ಸೂಲಗಿತ್ತಿ ನರಸಮ್ಮಗೆ ವನಸಿರಿ ಪ್ರಶಸ್ತಿ
ತುಮಕೂರು: ಸೂಲಗಿತ್ತಿ ನರಸಮ್ಮ ಅವರಿಗೆ ವನಸಿರಿ ಪ್ರಶಸ್ತಿ ನೀಡಿ ಅಭಿನಂದಿಸುವ ಅವಕಾಶ ನನಗೆ ಸಿಕ್ಕಿರುವುದು ನನ್ನ ಪುನರ್ಜನ್ಮದ ಪುಣ್ಯ ಎಂದು ಹರಿಕಥಾ ವಿದ್ವಾನ್ ಲಕ್ಷ್ಮಣದಾಸ್ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಶಿವಶೈಕ್ಷಣಿಕ ಸೇವಾ ಆಶ್ರಮದಲ್ಲಿ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಸೂಲಗಿತ್ತಿ ನರಸಮ್ಮ ಅವರನ್ನು ಅಭಿನಂದಿಸಿ ಮಾತನಾಡಿದರು. ನೆಲಮೂಲ ಸಂಸ್ಕೃತಿಯಿಂದ ಇಡೀ ತನ್ನ ಜೀವಿತಾವಧಿಯನ್ನು ಹೆರಿಗೆ ಮಾಡಿಸುವ ಕಾಯಕಕ್ಕೆ ಮುಡುಪಾಗಿಟ್ಟ ಮಹಾಮಾತೆ ನರಸಮ್ಮನವರು ವನಮೂಲಿಕೆಗಳನ್ನು ಉಪಯೋಗಿಸಿ ಸಾವಿರಾರು ರೋಗಿಗಳಿಗೆ ಔಷಧಿ ನೀಡಿರುವುದು ಹೆಗ್ಗಳಿಕೆ ಎಂದರು.
ಆಸ್ಪತ್ರೆ ಇಲ್ಲದ ಕಾಲದಲ್ಲಿ ಆರೋಗ್ಯ ರಕ್ಷಣೆಯನ್ನು ಮಾಡಿರುವ ಮಹಾತಾಯಿಗೆ ಈ ಪ್ರಶಸ್ತಿ ನೀಡಿ ಅಭಿನಂದಿಸುವ ಕೆಲಸ ಸಿಕ್ಕಿರುವುದು ನನ್ನ ಪುಣ್ಯ ಎಂದರು.
ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ವೈ.ಎಚ್. ಹುಚ್ಚಯ್ಯ ಅವರು ಅಜ್ಜಿಯ ಬಗ್ಗೆ ಕವಿತಾಕೃಷ ಬರೆದಿರುವ ಪದ್ಯವನ್ನು ಓದಿ ಹೇಳಿ ಸೂಲಗಿತ್ತಿ ನರಸಮ್ಮನವರಿಗೆ ಈಗ 94 ವರ್ಷ. ನೂರು ವರ್ಷ ಅವರ ಅನನ್ಯ ಸೇವೆ ಇನ್ನೂ ಸಾವಿರಾರು ಜನರಿಗೆ ದೊರೆಯಲಿ ಎಂದರು.
ಶ್ರೀ ಶಿವಶೈಕ್ಷಣಿಕ ಸೇವಾ ಆಶ್ರಮವು ಇನ್ನೂ ಉನ್ನತ ಮಟ್ಟಕ್ಕೆ ಅಭಿವೃದ್ಧಿಯಾಗಲು ನನ್ನ ಎಲ್ಲಾ ಸಹಕಾರ ಇರುತ್ತದೆ. ಅನಾಥ ಮಕ್ಕಳಿಗೆ ಆಶ್ರಯ ನೀಡುತ್ತಾ ಇಂತಹ ಸಾಧಕರನ್ನು ಸನ್ಮಾನಿಸುತ್ತಿರುವುದು ಅನುಕರಣೀಯ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯೆ ರಾಧ ಕಲ್ಲಳ್ಳಿ ದೇವರಾಜ್ ಮಾತನಾಡಿ ಅಜ್ಜಿಯನ್ನು ನೋಡುವ ಸೌಭಾಗ್ಯ ನಮಗೆ ಸಿಕ್ಕಿರುವುದು ನಮ್ಮ ಅದೃಷ್ಟ ಎಂದು ಕೊಂಡಾಡಿದರು.
ಆಶ್ರಮದ ಮುಖ್ಯ ರೂವಾರಿ ಲೇಪಾಕ್ಷಯ್ಯ ಸ್ವಾಮಿ ಮಾತನಾಡಿ ಅಜ್ಜಿಯ ಪಾದಸ್ಪರ್ಶದಿಂದ ನಮ್ಮ ಆಶ್ರಮ ಪಾವನವಾಯಿತು. ಕಾರ್ಯಕ್ರಮದಲ್ಲಿ ಜವಾನ್ ಕೆಂಪಯ್ಯ ದಂಪ, ಸಂಜೀವಪ್ಪ, ಸೋಮಶೇಖರಯ್ಯ, ಮಾಜಿ ಸೈನಿಕರಾದ ದೊಡ್ಡರಾಮಯ್ಯ, ದೇವರಾಜು ವಂದಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕುಮುದ, ಆಶ್ರಮದ ಕಾರ್ಯದರ್ಶಿ ಲಕ್ಷ್ಮಮ್ಮ ಮುಂತಾದವರು ಹಾಜರಿದ್ದರು. ಕನ್ನಿಕಾ ಸ್ಕೂಲಿನ ವಿ.ಸಿ. ಕೃಷ ಮೂರ್ತಿ ನಿರೂಪಿಸಿದರು. ತಿಪ್ಪೇಸ್ವಾಮಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

