ನಮ್ಮ ಪೊಲೀಸರಿಂದ ಉತ್ತಮ ಸೇವೆ: ಜಾರ್ಜ್
ಪಾವಗಡ: ಕಾನೂನು ಸುವ್ಯವಸ್ಥೆ ಸೇರಿದಂತೆ ಅಪರಾಧ ಪತ್ತೆ ಹಾಗೂ ಶಾಂತಿ ಕಾಪಾಡುವಲ್ಲಿ ಇಡೀ ರಾಷ್ಟ್ರದಲ್ಲಿಯೇ ಕರ್ನಾಟಕ ಪೊಲೀಸ್ ಉತ್ತಮ ಕೆಲಸ ಮಾಡುತ್ತಿದೆ ಎಂದು ರಾಜ್ಯ ಗೃಹ ಸಚಿವ ಕೆ.ಜೆ.ಜಾರ್ಜ್ ಬಣ್ಣಿಸಿದರು.
ಪಾವಗಡದ ತಿರುಮಣಿಯಲ್ಲಿ ರು. 60 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಪೊಲೀಸ್ ಠಾಣೆ ಮತ್ತು ನೂತನ ಪೊಲೀಸ್ ವಸತಿ ಗೃಹ ಉದ್ಘಾಟನೆ ನೆರೆವೇರಿಸಿ ಗುರುವಾರ ಮಾತನಾಡಿದರು.
ಸಾರ್ವಜನಿಕರ ಸಹಕಾರದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಪೊಲೀಸ್ ಇಲಾಖೆ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು, ಅಪರಾಧ ಪತ್ತೆ ಹಚ್ಚುವಲ್ಲಿ ಸಾರ್ವಜನಿಕರು ಪೊಲೀಸರಿಗೆ ನೆರವಾಗಿ ಸಹಕರಿಸಬೇಕು ಎಂದರು.
ಶಾಸಕರ ಅನುದಾನದಲ್ಲಿ ಠಾಣೆಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದಾಗಿ ತಿಳಿಸಿದ ಶಾಸಕ ಕೆ.ಎಂ.ತಿಮ್ಮರಾಯಪ್ಪ ಅವರನ್ನು ಸಮಾರಂಭದಲ್ಲಿ ಅವರು ಅಭಿನಂದಿಸಿದರು.
ಸರ್ಕಾರ ಪಾರದರ್ಶಕ ಹಾಗೂ ಜನಪರ ಆಡಳಿತ ನೀಡುವ ಉದ್ದೇಶ ಹೊಂದಿದ್ದು, ಕಾನೂನು ಪಾಲಿಸುವ ವ್ಯಕ್ತಿಗಳನ್ನು ಠಾಣೆಗಳಲ್ಲಿ ಗೌರವಿಸುವ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ನಕ್ಸಲ್ ನಿಗ್ರಹ ದಳ ಸೇರಿದಂತೆ ತಾಲೂಕಿನ 4 ಪೊಲೀಸ್ ಠಾಣೆಗಳಿಗೆ ವಸತಿ ಗೃಹಗಳು ಮತ್ತು ಒಳ ಚರಂಡಿ ವ್ಯವಸ್ಥೆ ಬಗ್ಗೆ ಗೃಹ ಸಚಿವರ ಗಮನ ನೀಡಬೇಕು ಎಂದು ಮನವಿ ಮಾಡಿದರು. ಮಾಜಿ ಸಚಿವ ವೆಂಕಟರಮಣಪ್ಪ ಮಾತನಾಡಿದರು.
ಕೇಂದ್ರ ವಲಯ ಐಜಿಪಿ ಸಯಾದ್ಯ ಉಲ್ಪನ್ ಹುಸೇನ್,ಎಸ್ಪಿ ರಮಣಗುಪ್ತ,ಡಿಎಸ್ಪಿ ಶ್ರೀನಿವಾಸ್, ಗುರುಸ್ವಾಮಿ ಸಿಪಿಐ ಎಂ.ಎಂ.ಪಾಷ ಹಾಗೂ ಭಾನುಪ್ರಸಾದ್ ಸೇರಿದಂತೆ ಜಿಪಂ ಸದಸ್ಯರೀದ ಆರ್.ಸಿ.ಅಂಜಿನಪ್ಪ, ಎಚ್. ವಿ. ವೆಂಕಟೇಶ್, ತಾಪಂ ಅಧ್ಯಕ್ಷೆ ರಾಧರಾಜ್ಗೋಪಾಲ್ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

