎಂ. ಕೃಷ ಮೂರ್ತಿ 333, ಪುಟ್ಟಸ್ವಾಮಿಗೌಡ 52, ಬ್ಯಾಟರಂಗೇಗೌಡ 938, ರಾಮಕೃಷ ಯ್ಯ 43, ರಂಗಸ್ವಾಮಿ 15, ಕೆ. ಹುಚ್ಚೇಗೌಡ 40, ಆರ್. ಹೇಮಚಂದ್ರ 146 ಮತ ಪಡೆದರು.
ಬೆಳಗ್ಗೆಯಿಂದ ಆರಂಭವಾದ ಮತಎಣಿಕೆ ರಾತ್ರಿ 7 ಗಂಟೆಗೆ ಮುಕ್ತಾಯವಾಯಿತು. ಕೊನೆ ಕ್ಷಣದವರೆಗೆ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಕಡೆಗೆ ಶಶಿಕಿರಣ ಮತ್ತು ನರೇಂದ್ರಬಾಬು ಆಯ್ಕೆಯಾದರು. ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಡಯಟ್ ಕೇಂದ್ರದ ಹೊರಗೆ ಸೇರಿದ್ದ ಅಪಾರ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದರು.
ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ಉಪನಿರ್ದೇಶಕ ಬಾಲಚಂದ್ರ ಶೇಖರ್ ಕಾರ್ಯ ನಿರ್ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

