ತುಮಕೂರು

ಕನಸುಗಳು ನನಸಾಗಲು ಅವಕಾಶ, ಪ್ರೇರಣೆ ಅವಶ್ಯಕ

Published On :

ಕ.ಪ್ರ. ವಾರ್ತೆ ,  ತುಮಕೂರು ,  ಜ. 7
ಮಕ್ಕಳ ಪ್ರತಿಭೆಗಳು ಅರಳಲು ಪ್ರಜ್ಞಾವಂತ ಸಮಾಜದ ಪ್ರೋತ್ಸಾಹ ಮತ್ತು ಪ್ರೇರಣೆ ಅಗತ್ಯ ಎಂದು ಸ್ವಾಮಿ ವಿವೇಕಾನಂದ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಂಸ್ಥಾಪಕ ಕೆ.ಟಿ. ತಿಪ್ಪೇಸ್ವಾಮಿ ಹೇಳಿದರು.
ಅವರು ಕಳ್ಳಂಬೆಳ್ಳದ ಸ್ವಾಮಿ ವಿವೇಕಾನಂದ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಯೂಥ್ ಫಾರ್ ಸೇವಾ ಬೆಂಗಳೂರು ಹಾಗೂ ಸಿಸ್ಕೋ ಸಂಭ್ರಮ ತಂಡದ ಆಶ್ರಯದಲ್ಲಿ ಶಿರಾ ತಾಲೂಕು ತರೂರಿನಲ್ಲಿ ನಡೆದ ಚಿಗುರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಾಲ್ಯಾವಧಿಯಲ್ಲೆ ಮಕ್ಕಳು ತಮ್ಮ ಪ್ರತಿಭೆಯನ್ನು ಅಭಿವ್ಯಕ್ತಿಸಲು ಅವಕಾಶಗಳನ್ನು ನೀಡಿದ್ದೇ ಅದರೆ ಅವರು ತಮ್ಮ ಮುಂದಿನ ಕನಸುಗಳನ್ನು ಈಡೇರಿಸಿಕೊಳ್ಳಲು ಅಗತ್ಯವಾದ ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಮನೋಭಾವ ವೃದ್ಧಿಯಾಗುತ್ತದೆ ಎಂದರು.
ಅದರಲ್ಲೂ ಗ್ರಾಮೀಣ ಭಾಗದ ಮತ್ತು ಸೌಲಭ್ಯ ವಂಚಿತ ಮಕ್ಕಳಿಗೆ ಈ ರೀತಿಯ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕಿದೆ. ನಮ್ಮ ಈ ಪ್ರಯತ್ನಕ್ಕೆ ಸಹಕಾರ ನೀಡುವ ಮೂಲಕ ಶಿರಾ ತಾಲೂಕು ಮಕ್ಕಳ ಕನಸುಗಳಿಗೆ ಪ್ರೋತ್ಸಾಹ ನೀಡುತ್ತಿರುವ  ಯೂಥ್ ಫಾರ್ ಸೇವಾ ಮತ್ತು ಸಿಸ್ಕೋ ಸಂಭ್ರಮ ತಂಡದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಚಿತ್ರಕಲೆ, ಅಂಟು ಚಿತ್ರಣ, ಆಶುಭಾಷಣ, ಸಮೂಹ ಗೀತೆ, ಸಮೂಹ ನೃತ್ಯ, ಕಥೆ ಹೇಳುವುದು, ರಂಗೋಲಿ, ಪ್ರತಿಭಾ ಪ್ರದರ್ಶನ ಮುಂತಾದ ಸಾಂಸ್ಕೃತಿಕ ಸ್ಪರ್ಧೆಗಳನ್ನು
ಏರ್ಪಡಿಸಲಾಗಿತ್ತು. ಬ್ರಹ್ಮಸಂದ್ರ ವಿವೇಕ ಶೈಕ್ಷಣಿಕ ಸಂಪನ್ಮೂಲ ಕೇಂದ್ರದ ಮಕ್ಕಳು ನಡೆಸಿಕೊಟ್ಟ ಕಂಸಾಳೆ ಕಾರ್ಯಕ್ರಮ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಒಟ್ಟಾರೆ ಮಕ್ಕಳು ಕಾರ್ಯಕ್ರಮದಲ್ಲಿ ಹಾಡಿದರು, ಕುಣಿದರು, ಮಿಮಿಕ್ರಿ ಮಾಡಿ ನಕ್ಕರು ಮತ್ತು ನಗಿಸಿದರು, ಏಕಪಾತ್ರಾಭಿನಯದ ಮೂಲಕ ವೀರರನ್ನು ಸ್ಮರಿಸಿದರು, ಕನ್ನಡದ ಹಾಡುಗಳಿಗೆ ಹೆಜ್ಜೆಹಾಕಿ ತಮ್ಮ ಬದುಕಿನ ಕ್ಷಣಗಳನ್ನು ಸಂತಸವಾಗಿಸಿಕೊಂಡರಲ್ಲದೆ ನೆರೆದಿದ್ದವರೆಲ್ಲರ ಮನಸ್ಸಿಗೆ ರೋಮಾಂಚನವನ್ನುಂಟು ಮಾಡಿದರು.
ಸ್ಪರ್ಧೆಯ ನಂತರ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ಪ್ರಶಸ್ತಿ ಫಲಕಗಳನ್ನು ವಿತರಿಸಲಾಯಿತು. ಒಟ್ಟು ಶಿರಾ ತಾಲೂಕಿನ 14 ಹಳ್ಳಿಗಳ 230 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.
ಯೂಥ್  ಫಾರ್ ಸೇವಾ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ಲಕ್ಷ್ಮೀಕಾಂತ್ ಎನ್.ಆರ್, ಸಿಸ್ಕೋ ಸಂಭ್ರಮ
ತಂಡದ ಗೋವರ್ಧನ್, ಮಧುರ, ನಿತಿನ್, ಸಂದೀಪ್, ಉಪೇಂದ್ರ, ಸ್ವಾಮಿ ವಿವೇಕಾನಂದ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ರಮೇಶ್ ಬಾಬು, ಯೋಜನಾ ಸಂಯೋಜಕ ರಂಗರಾಜು, ವಿವೇಕಾ ಶೈಕ್ಷಣಿಕ ಸಂಪನ್ಮೂಲ ಕೇಂದ್ರಗಳ ಎಲ್ಲಾ ಶಿಕ್ಷಕರು, ಮಕ್ಕಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.