ಜನರ ಸಮಸ್ಯೆಗಳ ಪರಿಹಾರವೇ ಸರ್ಕಾರದ ಆದ್ಯತೆಯಾಗಲಿ
ಕ.ಪ್ರ.ವಾರ್ತೆ ತುಮಕೂರು ಜ.6
ದುಡಿಯುವ ಜನರ ಸಮಸ್ಯೆಗಳ ಪರಿಹಾರವೇ ಸರ್ಕಾರದ ಆದ್ಯತೆಯಾಗಲಿ ಎಂದು ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಫೆಡರೇಷನ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಉಮೇಶ್ ಅಭಿಪ್ರಾಯಪಟ್ಟರು.
ಅವರು ತುಮಕೂರು ತಾಲೂಕು ಬೆಳ್ಳಾವಿಯಲ್ಲಿ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸಿಐಟಿಯು ವತಿಯಿಂದ ಕಟ್ಟಡ ಕಾರ್ಮಿಕರ ಸಮಾವೇಶ ಹಾಗೂ ಗುರುತು ಚೀಟಿ ಸಮಾರಂಭದಲ್ಲಿ ಮಾತನಾಡಿದರು.
ನಿರಂತರ ಬೆಲೆ ಏರಿಕೆ, ಭ್ರಷ್ಟಾಚಾರ, ರಾಷ್ಟ್ರೀಯ ಸಂಪತ್ತಿನ ಲೂಟಿಯಿಂದಾಗಿ ದುಡಿಯುವ ಜನರು ಅತ್ಯಂತ ಸಮಸ್ಯೆಗಳಿಗೆ ತುತ್ತಾಗಿ ತಮ್ಮ ಬದುಕುಗಳನ್ನು ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತಿದ್ದಾರೆ. ಆದ್ದರಿಂದ ದುಡಿಯುವ ಜನರ ಸಮಸ್ಯೆಗಳ ಪರಿಹಾರವೇ ಸರ್ಕಾರದ ಆದ್ಯತೆಯಾಗಬೇಕು ಎಂದರು.
ಖಾಯಂ ಉದ್ಯೋಗ ಸೃಷ್ಟಿ ಕಾರ್ಮಿಕ ಕಾನೂನುಗಳ ಜಾರಿಯ ಮೂಲಕವೇ ದೇಶದ ಅಭಿವೃದ್ಧಿಯನ್ನು ಕಾಣಬಹುದು. ಕಟ್ಟಡ ಕಾರ್ಮಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಬಲಿಷ್ಠ ಸಂಘಟನೆಗೆ ಶ್ರಮಿಸಬೇಕು. ಕಲ್ಯಾಣ ಮಂಡಳಿಯಿಂದ ದೊರೆಯುವ ಸೌಲಭ್ಯಗಳನ್ನು ಪಡೆಯಲು ಮುಂದಾಗಬೇಕು ಎಂದರು.
ಸಂಘದ ಉಪಾಧ್ಯಕ್ಷ ಶ್ರೀಧರ್ ಮುಖ್ಯ ಅತಿಥಿಯಾಗಿ ಮಾತನಾಡಿ ಕಟ್ಟಡ ಕಾರ್ಮಿಕರು ಸಂಘಟನಾಕಾರರನ್ನು ಅನುಮಾನದಿಂದ ನೋಡುವ ಬದಲು ಅವರು ಹೇಳುವ ವಿಚಾರಗಳನ್ನು ತಿಳಿದು ತಮ್ಮ ಬದುಕಿಗೆ ಉತ್ತಮವಾಗುವ ವಿಷಯಗಳನ್ನು ಅಳವಡಿಸಿಕೊಂಡು ಸಂಘಟಿತರಾಗಬೇಕಾಗಿರುವುದು ಇಂದು ಅತ್ಯಂತ ಮಹತ್ವದಾಗಿದೆ ಎಂದರು.
ಅರಿವನ್ನು ಹೆಚ್ಚಿಸಿಕೊಳ್ಳಿ: ತುಮಕೂರು ನಗರ ಉತ್ತರ ಶಾಖೆಯ ಕಾರ್ಯದರ್ಶಿ ರಾಮಚಂದ್ರ ಮಾತನಾಡಿ ಕಾರ್ಮಿಕರು ಸಂಘಟನೆಗಳ ಸಭೆಗಳಲ್ಲಿ ಹೆಚ್ಚು ಭಾಗವಹಿಸುವ ಮೂಲಕ ಸಮಾಜದಲ್ಲಿ ಬದಲಾಗುತ್ತಿರುವ ಸಂದರ್ಭದಲ್ಲಿ ತಾವುಗಳು ಅದರ ಫಲವನ್ನು ಪಡೆಯಲು ತಮ್ಮ ಅರಿವನ್ನು ಹೆಚ್ಚಿಸಿಕೊಳ್ಳುವ ದಿಕ್ಕಿನಲ್ಲಿ ಕಟ್ಟಡ ಕಾರ್ಮಿಕರು ಮುಂದಾಗಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆಯನ್ನು ಬೆಳ್ಳಾವಿ ಹೋಬಳಿ ಶಾಖಾ ಸಂಚಾಲಕ ಬಿ.ಟಿ. ಚಿಕ್ಕಣ ವಹಿಸಿದ್ದರು. ವೇದಿಕೆಯಲ್ಲಿ ಬೆಳ್ಳಾವಿ ಹೋಬಳಿ ಶಾಖೆಯ ಸಂಚಾಲಕ ಡಿ.ಪಿ.ಬಸವರಾಜು ಸುಗುಣ ಪೌಲ್ಟ್ರಿಫಾರ್ಮ ಕಾರ್ಮಿಕ ಸಂಘಟನೆಯ ಉಪಾಧ್ಯಕ್ಷ ನಂದೀಶಪ್ಪ, ರೈತ ಮುಖಂಡ ನಾಗರಾಜು, ಜಿಲ್ಲಾ ಮುಖಂಡರಾದ ತಿಮ್ಮೇಗೌಡ, ಲಕ್ಷ್ಮಣ್, ದೇವರಾಜು ಮತ್ತಿತರರು ಉಪಸ್ಥಿತರಿದ್ದರು. ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಗುರುತು ಚೀಟಿ ವಿತರಿಸಲಾಯಿತು. ಹೋಬಳಿ ಶಾಖೆಗೆ 23 ಸದಸ್ಯರನ್ನು ಒಳಗೊಂಡ ಸಂಘಟನಾ ಸಮಿತಿಯನ್ನು ಆಯ್ಕೆ ಮಾಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

