ತುಮಕೂರು

ಅಹಿಂದ ಸಮಾವೇಶಕ್ಕೆ 10 ಸಾವಿರ ಜನ: ರವಿಕುಮಾರ್

Published On :

ಚಿಕ್ಕನಾಯಕನಹಳ್ಳಿ: ಹಿಂದುಳಿದ ಮತ್ತು ದಲಿತರ ಸ್ವಾಭಿಮಾನಿ ವೇದಿಕೆಯಾದ ಅಹಿಂದ ದಶಮಾನೋತ್ಸವ ಮತ್ತು ಜಾಗೃತಿ ಸಮಾವೇಶಕ್ಕೆ ತಾಲೂಕಿನಿಂದ ಹತ್ತು ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ಅಹಿಂದ ರಾಜ್ಯಸಮಿತಿ ಸದಸ್ಯ ಸಿ.ಎಲ್. ರವಿಕುಮಾರ್ ನುಡಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. 2002ರಲ್ಲಿ ಕೆಲವು ದೂರದೃಷ್ಟಿಯ ನಿವೃತ್ತ ಅಧಿಕಾರಿಗಳಿಂದ ಪ್ರಾರಂಭವಾದ ಈ ವೇದಿಕೆ ರಾಜ್ಯದಲ್ಲಿ  ಬೃಹತ್ತಾಗಿ ಬೆಳೆದು ದುರ್ಬಲರಿಗೆ ದನಿಯಾಗಿದೆ. ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಸಾವಿರಾರು ಕುಟುಂಬಗಳಿಗೆ ಇಂದು ಉಸಿರಾಗಿದೆ ಅಹಿಂದ. ಆದರೆ ಈ ಸಮಾವೇಶ ಬಲಾಢ್ಯ ವರ್ಗದ ವಿರುದ್ಧವಲ್ಲ, ನಮ್ಮ ನ್ಯಾಯಯುತವಾದ ಪಾಲನ್ನು ಪಡೆಯಲು ಸಂಘಟನೆ ಬಲಗೊಳ್ಳುವುದು ಅನಿವಾರ್ಯ. ಹಾಗಾಗಿ ಈ ನಿಟ್ಟಿನಲ್ಲಿ ನೆಲಮಂಗಲದ ಮಾದಾಪುರದ ಅಂತರಾಷ್ಟ್ರೀಯ ವಸ್ತುಪ್ರದರ್ಶನ ಸ್ಥಳದಲ್ಲಿ ಸಮಾವೇಶವನ್ನು ಏರ್ಪಡಿಸಲಾಗಿದೆ. ತಾಲೂಕಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಲಿದ್ದಾರೆ. ಸಮಾವೇಶಕ್ಕೆ ತೆರಳಲು ವಾಹನ ವ್ಯವಸ್ಥೆಯನ್ನು ಮಾಡಿಕೊಡಲು ಶಾಸಕರು ಒಪ್ಪಿದ್ದು, ಪ್ರತಿ ಹೋಬಳಿಗೆ 5ರಿಂದ6 ಬಸ್ಸುಗಳನ್ನು ಒದಗಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಪುರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್, ಸವಿತಾ ಸಮಾಜದ ಅಧ್ಯಕ್ಷಸುಪ್ರೀಂಸುಬ್ರಹ್ಮಣ್ಯ, ಕಲಾವಿದ ಸಿ.ಎಚ್. ಗಂಗಾಧರ್, ದೇವಾಂಗ ಸಮಾಜದ ಸಿ.ಕೆ.ಕೃಷ್ಣಮೂರ್ತಿ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.